ವಿಕಲಚೇತನರು
ಮತ್ತು ಮಾನವ ಹಕ್ಕುಗಳು
ಪ್ರಾಚೀನ ಕಾಲ:
ಸ್ವಾತಂತ್ರ ಪೂರ್ವ ಕಾಲದಲ್ಲಿ ರೋಗಿಗಳು, ವೃದ್ದರು ಮತ್ತು ಅಂಗವಿಕಲರು ಪ್ರಕೃತಿಯ ಕರುಣೆಗೆ ಬಿಟ್ಟುಬಿಡುತ್ತಿದ್ದರು ಎಂದು ನಂಬಲಾಗಿದೆ. ಯಾರು ಸದೃಡವಾಗಿರುತ್ತಾರೋ ಅವರಿಗೆ ಮಾತ್ರ ಬದುಕು ಎಂಬ ತತ್ವ ಚಾಲ್ತಿಯಲ್ಲಿತ್ತು. ತಮಿಳರ ಪುರಾತನ ಸಾಹಿತ್ಯಗಳು ತಿಳಿಸುವಂತೆ, ಹುಟ್ಟಿನಿಂಲೆ ನ್ಯೂನತೆಯನ್ನು ಹೊಂದಿರುವ ಮಕ್ಕಳನ್ನು ಅಡ್ಡಡ್ಡವಾಗಿ ಕತ್ತಿಯಿಂದ 2 ಭಾಗ ಮಾಡಿ ಸಂಸ್ಕಾರ ಮಾಡಲಾಗುತ್ತಿತ್ತು (ರಾಮಾನುಜಂ, 2000). ತಮಿಳು ಸಂಪ್ರದಾಯವನ್ನು ಬಿಟ್ಟರೆ, ಇಂತಹ ಅಮಾನವೀಯ ಅಚರಣೆಗಳು ಭಾರತದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಈ ಆಚರಣೆಗಳಿಂದ ಕುಟುಂಬ ಮತ್ತು ಸಮುದಾಯವನ್ನು ಸಾಧ್ಯವಾದ ರೀತಿಯಿಂದ ರಕ್ಷಣೆ ಮಾಡಿ ಜೀವಿಸಲು ಅವಕಾಶ ಮಾಡಿಕೊಡಲಾಯಿತು. ಸ್ವತ್ತುಗಳ ಹಕ್ಕಿಗೆ ಸಂಬಂದಿಸಿದಂತೆ ಮನು ನಪುಂಸಕರು ಮತ್ತು ಜಾತಿಭ್ರಷ್ಟರು, ಅಂಧರಾಗಿ ಮತ್ತು ಕಿವುಡರಾಗಿ ಹುಟ್ಟಿದ ವ್ಯಕ್ತಿಗಳು, ಹುಚ್ಚರು, ಮೂರ್ಖರು ಮತ್ತು ಮೂಕರು, ಜೋತೆಗೆ ಯಾವುದಾದರು ಅಂಗಗಳ ನ್ಯೂನತೆವುಳ್ಳವರು ಅಸ್ತಿಯಲ್ಲಿ ಯಾವುದೆ ಭಾಗವನ್ನು
/ ಪಾಲನ್ನು ಪಡೆಯುವುದಿಲ್ಲ. ಅಂತೆಯೇ, ಮನುವಿನ ಪೌರ ಮತ್ತು ಅಪರಾದ ಸಂಹಿತೆಯ ಪ್ರಕಾರ, ಅಂಗವಿಕಲತೆ ಹೊಂದಿರುವ ವ್ಯಕ್ತಿಯ ಸಾಕ್ಷಿಗೆ ಮಾನ್ಯತೆ ಇಲ್ಲ ಎಂದು ಹೇಳಿದ್ದಾನೆ. (murickan & Kutty,1995).
ಮಹಾಭಾರತ:
ಅಂಧ
ಕೌರವ ರಾಜನಾದ ದೃತರಾಷ್ಟ್ರ ತನ್ನ ಅಂಧತ್ವದಿಂದಾಗಿ ಸಿಂಹಾಸನಕ್ಕೆ ಉತ್ತಮ ದೊರೆಯಾಗಲು ಸಾದ್ಯವಾಗಲಿಲ್ಲ. ಅದರೂ ಸಹ ಅವನ ಕಾಲದಲ್ಲಿ ಅನಾನೂಕೂಲಾಸ್ಥರು ಮತ್ತು ಅಭಾಗ್ಯರುಗಳಿಗೆ ರಾಜ್ಯದ ವತಿಯಿಂದ ಕಲ್ಯಾಣ ಕಾರ್ಯಗಳನ್ನು ಕೈಗೊಳ್ಳು ಪರಿಕಲ್ಪನೆ ಬೆಳೆಯಿತು. ಮಹಾಭಾರತದಲ್ಲಿ ನಾರದ ಮುನಿಗಳು ಯುಧೀಷ್ಠಿರನನ್ನು ಪ್ರಶ್ನಿಸುತ್ತಾರೆ, ಅಂಧರಾಗಿರುವ, ಮೂಕರಾಗಿರುವ, ಹೆಳವನನ್ನು, ಈ ಪ್ರಪಂಚದಿಂದ ಪರಿತ್ಯಕ್ತನಾದವನನ್ನು ತಂದೆ ಎಂದು ನೋಡುವೆಯ? ಯುದ್ಧದಿಂದ ವಿಕಲತೆಯನ್ನು ಹೊಂದಿದವರಿಗೆ ಮತ್ತು ಅವರನ್ನೇ ಅವಲಂಭಿಸಿರುವವರನ್ನು ರಾಜ್ಯವು ನೋಡಿಕೊಳ್ಳಬೇಕೆಂದು ನಾರದರು ಹೇಳುತ್ತಾರೆ. ಮುಂದುವರೆದು, ನಿನಗಾಗಿ ಮಡಿದವನ ಕುಂಟುಬದ ಸ್ತ್ರೀಯನ್ನು ಅಥವಾ ರಣರಂಗದಲ್ಲಿ ಹೊರಡಿದ ದುರವಸ್ಥೆಯಲ್ಲಿರುವವನನ್ನು ನೀನು ಪಾಲಿಸುವೆಯ? ಎಂದು ಕೇಳುತ್ತಾರೆ. ಮಹಾಭಾರತ ಗ್ರಂಥವು ಸಮಸ್ಯೆಯ ಎಡೆಗೆ ರಾಜ್ಯವು ಸ್ಪಂದಿಸಬೇಕಾದ ರೀತಿಯ ಬಗ್ಗೆ ತಿಳಿಸುತ್ತದೆ.
ಮೌರ್ಯರ ಕಾಲ:

ಮಯೂರನ ಕಾಲ ಅಂಗವಿಕಲತೆ ಮತ್ತು ಅದನ್ನು ನಿರ್ವಹಣೆ ಮಾಡುವ ಮಾರ್ಗದಲ್ಲಿನ ಪರಿಪಕ್ವತೆಗೆ ಸಂಬಂದಿಸಿದಂತೆ ಒಂದು ಮುಖ್ಯ ಘಟ್ಟವಾಗಿದೆ. ಈ ಕಾಲದಲ್ಲಿ, ಪ್ರಮುಖವಾಗಿ ಚಂದ್ರಗುಪ್ತನ ಕಾಲದಲ್ಲಿ ದೈಹಿಕ ಮತ್ತು ಇತರೆ ಸಾಮಾಜಿಕ ಅಂಗವಿಕಲತೆಗಳಿಗೆ ಸಂಬಂದಿಸಿದಂತೆ ಔದ್ಯೋಗಿಕ ಪುನರ್ವಸತಿ ಕಾರ್ಯಗಾರಗಳನ್ನು ಕೈಗೊಳ್ಳಲಾಗುತ್ತಿತ್ತು. ಮೌರ್ಯರ ಕಾಲದ ಪ್ರಸಿದ್ದ ಆರ್ಥಶಾಸ್ತ್ರಾಜ್ಞನಾದ ಕೌಟಿಲ್ಯನು ತನ್ನ ಆರ್ಥಶಾಸ್ತ್ರದಲ್ಲಿ ರಾಜ ಅನಾಥರು, ವೃದ್ದರು, ಅಶಕ್ತರು, ಭಾದಿತರು ಮತ್ತು ಅಸಹಾಯಕರನ್ನು ನಿರ್ವಹಣೆ ಮಾಡಬೇಕು ಎಂದು ಹೇಳಿದ್ದಾನೆ. ಅವರ ಸ್ವವಲಂಭನೆ ಮತ್ತು ಆರ್ಥಿಕ ಸ್ವತಂತ್ರಕ್ಕಾಗಿ ಅದ್ಯತೆಯ ಮೇಲೆ ಯಾವ ಹೆಣ್ಣು ವಿಧವೆಯೋ, ಒಂಟಿಯೋ, ಹೆಳವರೋ (ಕುಂಟ) ಮತ್ತು ಪರಿತ್ಯಕ್ತರೋ ಅಂತವರಿಗೆ ಕೆಲಸವನ್ನು ನೀಡಬೇಕು ಎಂದು ಕೌಟಿಲ್ಯ ಸಲಹೆ ನೀಡಿದ್ದಾನೆ. ಇದಲ್ಲದೆ ಅವನು ಅಂಗವಿಕಲರಿಗೆ ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋನದ ಮೂಲಕ ನೇಯ್ಗೆ, ಹೊಲಿಗೆ, ಸೆಣಬಿನ ಕೆಲಸ, ನೂಲುವುದು ಮುಂತಾದ ಕೆಲಸಗಳನ್ನು ಶಿಫಾರಸ್ಸು ಮಾಡಿದ್ದಾನೆ.
ಸಾಮ್ರಾಟ ಆಶೋಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ. ಅವನ ಶಾಸನದಲ್ಲಿ ದಾಖಲಾಗಿರುವಂತೆ ರಾಜ್ಯದ ಹೆದ್ದಾರಿಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಿ, ವೈದ್ಯರನ್ನು ನೇಮಿಸಿ, ಕುಡಿಯುವ ನೀರು, ಅಹಾರ ಮತ್ತು ಔಷದದ ವ್ಯವಸ್ಥೆ ಮಾಡಿದ್ದಾನೆ. 'ಗೊಪಸ್' ಎಂಬ ಹಳ್ಳಿಯ ಕಾರ್ಯವಿರ್ವಹಕ ಆಧಿಕಾರಿಯ ಮೂಲಕ ಜನನ - ಮರಣ, ಜಾತಿ ಮಾಹಿತಿ ಮತ್ತು ರೋಗಿಗಳ, ಅಶಕ್ತರ ಮಾಹಿತಿ ಸಂಗ್ರಹಿಸಿ ಅಗತ್ಯವಿರುವವರಿಗೆ ಸಹಾಯವನ್ನು ಮಾಡಲಾಗುತ್ತಿತ್ತು. ಸಾಮ್ರಾಟ ಆಶೋಕನ ಈ ಕಾರ್ಯವು ಬೌದ್ಧರ ರಾಜ್ಯ ಮತ್ತು ಸಮಾಜ ಪರಿಕಲ್ಪನೆಗಳಿಂದ ಪ್ರಭಾವಿತವಾಗಿವೆ.
ಮೂಘಲರ ಕಾಲ:
ಮೂಘಲರ ಕಾಲದಲ್ಲಿ, ದಾನ ಮತ್ತು ದತ್ತಿಗಳಿಗೆ ಸಂಬಂದಿಸಿದಂತೆ ಒಂದು ವಿಶೇಷ ಇಲಾಖೆ ಸ್ಥಾಪಿಸಿ, ಅದರ ಉಸ್ತುವಾರಿಗೆ
ಒಬ್ಬ ಮುಖ್ಯಸ್ಥ (ಸದ್ರ)ನನ್ನು ನೇಮಿಸಲಾಗಿತ್ತು. ಜಾತಿ ಮತ್ತು ಅಂತಸ್ತುಗಳ ಬೇದವಿಲ್ಲದೆ ಸಾರ್ವಜನಿಕ ಸೌಲಬ್ಯಗಳನ್ನು ಎಲ್ಲಾರೂ ಬಳಸಬಹುದಾಗಿತ್ತು. ಮೂಘಲ್ ಸಾಮ್ರಾಟ ಅಕ್ಬರ್ ಸಾಮಾಜಿಕ ಐಕ್ಯತೆ ಮತ್ತು ಇತರೆ ವಿಷಯಗಳ ಬಗ್ಗೆ ವಿಶೇಷ ಗಮನ ನೀಡಿದ್ದನು. ಝಕತ್ ಸಂದರ್ಭದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಕೈಗೊಳಲಾಗುತ್ತಿತ್ತು.
ವಸಾಹತು ಕಾಲ:
ಮುಂದಿನ ಬದಲಾವಣೆ ಕ್ರಿಶ್ಚಿಯನ್ ಮಿಷನರಿಗಳು ವಿಶೇಷ ಶಾಲೆಗಳನ್ನು ಪ್ರಾರಂಬಿಸುವುದರ ಮೂಲಕವಾಯಿತು. ಪ್ರಥಮ ಶ್ರವಣದೋಷವುಳ್ಳ ಮಕ್ಕಳ ಶಾಲೆ ಮುಂಬಯಿಯಲ್ಲಿ ರೋಮನ್ ಕ್ಯಾಥೋಲಿಕ್ ಮಿಷನರಿಯಿಂದ
1884ರಲ್ಲಿ ಪ್ರಾರಂಭವಾಯಿತು. ಅಂತಯೇ, 1887ರಲ್ಲಿ ಮಿಸ್ ಅನ್ನಿ ಶಾರ್ಪ್ರವರು ಪಂಜಾಬಿನ ಅಮೃತ್ಸರ್ನಲ್ಲಿ ಅಂಧರಿಗಾಗಿ ಪ್ರಥಮ ಬಾರಿಗೆ ಶಾಲೆಯನ್ನು ತೆರೆದರು. ಈ ಶಾಲೆ ಚರ್ಚ್ ಆಫ್ ಮಿಷನರಿ ಸೊಸೈಟಿಯಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲೊಂದು ಇಲ್ಲೊಂದು ಚಟುವಟಿಕೆಗಳು ಇದ್ದಗೂ ಸಹ ಭಾರತದ ಸಾಮಾಜಿಕ ಸಾಂಸ್ಕೃತಿಕ ನಕ್ಷೆಯಲ್ಲಿ ಮತ್ತೊಂಮೆ ಅಂಗವಿಕಲ ವ್ಯಕ್ತಿಗಳ ಶಿಕ್ಷಣ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ವೈಚಾರಿಕ ಮಾರ್ಗದಲ್ಲಿ ಬದಲಾವಣೆಯಯಿತು. ಮಿಷನರಿಗಳಿಂದ ಪ್ರಭಾವಿತರಾದ ಹಲವು ಭಾರತೀಯರು ಸಹ ನಿರ್ಲಕ್ಷಿತರು, ಅನಾಥರು ಮತ್ತು ಅಂಗವಿಕಲರ ಅಭಿವೃದ್ದಿಗೆ ಹೆಚ್ಚು ಶ್ರಮಿಸಿದರು. ಸ್ವಾತಂತ್ರ ಹೋರಟ ಮತ್ತು ಸಮಾಜ ಸುಧಾರಣೆ ಚಳುವಳಿಗಳಿಂದ ಹೆಚ್ಚು ಹೆಚ್ಚು ಸ್ವಯಂ ಸೇವಕರು ದೊರೆಯಿತು. ಇದರ ಫಲವಾಗಿ, ಸುಮಾರು
100 ವಿಶೇಷ ವಸತಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳು ಅಂಗವಿಕಲರಿಗಾಗಿ ಅಸ್ಥಿತ್ವಕ್ಕೆ ಬಂದಿತು. ಇದು ಸ್ವತಂತ್ರ ಪೂರ್ವ ಸ್ಥಿತಿ. ಈ ಶಾಲೆಗಳು
1860 ದಿ ಸೊಸೈಟಿ ಆಕ್ಟ್ ಅಡಿಯಲ್ಲಿ ನೊಂದಾಯಿತವಾಗಿದ್ದವು.
ಮುಂದುವರೆಯುವುದು.....
No comments:
Post a Comment