ವಿವಿಧ ರೀತಿಯ ಕಾರ್ಯಕ್ರಮಗಳಿಗಾಗಿ NHFDCಯ ಸಾಲ ಯೋಜನೆಗಳು
ನಿಗಮವು ಆದಾಯವನ್ನು ತರುವ ವ್ಯಾಪಕ ಶ್ರೇಣಿಯ ಹಲವಾರು ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತದೆ. ಕೆಳಸ್ತರದ ಆರ್ಥಿಕತೆಯನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಾಗ ಆ ವ್ಯಕ್ತಿಗಳ ಆದಾಯವನ್ನು ಕೆಳಸ್ತರದಿಂದ ಮೇಲಸ್ತರಕ್ಕೆ ತರುವ ರೀತಿಯಲ್ಲಿ ಯೋಜಿಸಿ ಸಲ್ಲಿಸಬೇಕು.
1.
ಸಣ್ಣ ವ್ಯವಹಾರ(ವ್ಯಾಪಾರ)ದಲ್ಲಿ ಸ್ವಯಂ ಉದ್ಯೋಗ - ಉದಾ: ಸೇವಾ ವಲಯ/ವ್ಯಾಪಾರ ವಲಯ
ಸೇವಾ ವಲಯ/ ವ್ಯಾಪಾರ ವಲಯಗಳಲ್ಲಿ ವಿಕಲಚೇತನರ ಸ್ವಯಂ ಉದ್ಯೋಗಕ್ಕಾಗಿ ಸಾಲವನ್ನು ಒದಗಿಸುತ್ತದೆ. ಯಾವ ಸಣ್ಣ ವ್ಯವಹಾರಕ್ಕಾಗಿ ಅರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಿರೊ, ಆ ಯೋಜನೆಯನ್ನು ಸ್ವತಃ ವಿಕಲಚೇತನ ವ್ಯಕ್ತಿಯೇ ನಿರ್ವಹಿಸಬೇಕು ಹಾಗೂ ತನ್ನ ವ್ಯವಹಾರಲ್ಲಿ ಕನಿಷ್ಟ ೧೫%ನಷ್ಟು ವಿಕಲಚೇತರಿಗೆ ಉದ್ಯೋಗವನ್ನು ನೀಡಬೇಕು.
ಈ ವಿಭಾಗದಲ್ಲಿ (ಸೆಕ್ಷನ್) ಗರಿಷ್ಠ ೨.೫೦ ಲಕ್ಷ ಸಾಲ ಲಭ್ಯವಿರುತ್ತದೆ.
ಯೋಜನೆ ಅಡಿಯಲ್ಲಿ ಸಾಲ ಲಭ್ಯವಿರುವ ಕ್ಷೇತ್ರಗಳು:
- ಯಾವುದೇ ವಿಧಧ ಅಂಗಡಿ ಮಳಿಗೆ
- ಕಾರ್ಯಾಗಾರಗಳು/ದುರಸ್ಥಿ/ಸೇವಾ ಕೇಂದ್ರಗಳು
- ಕಂಚಿನ ಕೆಲಸ
- ಆರೋಗ್ಯ ಕೇಂದ್ರಗಳು/ಬ್ಯೂಟಿ ಪಾರ್ಲರ್
- ಪ್ರಾನ್ ಚೈಸಿ
- ಕಂಪ್ಯೂಟರ್ ಕೇಂದ್ರಗಳು (ತರಬೇತಿ)
- ವಿಕಲಚೇತನರಿಗಾಗಿ ಶಾಲೆ
- ಸ್ಟೂಡಿಯೊ/ಫೋಟೊಗ್ರಫಿ
- ಮಗ್ಗೆ ಕೆಲಸ
- ಮುದ್ರಣ ಕೆಂದ್ರ
- ಬುಕ್ ಬೈಂಡಿಗ್
- ದೂರವಾಣಿ/ಪ್ಯಾಕ್ಸ್/ಇ-ಮೇಲ್ ಬೂತ್ಗಳು
- ಚರ್ಮದ ಕೆಲಸ
- ಬಟ್ಟೆಹೊಲಿಗೆ
- ಫಿಸಿಯೊಥೆರಪಿ
- ಟ್ರಾವಲ್ ಏಜೆನ್ಸಿ
- ಸಂಗೀತ ಶಾಲೆಗಳು
- ಜರಾಕ್ಸ್ ಕೇಂದ್ರ
- ಕಂಪ್ಯೂಟರ್ ಯಂತ್ರಾಂಶಗಳ ಡಿಲರ್ಶಿಪ್
- ಸರಕು ಸಾಗಣೆ ಸೇವಾಕೇಂದ್ರ
- ಪೆಟ್ರೋಲ್ ಉತ್ಪನ್ನಗಳ ಡಿಲರ್ಶಿಪ್
- ಹೈನುಗಾರಿಕೆ
- ಮೇಣದ ಬತ್ತಿ ಮತ್ತು ಸೀಮೆ ಸುಣ್ಣ ತಯಾರಿಸುವುದು
- ಬುಕ್ ಬೈಂಡಿಗ್
2. ವಿಕಲಚೇತನರ ಉದ್ಯಮಗಳಿಗೆ ಸಹಾಯ:
ಉತ್ಪಾದನೆ, ಬಟ್ಟೆ ತಯಾರಿಕೆ ಮತ್ತು ಇತರೆ ಉತ್ಪಾದಾನ ಚಟುವಟಿಕೆಗಳಿಗೆ ಸಾಲವನ್ನು ನೀಡಲಾಗುತ್ತದೆ. ವಿಕಲಚೇತನ ವ್ಯಕ್ತಿಯು ಈ ಉದ್ಯಮ ಮಾಲೀಕನಾಗಿಬೇಕು/ ಮುಖ್ಯ ಕಾರ್ಯಾನಿರ್ವಾಹಕನಾಗಿರಬೇಕು ಮತ್ತು ಕನಿಷ್ಠ ೧೫% ನಷ್ಟು ವಿಕಲಚೇತನ ವ್ಯಕ್ತಿಗಳಿಗೆ ಉದ್ಯೋಗ ನೀಡಬೇಕು. ಈ ವಿಭಾಗದಲ್ಲಿ (ಸೆಕ್ಷನ್) ಗರಿಷ್ಠ ೨೦.೦೦ ಲಕ್ಷ ಸಾಲ ಲಭ್ಯವಿರುತ್ತದೆ.
ಯೋಜನೆ ಅಡಿಯಲ್ಲಿ ಸಾಲ ಲಭ್ಯವಿರುವ ಕ್ಷೇತ್ರಗಳು:
- ಉತ್ಪನ್ನಗಳನ್ನು ಉತ್ಪಾದಿಸುವುದು
- ಮತ್ಸೋತ್ಪಾದನೆ
- ಸಾಪ್ಟವೇರ್ಗಳನ್ನು ಅಭಿವೃದ್ಧಿಪಡಿಸುವುದು & ಮಾರುವುದು
- ಪೀಠೋಪಕರಣಗಳನ್ನು ಉತ್ಪಾದಿಸುವುದು
- ಡೈರಿ ನಡೆಸುವುದು
- ಆಹಾರ ಸಂಸ್ಕರಣೆ
- ಬಟ್ಟೆ ಉತ್ಪಾದನೆ
- ಮಡಿಕೆ ತಯಾರಿಕೆ
- ವಜ್ರ ಕತ್ತಿಸುವುದು ಮತ್ತು ಪಾಲಿಶ್ ಮಾಡುವುದು
- ಪ್ಲಾಸ್ಟಿಕ್ ಮೌಲ್ಡ್ ಸಿದ್ದಪಡಿಸುವುದು
- ಕೃಷಿಗೆ ಆಧಾರಿತ ಕೈಗಾರಿಕೆ
- ನೈಸರ್ಗಿಕ ಉತ್ಪನ್ನಗಳು
- ಪ್ಯಾಕಿಂಗ್
3.
ವಿಕಲಚೇತನರ ಉನ್ನತ ಶಿಕ್ಷಣಕ್ಕೆ ಸಹಾಯ:
ವಿಕಲಚೇತನ ವ್ಯಕ್ತಿಗಳ ಅಭಿವೃದ್ಧಿ ಮತ್ತು ಪುರ್ನವಸತಿಯ ಎಲ್ಲಾ ಉದ್ದೇಶಗಳನ್ನು ಪೂರ್ಣಗೊಳಿಸುವ ದಿಸೆಯಲ್ಲಿ ನಿಗಮವು ಅರ್ಹ ಫಲಾನುಭವಿಗಳ ಶಿಕ್ಷಣ/ತರಬೇತಿಗಾಗಿ ಅನುದಾನ ಮತ್ತು ಸಾಲವನ್ನು ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡುತ್ತಿದೆ. (In
pursuance of objective (5) & (6) of MOA)..
ವಿಕಲಚೇತನ ವ್ಯಕ್ತಿಗಳ ಔಪಚಾರಿಕ ಮತ್ತು ಔಪಚಾರಿಕವಲ್ಲದ ಎರಡು ರೀತಿಯ ಶಿಕ್ಷಣ/ತರಬೇತಿಗಳಿಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ನಿಗಮವು ಒದಗಿಸುತ್ತದೆ. ಔಪಚಾರಿಕ ತರಬೇತಿಯಿಂದ ಫಲಾನುಭವಿಯು ಸೂಕ್ತವಾದ ಶೈಕ್ಷಣಿಕ/ಔದ್ಯೋಗಿಕ ತರಬೇತಿಯಿಂದ ತನ್ನ ಉದ್ಯೋಗ ಅವಕಾಶ ಮತ್ತು ಸ್ವಯಂ-ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಬೇಕು. ಉನ್ನತ ಶಿಕ್ಷಣ ಪಡೆದ ಆಭ್ಯರ್ಥಿಯು ಸಾಲಕ್ಕೆ ಯೋಗ್ಯನಾದರೆ, ಡಿಪ್ಲಮಾ ಮತ್ತು ಸರ್ಟಿಫಿಕೆಟ್ಗಳನ್ನು ಪಡೆದ ಆಭ್ಯರ್ಥಿಯು ಅನುದಾನವನ್ನು ಪಡೆಯಲು ಯೋಗ್ಯನಾಗಿರುತ್ತಾನೆ. ಫಲಾನುಭವಿಯ ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ಸೌಲಭ್ಯದ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುತ್ತದೆ, ಉಳಿದಂತೆ ಇತರೆ ಯಾವುದೇ ಉದ್ದೇಶಗಳ ವೆಚ್ಚವನ್ನು ಪರಿಗಣಿಸುವುದಿಲ್ಲ.
ಮುಂದುವರೆಯುವುದು…
No comments:
Post a Comment