ವಿಕಲಚೇತನರು
ಮತ್ತು ಮಾನವ ಹಕ್ಕುಗಳು
ಭಾಗ-೨
ಸ್ವತಂತ್ರ ಭಾರತ
ಭಾರತ ಸಂವಿಧಾನಕ್ಕೆ ಪ್ರಸ್ತಾವನೆಯಲ್ಲಿ
ಆಡಳಿತದ ತತ್ವ ಮತ್ತು ರಚನೆಯ ಬಗ್ಗೆ ವಿವರಿಸು ವೇಳೆಯಲ್ಲಿ “ …. ಅದರ ಸಮಸ್ತ ಪ್ರಜೆಗಳಿಗೆ, ಸಾಮಾಜಿಕ
ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ ಮತ್ತು ಅಭಿವ್ಯಕ್ತಿ ನಂಬಿಕೆ, ಧರ್ಮ ಅವಲಂಬನೆ ಮತ್ತು ಪೂಜಿಸುವ
ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯು ಸರ್ವರಿಗೂ ದೊರೆಯುವಂತೆ ಮಾಡುವುದಕ್ಕೆ,
ವ್ಯಕ್ತಿಗೌರ, ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ರಕ್ಷಿಸಿ,….” ಎಂದು ದೃಢವಾಗಿ ಹೇಳಿದೆ.
ಸಮಾನತೆ:
ಭಾರತ ಸಂವಿಧಾನವು ಕಾನೂನು ಮತ್ತು ಸಮಾನ ರಕ್ಷಣೆ (14ನೇ ಕಲಂ)ಗಿಂತಲೂ ಮೊದಲೆ
ಸಮಾನತೆಯ ಹಕ್ಕಿನಡಿಯಲ್ಲಿ ತನ್ನ ಪ್ರಜೆಗಳಿಗೆಲ್ಲರಿಗೂ ಸಮಾನತೆಯ ಖಾತರಿಗೊಳಿಸಿದೆ. ಅಂತೆಯೇ, ನೈಜ
ಸಮಾನತೆಯನ್ನು ನೀಡುವ ಸಲುವಾಗಿ - ಧರ್ಮ, ಜನಾಂಗ,
ಜಾತಿ, ಲಿಂಗ ಹುಟ್ಟಿದ ಸ್ಥಳ ಅಥವ ಇನ್ಯಾವುದೇ ಕಾರಣದ ನೆಲೆಯಿಂದ ಬೇಧ ಬಾವ ಮಾಡುವುದನ್ನು ಪ್ರತಿಬಂದಿಸಿದೆ
(15 ಮತ್ತು 16 ನೇ ಕಲಂ). ಇದಲ್ಲದೆ ಉತ್ಪಾದನೆಯಲ್ಲಿ ಸಮಾನತೆಯನ್ನು ತರಲು, ಭಾರತೀಯ ಸಂವಿಧಾನದ ಕಲಂ
16 (3 & 4)ರಲ್ಲಿ ರಾಜ್ಯಗಳು ..... ಕಾನೂನನ್ನು ರಚಿಸಿ, ನೇಮಕಾತಿಯಲ್ಲಿ ಮತ್ತು ಹುದ್ದೆಯಲ್ಲಿ
ಯಾವುದಾದರೂ ಹಿಂದುಳಿದ ವರ್ಗದ ನಾಗರೀಕರಿಗೆ ಮಿಸಲಾತಿಯ ಅವಕಾಶವನ್ನು ನೀಡಬೇಕು …… ಎಂದು ಹೇಳಿದೆ.
ಸಾರ್ವಜನಿಕ ಕಛೇರಿಗಳಗೆ ಮಿಸಲಾತಿ ಅಡಿಯಲ್ಲಿ ನೇಮಕಾತಿ ಮಾಡುವ ಪರಿಕಲ್ಪನೆಗೆ
ಮಿಶ್ರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪರಿಕಲ್ಪನೆಯನ್ನು ಕಾನೂನು ರೀತಿಯಿಂದ ಮಾತ್ರ ನೋಡದೆ
ಸಮಾನತೆಯ ಹಕ್ಕಿನ ದೃಷ್ಟಿಯಿಂದ ನೋಡಬೇಕು. ಈ ವಿವಾದಕ್ಕೆ ಸಂಬಂದಿಸಿದಂತೆ, ಇಂದ್ರ ಸವ್ನಿ (Indra Sawhney)
v/s union of India 1992 supp (3) SCC” ನ್ಯಾಯಾಲಯದ ತೀರ್ಪು ಪ್ರಮುಖವಾಗಿದೆ. ಈ ಪ್ರಕರಣ ಒಂದು ನಿರ್ದಿಷ್ಟ ಪ್ರಮುಖ್ಯತೆಯನ್ನು
ಹೊಂದಿದೆ ಮತ್ತು ಅಂಗವಿಕಲತೆಯ ದೃಷ್ಟಿಯಿಂದಲೂ ಮಹತ್ವದಾಗಿದೆ. ಉಚ್ಚ ನ್ಯಾಯಾಲಯವು ಅಂಗವಿಕಲರ ಪರವಾಗಿ
ಮೀಸಲಾತಿಯನ್ನು ಪರಾಮರ್ಶಿಸಿ, ಸಂವಿಧಾನದ ಕಲಂ 16ಕ್ಕೆ ಸ್ಪಷ್ಟವಾಗಿ ಸೇರದ ಅಂಗವಿಕಲರ ಪರವಾಗಿ ಮೀಸಲಾತಿಯನ್ನು
ನೀಡಿದೆ. ನ್ಯಾಯಲಯವು “... ಕೇವಲ ಔಪಚಾರಿಕ ಹಕ್ಕುಗಳ ಘೋಷಣೆಗಳು ಅಸಮಾನತೆಯನ್ನು ಹೊಂದಿರುವವರನ್ನು
ಸಮಾನರನ್ನಾಗಿ ಮಾಡುವುದಿಲ್ಲ. ಪ್ರತಿಯೊಬ್ಬರು
ಪರಸ್ಪರ ಒಂದು ಸಮಾನ ನೆಲೆಯಲ್ಲಿ ಸ್ಪರ್ಧಿಸಲು ಸಮರ್ಥಗೊಳಿಸಲು, ಅನಾನೂಕೂಲ ಸ್ಥಿತಿಯ ಮತ್ತು
ಅಂಗವಿಕಲರನ್ನು ಭಾಗ್ಯಶಾಲಿ ಅನೂಕೂಲವಂತರ ಮಟ್ಟಕ್ಕೆ ಮೇಲೆತ್ತಲು ಅಗತ್ಯವಾದ ಧನಾತ್ಮಕ ಕ್ರಮಗಳನ್ನು
ಕೈಗೊಳ್ಳಬೇಕು. ಕಲಂ 14 ಮತ್ತು 16(1) ನಿಸಂಶಯವಾಗಿ ಅನಾನೂಕೂಲ
ಹೊಂದಿರುವವರಿಗೆ ನಿಜವಾದ ಸಮಾನತೆಯನ್ನು ಬರವಸೆಯನ್ನು ನೀಡುತ್ತವೆ.
ಶಾಸಕಾಂಗ ಮತ್ತು ಭಾರತೀಯ ನ್ಯಾಯಾಂಗ ಅನಾನೂಕೂಲ ಹೊಂದಿರುವವರಿಗೆ ಸಮಾನತೆ
ನೀಡಲು ವಿಶೇಷ ಕ್ರಮಗಳನ್ನು ಪರಿಚಯಿಸಿರುವುದನ್ನು ಸರ್ಮಥಿಸಿಕೊಂಡಿವೆ. Dr.
Jagadish Saran & Ors. Vs. Union of India, Supreme court cases 1980, 2SCC
768, ಮೊಕದ್ದಮೆಯಲ್ಲಿ,
ನ್ಯಾಯಮೂರ್ತಿ ಕೃಷ್ಣ ಐಯರ್ ಹೇಳಿರುವಂತೆ, ಕಲಂ 15(3) ಮತ್ತು (4) ಹೊರತಾಗಿಯೂ, ವಿಕಲಚೇತನರಿಗೆ ಸಮಾನತೆಯನ್ನು
ನೀಡುವುದರಿಂದ ಸಮಾನತೆಯನ್ನು ಉಪೇಕ್ಷೆ ಮಾಡುದಂತಾಗಲಿ ಅಥವಾ ಕಡೆಗಾಣಿಸಿದಂತಾಗಲಿ ಆಗುವುದಿಲ್ಲ ಎಂದಿದ್ದಾರೆ.(ಪೂರ್ಣ
ಪಾಠವನ್ನು ಸಂಬಂಧಿಸಿದ ಪ್ರಕರಣದಿಂದ ಪಡೆದುಕೊಳ್ಳುವುದು. ಇದು ಕೇವಲ ಭಾವಾನುವಾದ)
ತಾರತಮ್ಯ
ಮಾಡುವುದು:
ಭಾರತ ಸಂವಿಧಾನದ 15 ಮತ್ತು 16ನೇ ಕಲಂಗಳು ಉದ್ಯೋಗ ಮತ್ತು ಸಾರ್ವಜನಿಕ ಸೌಲಭ್ಯಗಳನ್ನು
ಬಳಸಿಕೊಳ್ಳುವಾಗ ಧಾರ್ಮಿಕ, ಜನಾಂಗ, ಜಾತಿ, ಲಿಂಗ ಮತ್ತು ಹುಟ್ಟಿದ ಸ್ಥಳಗಳ ಆಧಾರದ ಮೇಲೆ ತಾರತಮ್ಯ
ಮಾಡಬಾರದು ಎಂದು ಹೇಳಿದೆ. ಆದರೆ, ವಿಕಲತೆಯ ಆಧಾರದ ಮೇಲೆ ತಾರತಮ್ಯ ಮಾಡುವುದರ ಬಗ್ಗೆ ಮೌನ ತಳೆದಿದೆ.
ವಾಸ್ತವವಾಗಿ, 1995ರವರೆಗೂ ಸೇವಾ ನಿಯಮಗಳಲ್ಲಿ ವಿಕಲಚೇತನರಿಗೆ ಉನ್ನತ ದರ್ಜೆಯ ಹುದ್ದೆಗಳಿಗೆ ಪ್ರವೇಶವೆ
ಇರಲಿಲ್ಲ. ಈ ನಿಯಮವನ್ನು ಬಳಸಿಕೊಂಡು ಪ್ರಾಧಿಕಾರವು, ಉದ್ಯೋಗಿಗಳನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣವನ್ನು
ಒಡ್ಡಿ ಮುಂಚಿತವಾಗಿ ನಿವೃತ್ತಿಯನ್ನು ಪಡೆದುಕೊಳ್ಳುವಂತೆ ಬಲವಂತಪಡಿಸುತ್ತಿದ್ದರು. ಕೆಲವೊಂಮ್ಮೆ ಸೇವೆಯಲ್ಲಿರುವಾಗಲೇ
ವಿಕಲತೆಯನ್ನು ಹೊಂದಿದವರಿಗೆ ಕೆಲಸದಿಂದ ನಿವೃತ್ತಿಯನ್ನು ಪಡೆಯುವಂತೆ ಪೀಡಿಸುತ್ತಿದ್ದರು ಅಥವಾ ಅವರ
ದರ್ಜೆಯನ್ನು ಕಡಿಮೆ ಮಾಡುತ್ತಿದ್ದರು. ಹೀಗೆ ಅವರ ವೃತ್ತಿ ಜೀವನವನ್ನು ಅಂತ್ಯಗೊಳಿಸುತ್ತಿದ್ದರು.
ವಿಕಲತೆ
ಆಧಾರಿತ ತಾರತಮ್ಯಕ್ಕೆ ಔಪಚಾರಿಕವಾಗಿ ಗುರುತಿಸಲ್ಪಡೆದೆ ಇದ್ದರು, ಭಾರತೀಯ ನ್ಯಾಯಾಂಗವು ಸ್ಪಷ್ಟವಾಗಿ
ತಾರತಮ್ಯದ ವಿರುದ್ಧ ಹಲವಾರು ಕ್ರಮಗಳನ್ನು ತದ್ದಿದೆ. ವಿಶೇಷವಾಗಿ ಸರ್ಕಾರಿ ಹುದ್ದೆಗಳಿಗೆ ದೈಹಿಕ
ಅರ್ಹತೆಯ ಮಾನದಂಡವನ್ನು ಮುಂದಿರಿಸಿ ವಿಕಲತೆಯತೆಯನ್ನು ಹೊಂದಿರುವ ವ್ಯಕ್ತಿಯನ್ನು ಅನರ್ಹಗೊಳಿಸಲಾಗುತ್ತಿತ್ತು.
Nandakumar Narayanarao Ghodmare vs. State of Maharashtra and Ors. (1995 Vol.6,
Supreme Court Case 720) ಪ್ರಕರಣದಲ್ಲಿ ವರ್ಣಾಂಧತೆಯ ಕಾರಣವನ್ನೊಡ್ಡಿ ಅಭ್ಯರ್ಥಿಯನ್ನು ತಿರಸ್ಕರಿಸಲಾಗಿತ್ತು.
35 ಹುದ್ದೆಗಳಲ್ಲಿ ಕೇವಲ 5 ಹುದ್ದೆಗಳಿಗೆ ಮಾತ್ರ ಸ್ಪಷ್ಟ ದೃಷ್ಟಿ ಅಗತ್ಯವೆಂಬ ಅಂಶವನ್ನು ನ್ಯಾಯಾಲಯಕ್ಕೆ
ಮನವರಿಕೆ ಮಾಡಿಕೊಟ್ಟ ನಂತರ, ಸರ್ವೋಚ್ಚ ನ್ಯಾಯಾಲಯವು ಅಪೀಲುದಾರನ ಮನವಿಯನ್ನು ಪುರಸ್ಕರಿಸಿ,
Agricultural class II Serviceನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು (ಸ್ಪಷ್ಟ ದೃಷ್ಟಿಯ ಅವಶ್ಯಕತೆಯಿಲ್ಲದ
ಹುದ್ದೆ) ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಿತು.
ವಿಕಲತೆ
ಆಧಾರಿ ತಾರತಮ್ಯಗಳ ಬಗೆಗಿನ ಹೆಚ್ಚಿದ ಆರಿವಿನಿದ್ದಾಗಿ ಹಲವಾರು ಅಧಿಕಾರ ಕ್ಷೇತ್ರಗಳಲ್ಲಿ ಹೆಚ್ಚಿನ
ನ್ಯಾಯಾಂಗ ರಕ್ಷಣೆಯನ್ನು ಒದಗಿಸಲಾಗಿದೆ. 1995ರ ಅಂಗವಿಕಲರ ಅಧಿನಿಯಮದಲ್ಲಿ ಭೇದಭಾವ ಮಾಡದಿರುವುದು
ಎಂಬ ವಿಶೇಷ ಅಧ್ಯಾಯವನ್ನೆ ತಂದಿದೆ. ಭೇದಭಾವ ಮಾಡದಿರುವುದು ಉಪಬಂಧಗಳು ಸಂವಿಧಾನದ 15 ಮತ್ತು 16ನೇ
ಕಲಂಗಳ ಆಧಾರದ ಮೇಲೆಯೇ ರಚಿಸಲಾಗಿದೆ.
ಸರ್ಕಾರದ ಪಾತ್ರ:
ಪ್ರಸ್ತಾವನೆ,
ರಾಜ್ಯ ನೀತಿ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಹಕ್ಕುಗಳು ಭಾರತ ಸಂವಿಧಾನದಲ್ಲಿ ಸಂರಕ್ಷಿತವಾಗಿವೆ.
ದುಸ್ಥಿಯಲ್ಲಿರುವ ತನ್ನ ನಾಗರಿಕರಿಗೆ ಸರ್ಕಾರದ ಧನಾತ್ಮಕ ಕಾರ್ಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು
ನೀಡುತ್ತದೆ. ಕಲಂ 41 “ ರಾಜ್ಯವು ತನ್ನ ಆರ್ಥಿಕ ಸಾರ್ಮಥ್ಯದ ಮಿತಿಯಲ್ಲಿ, ಉದ್ಯೋಗ ಮತ್ತು ಶಿಕ್ಷಣವನ್ನು
ಪಡೆಯುವ ಹಕ್ಕನ್ನು ಮತ್ತು ನಿರುದ್ಯೋಗ, ವೃದ್ಯಪ್ಯ, ಕಾಯಿಲೆ ಮತ್ತು ವಿಕಲಚೇತನರಿಗೆ ಸಾರ್ವಜನಿಕರ
ಸಹಾಯವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕು” ಎಂದು ಹೇಳಿದೆ.
ಗತಿಶೀಲ
ಸಂವಿಧಾನ ಮತ್ತು ನ್ಯಾಯಾಂಗದ ಹೊರತಾಗಿಯೂ, ವಿಕಲತೆಯನ್ನು ಕರುಣೆಯ ದೃಷ್ಟಿಯಿಂದಲೇ ನೋಡಲಾಗುತ್ತಿದೆ.
ಭಾರತೀಯ ಸಮಾಜವು ವಿಕಲತೆಯನ್ನು ವೈಯಕ್ತಿಕ ದೃಷ್ಟಿಯಿಂದ ನೋಡುತ್ತದೆ ಮತ್ತು ಕುಟುಂಬದಲ್ಲಿ ದೊರೆಯುವ
ಸೌಲಭ್ಯಗಳ ಮೂಲಕ ಪರಿಹಾರವನ್ನು ನೀಡಲಾಗುತ್ತಿದೆ. ಮತ್ತೊಂದು ಕಡೆ ಬಹುಸಂಖ್ಯಾತ ಭಾರತೀಯ ಸಮಾಜವು ಬಡತನ
ರೇಖೆಗಿಂತ ಕೆಳಗೆ ಬದುಕುತ್ತಿದ್ದಾರೆ, ಇವರು ಹಿಂದಿನ ಕಾಲದ ಹಳೆಯ ಪದ್ದತಿಗಳನ್ನೆ ಬಳಸುತ್ತಿದ್ದಾರೆ.
ವಿಕಲಚೇತನ ವ್ಯಕ್ತಿಗಳಿಗೆ ಶಿಕ್ಷಣ, ಉದ್ಯೋಗ, ಸೂರು, ಆರೋಗ್ಯ ಮತ್ತು ಪೋಷಕಾಂಶಗಳ ಸೇವೆಯನ್ನು ನೀಡಲು
ಮೇಲೆಯೆ ಸ್ವತಂತ್ರ ಭಾರತ ಸರ್ಕಾರಗಳು ಹೆಚ್ಚಾಗಿ ಅವಲಂಭಿತವಾಗಿರುವುದನ್ನು ಕಾಣಬಹುದು.
1970ರ
ವೇಳೆಗೆ ವಿಕಲಚೇತನರ ಆದೋಲನವು ಚುರುಕುಗೊಂಡಿತು. ಇವು ರಕ್ಷಣೆ ಮತ್ತು ಮಾನವ ಹಕ್ಕುಗಳ ಬಗ್ಗೆ ಧ್ವನಿಯೆತ್ತಿದವು.
ಅದರಲ್ಲೂ, ವಿಶೇಷವಾಗಿ ಸಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗೆ ಸಂಬಂಧಿಸಿದ ಸವಿಸ್ತಾರವಾದ ಶಾಸನವನ್ನು
ತರಲು ಒತ್ತಾಯಿಸಿದವು. 19810ರಲ್ಲೆ ಸರ್ಕಾರಕ್ಕೆ ಇಂತಹ ಒಂದು ಶಾಸನದ ಅಗತ್ಯತೆ ಕಂಡುಬಂದರು 1995ರವರೆಗೂ
ಇದು ಸಾಧ್ಯವಾಗಲಿಲ್ಲ. ಭಾರತೀಯ ಸಂವಿಧಾನವು ವಿಕಲತೆಯ ವಿಷಯವನ್ನು ರಾಜ್ಯ ಪಟ್ಟಿಗೆ ಸೇರಿಸಿತ್ತು.
ಇದರಿಂದಾಗಿ ಕಾಯ್ದೆಯನ್ನು ರಚಿಸುವ ಸಂವಿಧಾನದ ಬಿಕ್ಕಟ್ಟು ಉಂಟಾಗಿದ್ದರಿಂದ ಕಾಯ್ದೆಯು ವಿಳಂಬವಾಯಿತು.
ಏಷ್ಯಾ ಮತ್ತು ಫೆಸಿಫಿಕ್ ವಲಯಗಳಲ್ಲಿನ ವಿಕಲಚೇತನರ ಸಮಾನತೆ ಮತ್ತು ಪೂರ್ಣ ಪಾಲ್ಗೋಳ್ಳುವಿಕೆ ಒಡಂಬಡಿಕೆಗೆ
ಭಾರತ ಸಹಿ ಹಾಕುವ ಮೂಲಕ ಕಾಯ್ದೆಯನ್ನು ಜಾರಿಗೆ ತರಲು ಅನುವಾಯಿತು. ಸಂವಿಧಾನದ 249ನೇ ವಿಧಿಯು “ ಅಂತರಾಷ್ಟ್ರೀಯ
ಬದ್ದತೆಯನ್ನು ಪ್ರದರ್ಶಿಸಲು ಯಾವುದೆ ಗುಂಪಿನಲ್ಲಿ ಬರುವ ವಿಷಯದ ಮೇಲಾದರೂ ಲೋಕಸಭೇಯಲ್ಲಿ ಶಾಸನವನ್ನು
ರಚಿಸಬಹುದು” ಎಂದು ಹೇಳಿದ್ದರಿಂದ 1995ರಲ್ಲಿ ಅಂಕವಿಕಲರ ಅಧಿನಿಯಮ ಮತ್ತು ಮುಂದೆ ಇತರೆ ಕಾಯ್ದೆಗಳು
ಜಾರಿಗೆ ಬರಲು ಸಾಧ್ಯವಾಯಿತು.
ಮುಂದುವರೆಯುವುದು…..
ನಿಮ್ಮ ವಿಮರ್ಶೆ ಮತ್ತು ಸಲಹೆಗಳನ್ನು ಬರೆಯಲು ಮರೆಯದಿರಿ
