ವಿಶೇಷ ಶಿಕ್ಷಣ ಕ್ಷೇತ್ರದಲ್ಲಿನ ಪ್ರಮುಖ ಮೈಲಿಗಲ್ಲುಗಳು
1. Scheme
of Integration Education for the Disabled Children (IEDC Scheme)
ನ್ಯೂನತೆವುಳ್ಳ
ಮಕ್ಕಳ ಸಮಗ್ರ ಶಿಕ್ಷಣ:
ಭಾರತದಲ್ಲಿ
ವಿಶೇಷ ಶಾಲೆಗಳು ನ್ಯೂನತೆವುಳ್ಳ ಮಕ್ಕಳ ಶಿಕ್ಷಣದಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ.
ಆದರೆ ಈ ಶಾಲೆಗಳು ವಿಶೇಷ ಅಗತ್ಯತೆವುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಋಣಾತ್ಮಕ ಪರಿಣಾಮವನ್ನು
ಬೀರಿ ಸಾಮಾನ್ಯ ಮಕ್ಕಳು ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳಲ್ಲಿ ಅಂತರ ಉಂಟುಮಾಡುತ್ತವೆ. ಸಮಗ್ರ ಶಿಕ್ಷಣದ
ಕಲ್ಪನೆ ಪ್ರಪಂಚದ್ಯಾಂತ ಪ್ರಚಲಿದಲ್ಲಿದೆ ಭಾರತದ ಸನ್ನಿವೇಶಕ್ಕೂ ಇದು ಅತಿ ಮುಖ್ಯವಾಗಿ ಅಗತ್ಯವಾಗಿದೆ.
ಇದಕ್ಕೆ ಕಾರಣ ಹಲವು – ಉತ್ತಮ ವ್ಯಾಪ್ತಿ, ಮಿತವ್ಯಯಕರ ಮತ್ತು ವಿಕಲಚೇತನ ಮಕ್ಕಳು ಸಾಮಾನ್ಯ ಮಕ್ಕಳ
ಜೋತೆ ಬೆಳೆಯಲು ಅವಕಾಶ ದೊರೆಯುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1974ರಲ್ಲಿ
IEDC ಯೋಜನೆ ಜಾರಿಗೆ ಬಂದಿತು.
IEDC ಯೋಜನೆ
ಪ್ರಾರಂಭವಾಗುವ ಮೊದಲು 1964ರಲ್ಲಿ ಭಾರತದ ಪ್ರಥಮ ಶಿಕ್ಷಣ ಆಯೋಗವಾದ ಕೋಠಾರಿ
ಆಯೋಗವು “ಇಲ್ಲಿಯವರೆಗೂ ಅತಿ ಕಡಿಮೆ ಪ್ರಮಾಣದಲ್ಲಿ ಈ ಕ್ಷೇತ್ರದಲ್ಲಿ ಕಾರ್ಯಗಳು
ನಡೆದಿವೆ. ಶೈಕ್ಷಣಿಕವಾಗಿ ಮುಂದುವರೆದಿರುವ ದೇಶಗಳಿಂದ ನಾವು ಈ ಸಂಬಂಧವಾಗಿ ವಿಷಯಗಳನ್ನು ಕಲಿಯಬೇಕಾಗಿದೆ” ಎಂದು
ತನ್ನ ‘Towards Equalization of Opportunity’ ಅಧ್ಯಾಯದಲ್ಲಿ ಅಭಿಪ್ರಾಯ ಪಟ್ಟಿದೆ.
1968ರ
ರಾಷ್ಟ್ರೀಯ ಶಿಕ್ಷಣ ನೀತಿಯು ಸಹ ದೈಹಿಕ ವಿಕಲತೆಯನ್ನು ಮತ್ತು ಬುದ್ದಿಮಾಂದ್ಯರಿಗೆ ಶಿಕ್ಷಣ ಸೇವೆಗಳನ್ನು
ವಿಸ್ತರಿಸಲು ಸೂಚಿಸಿದೆ. ಇದೆಲ್ಲದರ ಜೊತೆಗೆ ‘ಸಮಗ್ರ ಶಿಕ್ಷಣ’ ನೀಡುವುದರ ಮೂಲಕ ವಿಕಲಚೇತನರನ್ನು
ಸಾಮಾನ್ಯ ಶಾಲೆಗಳಲ್ಲಿ ಮುಖ್ಯವಾಹಿನಿಗೆ ತರುವ ಅಶಯವನ್ನು ಹೊಂದಿತ್ತು. 1968ರ
ರಾಷ್ಟ್ರೀಯ ಶಿಕ್ಷಣ ನೀತಿಯು ಬಂದ 6 ವರ್ಷಗಳ ನಂತರ ಭಾರತದಲ್ಲಿ IEDC
ಯೋಜನೆ ಜಾರಿಗೆ ಬಂದಿತು.
IEDC ಯೋಜನೆಯು
ಕೇಂದ್ರ ಸರ್ಕಾರ ಪ್ರಯೋಜಿತ ಯೋಜನೆಯಾಗಿದ್ದು, ಸಾಮಾನ್ಯ ಶಾಲೆಗಳಲ್ಲಿ ಎಲ್ಲಾ ವಿಕಲಚೇತನರಿಗೂ ಶಿಕ್ಷಣ
ಸೌಲಭ್ಯಗಳನ್ನು ನೀಡುವ ಗುರಿಯನ್ನು ಹೊಂದಿತ್ತು. ಮಕ್ಕಳು ವಿಶೇಷ ಶಾಲೆಗಳಿಂದ ಬರುವುದರಿಂದ ಅವರಲ್ಲಿ
ಭಾಷೆ ಮತ್ತು ದೈನಂದಿನ ಕಾರ್ಯಗಳನ್ನು ಮಾಡಿಕೊಳ್ಳುವ ಸಾಮಾರ್ಥ್ಯವನ್ನು ಗಳಿಸಿಕೊಂಡಿರುತ್ತಾರೆ. ಅದ್ದರಿಂದ
ಮಕ್ಕಳನ್ನು ಸುಲಭವಾಗಿ ಸಮನ್ವಯಗೊಳಿಸಬಹುದು ಎಂಬ ಆಶಯವನ್ನು ಈ ಯೋಜನೆ ಹೊಂದಿತ್ತು.
ಈ
ಯೋಜನೆಯು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಾಲಾಪೂರ್ವ ತರಬೇತಿ, ತಂದೆ-ತಾಯಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ,
ವಿಕಲಚೇತನ ಮಕ್ಕಳಿಗೆ ವಿಶೇಷ ತರಬೇತಿ, ದೃಷ್ಟಿದೋಷವುಳ್ಳವರಿಗೆ ಚಲನವಲನ ತರಬೇತಿ ನೀಡುವ ಕಾರ್ಯಕ್ರಮಗಳನ್ನು
ಹೊಂದಿತ್ತು. ಈ ಯೋಜನೆಯು ಸಂಪನ್ಮೂಲ ಶಿಕ್ಷಕರ ಭತ್ಯೆ, ವಿದ್ಯಾರ್ಥಿಗಳಿಗೆ ಊಟ-ವಸತಿ-ಸಾರಿಗೆ ಭತ್ಯೆ,
ವಾಚಕರ ಭತ್ಯೆ, ಸಾಧನ ಸಲಕರಣೆಗಳಿಗೆ ತಗಲುವ ವೆಚ್ಚ, ಸಮವಸ್ತ್ರ ಭತ್ಯೆ, ಕಟ್ಟಡಗಳನ್ನು ತಡೆರಹಿತಗೊಳಿಸಲು
ತಗಲುವ ವೆಚ್ಚ, ಶಾಲೆಗಳಲ್ಲಿ ಸಂಪನ್ಮೂಲ ಕೊಠಡಿಗಳನ್ನು ಒದಗಿಸುವುದು ಮುಂತಾದ ವೆಚ್ಚಗಳನ್ನು ಭರಿಸುತ್ತದೆ.
IEDC ಯೋಜನೆಯು
ಮೂರು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, 1992ರಲ್ಲಿ ಪರಿಷ್ಕೃತ ಯೋಜನೆ ಜಾರಿಗೆ
ಬಂದಿತು. ಈ ಯೋಜನೆಯ ಮೂಲಕ 28 ರಾಜ್ಯಗಳ 150,000ರಷ್ಟು ವಿಕಲಚೇತನ ಮಕ್ಕಳಿಗೆ ಶಿಕ್ಷಣ
ಸೌಲಭ್ಯಗಳನ್ನು ನೀಡಿತು. IEDC ಯೋಜನೆಯು ಶಿಕ್ಷಕರ, ಪೋಷಕರ, ಶೈಕ್ಷಣಿಕ ಆಡಳಿತ
ವರ್ಗದವರ ಮನೋಧೋರಣೆಯಲ್ಲಿ ಬದಲಾವಣೆಯನ್ನು ತರುವ ಮೂಲಕ ಕ್ರಾಂತಿಯನ್ನೇ ಮಾಡಿತು.
ಭಾರತ
ಸರ್ಕಾರವು ವಿವಿಧ ಯೋಜನೆ ಮತ್ತು ಕಾನೂನುಗಳನ್ನು ಜಾರಿಗೊಳಿಸುವ ಹಾಗೂ ಜಾಲ್ತಿಯಲ್ಲಿದ್ದ ಕಾಯ್ದೆಗಳಲ್ಲಿ
ಬದಲಾವಣೆಗಳನ್ನು ತರುವ ಮೂಲಕ ವಿಕಲಚೇತನರ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದಿತು.
- 1981ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು Assistance to Disabled Persons for Purchase/Fitting of Aids and Applains (ADIP) ಯೋಜನೆಯನ್ನು ಜಾರಿಗೆ ತಂದಿತು. ಇದರ ಮೂಲಕ ವಿಕಲಚೇತನ ವ್ಯಕ್ತಿಗಳಿಗೆ ಸಾಧನ-ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಮುಖ್ಯವಾಹಿನಿಯಲ್ಲಿ ಮಗು ಯಶಸ್ವಿಯಾಗಲು ಸಾಧನ-ಸಲಕರಣೆಗಳ ಅವಶ್ಯಕತೆಯನ್ನು ಮನಗಂಡು ಈ ಯೋಜನೆಯನ್ನು ಜಾರಿಗೆ ತರಲಾಯಿತು.
- ಆಕಸ್ಮಿಕವೆಂಬಂತೆ ವಿಶ್ವಸಂಸ್ಥೆಯು 1981ರ ಈ ವರ್ಷವನ್ನು International year of Disabled Persons (IYDP) ಎಂದು ಘೋಷಿಸಿತು.
- 1983-92ರ ದಶಕವನ್ನು ಸಂಯುಕ್ತ ಸಂಸ್ಥಾನಗಳ ಸಾಮಾನ್ಯ ಸಭೆ (UN General Assembly) ವಿಕಲಚೇತನರಿಗೆ ಮೀಸಲಿಡಲಾದ ದಶಕ ಎಂದು ಘೋಷಿಸಿತು. ಈ ದಶಕದಲ್ಲಿ ಭಾರತದಲ್ಲಿ ಹಲವಾರು ಯೋಜನೆಗಳು ಜಾರಿಗೆ ಬಂದವು.
ಮುಂದುವರೆಯುವುದು...
disable government scheme in Kannad
disable government scheme in Kannad