Wednesday, 16 March 2016

NHFDCಯ ಸಾಲ ಯೋಜನೆಗಳು
ಭಾಗ-3
4.         ವ್ಯವಸಾಯ ಚಟುವಟಿಕೆಗಳಿಗೆ ಸಹಾಯ:
ವಿಕಲಚೇತನರಿಗೆ ಸಾಲವನ್ನು ಕೆಳಕಂಡ ಕಾರಣಗಳಿಗಾಗಿ ನೀಡಲಾಗುತ್ತದೆ.
a.      ವ್ಯವಸಾಯ ಉತ್ಪನ್ನ ಮತ್ತು ನೀರಾವರಿ, ವ್ಯವಸಾಯ ಯಂತ್ರಗಳು, ರೇಷ್ಮೆ ಕೃಷಿ, ತೋಟಗಾರಿಕೆ ಇತ್ಯಾದಿ..
b.      ಕೃಷಿ ಸಂಬಂಧಿತ ಕೀಟನಾಶಕ, ನೇಗಿಲು, ಕ್ರಿಮಿನಾಶಕಗಳನ್ನು ಕೊಳ್ಳಲು ನೀಡುತ್ತದೆ.
c.       ಕೃಷಿ ಮಾರುಕಟ್ಟೆ (ವಿಕಲಚೇತನರ ಸಹಕಾರ ಸಂಘಟನೆ/ ವಿಕಲಚೇತನ ಕೃಷಿಕರ ಸಂಘಟನೆ), ಸಂಸ್ಕರಣ ಘಟಕ ಮತ್ತು ಪ್ಯಾಕಿಂಗ್ ಘಟಕಗಳನ್ನು ಹೊಂದಲು, ಕೃಷಿ ಉತ್ಪನ್ನಗಳನ್ನು ಮಾರಲು ಸಾಗಾಣಿಕೆ ವಾಹನಗಳನ್ನು ಕೊಳ್ಳಲು.
d.      ವಿಕಲಚೇತನ ವ್ಯಕ್ತಿ ಅಥವಾ ವಿಕಲಚೇತನರ ಸಹಕಾರ ಸಂಘಟನೆ ವ್ಯವಸಾಯ ಉದ್ದೇಶಕ್ಕಾಗಿ ಭೂಮಿಯನ್ನು ಕೊಳ್ಳಲು.
e.      ಅಭಿವೃದ್ಧಿಪಡಿಸಿದ ಕಾಳುಗಳು, ಪಾರ್ಮ್ಗಳಿಗೆ ಅಗತ್ಯವಾದ ಯಣತ್ರಗಳು ಮತ್ತು ಸಾವಯವ ಗೊಬ್ಬರ, ಕ್ರಿಮಿನಾಶಕಗಂತಹ ಚಿಲ್ಲರೆ ಅಂಗಡಿಗಳ ರೀತಿಯ ಸಣ್ಣ ಪ್ರಮಾಣದ ವ್ಯವಹಾರಗಳಿಗೆ.
ಯೋಜನೆಯ ಅಡಿಯಲ್ಲಿ ಗರಿಷ್ಟ ರೂ.5 ಲಕ್ಷಗಳ ಸಾಲವನ್ನು ಲಭ್ಯವಿರುತ್ತದೆ.
5.   ವಿಕಲಚೇತನ ವ್ಯಕ್ತಿಗಳ ಸಾಧನ ಸಲಕರಣೆಗಳ ತಯಾರಿಕೆ/ಉತ್ಪಾದನೆಯನ್ನು ಪ್ರೋತ್ಸಹಕ್ಕಾಗಿ ಯೋಜನೆ:
          R & D ಯೋಜನೆಯ ಅಡಿಯಲ್ಲಿ ದೇಶದ ಒಳಗೆ ಪ್ರಖ್ಯಾತವಾಗಿರುವ ಸರ್ಕಾರಿ/ಶೈಕ್ಷಣಿಕ ಸಂಸ್ಥೆಗಳು ಸಾಧನ ಸಲಕರಣೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮಗಳನ್ನು ಪ್ರಾರಂಭಿಸಲು ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಕಂಪನಿಗಳು ವಿಕಲಚೇತರನ್ನು ಉದ್ಯೋಗವನ್ನು ನೀಡಲೇ ಬೇಕು. ಗರಿಷ್ಠ ರೂ. 25 ಲಕ್ಷ ಯೋಜನೆಯ ಅಡಿಯಲ್ಲಿ ದೊರೆಯುತ್ತದೆ.
6.    ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮಗಳಿಗಾಗಿ ಸಹಾಯ:
a.      ವಿಕಲಚೇತನರಲ್ಲಿ ಉದ್ಯಯಮಶೀಲತೆಯ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸೌಲಭ್ಯ ಒದಗಿಸುವ ಏಜನ್ಸಿಗಳಿಗೆ, ಪ್ರಖ್ಯಾತ ಎನ್.ಜಿ..ಗಳಿಗೆ. RRTC ಗಳಿಗೆ ಮತ್ತು ನೋಂದಾಯಿತ ತಾಂತ್ರಿಕ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.
ವಿಶೇಷವಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ಕೌಶಲ್ಯ ಮತ್ತು ಉದ್ಯಯಮಶೀಲತೆಯನ್ನು ಬೆಳೆಸುವ ಔದ್ಯೋಗಿಕ ತರಬೇತಿಯನ್ನು ಒಳಗೊಂಡಂತೆ, ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆಯಲು ಸಹ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
b.      ಸಾಲದ ಪ್ರಸ್ತಾವನೆಯು ತರಬೇತಿಯ ನಂತರ ವಿಕಲಚೇತನರಿಗೆ ಉದ್ಯೋಗ ಅವಕಾಶವನ್ನು/ ಸ್ವಯಂ ಉದ್ಯೋಗದ ಅವಕಾಶವನ್ನು ಸ್ಪಷ್ಟಪಡಿಸಿರಬೇಕು.
c.       NHFDCಯ ಆರ್ಥಿಕ ಸಹಾಯದೊಂದಿಗೆ ಘಟಕವನ್ನು ತೆರೆದಿರುವವರು ವಿಕಲಚೇತನ ಉದ್ಯಮಿಗಳಿಗೆ  ಮತ್ತು ವಿಕಲಚೇತನ ಕೆಲಸಗಾರರಿಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಾಲವನ್ನು ಸಹ ನೀಡುತ್ತದೆ.
7.      ಬುದ್ದಿಮಾಂದ್ಯ , ಸೆರೆಬ್ರಲ್ ಪಾಲ್ಸಿ ಮತ್ತು ಸ್ವತಲ್ಲಿನರಲ್ಲಿ ಸ್ವ-ಉದ್ಯೋಗವನ್ನು ಬಳೆಸುವ ಯೋಜನೆ:
          ಬುದ್ದಿಮಾಂದ್ಯ ವ್ಯಕ್ತಿಗಳು, ಸೆರೆಬ್ರಲ್ ಪಾಲ್ಸಿ ಮಕ್ಕಳು ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಮತ್ತು ಕಾನೂನಾತ್ಮಕ ಒಪ್ಪಂದಗಳ ಒಳಗೆ ಅವರುಗಳಿಗೆ ಪ್ರವೇಶವಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕೆಳಗೆ ನೀಡಿರುವ ವರ್ಗದ ವ್ಯಕ್ತಿಗಳು NHFDCಯಿಂದ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
a.      ಅವಲಂಭಿತ ಬುದ್ದಿಮಾಂದ್ಯ ವ್ಯಕ್ತಿಗಳ ಪೋಷಕರು
b.      ಅವಲಂಭಿತ ಬುದ್ದಿಮಾಂದ್ಯ ವ್ಯಕ್ತಿಗಳ ಗಂಡ/ಹೆಂಡತಿ
            NHFDC ಮೂಲಕ ವಿಭಾಗದಲ್ಲಿ ಸಾಲವನ್ನು ಆಪೇಕ್ಷಿಸುವವರು, ಬುದ್ದಿಮಾಂದ್ಯರೆ ಸ್ವತಃ ಉದ್ಯೋಗ ಮಾಡುವುದನ್ನು ಪೋತ್ಸಾಹಿಸಬೇಕು. ಯೋಜನೆಯಲ್ಲಿ ಫಲಾನುಭವಿಗಳ ನೇರ ಭಾಗಿಯಾಗುವಿಕೆ ಮತ್ತು ಪಾಲ್ಗೂಳುವಿಕೆಯ ಇರುವಿಕೆಯ ಆಧಾರದ ಮೇಲೆ ಯೋಜನೆಯನ್ನು ಗುರುತಿಸಬೇಕು.
1.      ಸಾಲವನ್ನು ನೀಡುವ ಕ್ಷೇತ್ರಗಳು:
2.     ಅಂಗಡಿಗಳು      
3.      ಜೆರಾಕ್ಸ್ ಕೇಂದ್ರ  
4.    ವರ್ಕ್ಶಾಪ್ / ಕಾರ್ಯಾಗಾರಗಳು 
5.      ಹೋಲಿಗೆ ಘಟಕ  
6.    ಲಕೋಟೆಗಳನ್ನು ಸಿದ್ಧ ಪಡಿಸುವುದು 
7.      DTP ಕೇಂದ್ರ      
8.     ಹಪ್ಪಳ, ಉಪ್ಪಿನಕಾಯಿಗಳನ್ನು ಸಿದ್ದಪಡಿಸುವುದು        
9.      ಸ್ಕ್ರೀನ್ ಪ್ರಿಂಟ್   
10.   ಜಾಮ್ ಮುಂತಾದವುಗಳ ಗೃಹಾಧಾರಿತ ಘಟಕಗಳು  
11.  ಕೋಳಿ ಸಾಕಣಿಕೆ 
12.   ಬೇಕರಿ  
13.  ಡೈರಿ    
14.   ಕೈಮಗ್ಗ ಘಟಕ    
15.  ತೋಟಗಾರಿಕೆ    
16.  ಬ್ಲಾಕ್, ಬಟ್ಟೆಗಳ ಮೇಲೆ ಮುದ್ರಣ                            
ಯೋಜನೆಯ ಅಡಿಯಲ್ಲಿ ಗರಿಷ್ಠ ರೂ.2.50 ಲಕ್ಷ ಗಳ ಸಾಲ ದೊರೆಯುತ್ತದೆ.

ಮುಂದುವರೆಯುವುದು…

Thursday, 3 March 2016



 ವಿವಿಧ ರೀತಿಯ ಕಾರ್ಯಕ್ರಮಗಳಿಗಾಗಿ NHFDCಯ  ಸಾಲ ಯೋಜನೆಗಳು

          ನಿಗಮವು ಆದಾಯವನ್ನು ತರುವ ವ್ಯಾಪಕ ಶ್ರೇಣಿಯ ಹಲವಾರು ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡುತ್ತದೆ. ಕೆಳಸ್ತರದ ಆರ್ಥಿಕತೆಯನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಾಗ ವ್ಯಕ್ತಿಗಳ ಆದಾಯವನ್ನು ಕೆಳಸ್ತರದಿಂದ ಮೇಲಸ್ತರಕ್ಕೆ ತರುವ ರೀತಿಯಲ್ಲಿ ಯೋಜಿಸಿ ಸಲ್ಲಿಸಬೇಕು.
1.      ಸಣ್ಣ ವ್ಯವಹಾರ(ವ್ಯಾಪಾರ)ದಲ್ಲಿ ಸ್ವಯಂ ಉದ್ಯೋಗ - ಉದಾ: ಸೇವಾ ವಲಯ/ವ್ಯಾಪಾರ ವಲಯ
ಸೇವಾ ವಲಯ/ ವ್ಯಾಪಾರ ವಲಯಗಳಲ್ಲಿ ವಿಕಲಚೇತನರ ಸ್ವಯಂ ಉದ್ಯೋಗಕ್ಕಾಗಿ ಸಾಲವನ್ನು ಒದಗಿಸುತ್ತದೆ. ಯಾವ ಸಣ್ಣ ವ್ಯವಹಾರಕ್ಕಾಗಿ ಅರ್ಥಿಕ ಸಹಾಯವನ್ನು ನಿರೀಕ್ಷಿಸುತ್ತಿರೊ, ಯೋಜನೆಯನ್ನು ಸ್ವತಃ ವಿಕಲಚೇತನ ವ್ಯಕ್ತಿಯೇ ನಿರ್ವಹಿಸಬೇಕು ಹಾಗೂ ತನ್ನ ವ್ಯವಹಾರಲ್ಲಿ ಕನಿಷ್ಟ ೧೫%ನಷ್ಟು ವಿಕಲಚೇತರಿಗೆ ಉದ್ಯೋಗವನ್ನು ನೀಡಬೇಕು.
ವಿಭಾಗದಲ್ಲಿ (ಸೆಕ್ಷನ್) ಗರಿಷ್ಠ .೫೦ ಲಕ್ಷ ಸಾಲ ಲಭ್ಯವಿರುತ್ತದೆ.
ಯೋಜನೆ ಅಡಿಯಲ್ಲಿ ಸಾಲ ಲಭ್ಯವಿರುವ ಕ್ಷೇತ್ರಗಳು:   
  1. ಯಾವುದೇ ವಿಧಧ ಅಂಗಡಿ ಮಳಿಗೆ  
  2. ಕಾರ್ಯಾಗಾರಗಳು/ದುರಸ್ಥಿ/ಸೇವಾ ಕೇಂದ್ರಗಳು       
  3. ಕಂಚಿನ ಕೆಲಸ    
  4. ಆರೋಗ್ಯ ಕೇಂದ್ರಗಳು/ಬ್ಯೂಟಿ ಪಾರ್ಲರ್ 
  5. ಪ್ರಾನ್ ಚೈಸಿ      
  6. ಕಂಪ್ಯೂಟರ್ ಕೇಂದ್ರಗಳು (ತರಬೇತಿ)          
  7. ವಿಕಲಚೇತನರಿಗಾಗಿ ಶಾಲೆ           
  8. ಸ್ಟೂಡಿಯೊ/ಫೋಟೊಗ್ರಫಿ 
  9. ಮಗ್ಗೆ ಕೆಲಸ        
  10. ಮುದ್ರಣ ಕೆಂದ್ರ   
  11. ಬುಕ್ ಬೈಂಡಿಗ್  
  12. ದೂರವಾಣಿ/ಪ್ಯಾಕ್ಸ್/-ಮೇಲ್ ಬೂತ್ಗಳು  
  13. ಚರ್ಮದ ಕೆಲಸ   
  14. ಬಟ್ಟೆಹೊಲಿಗೆ      
  15. ಫಿಸಿಯೊಥೆರಪಿ   
  16. ಟ್ರಾವಲ್ ಏಜೆನ್ಸಿ
  17. ಸಂಗೀತ ಶಾಲೆಗಳು        
  18. ಜರಾಕ್ಸ್ ಕೇಂದ್ರ
  19. ಕಂಪ್ಯೂಟರ್ ಯಂತ್ರಾಂಶಗಳ ಡಿಲರ್ಶಿಪ್   
  20. ಸರಕು ಸಾಗಣೆ ಸೇವಾಕೇಂದ್ರ        
  21. ಪೆಟ್ರೋಲ್ ಉತ್ಪನ್ನಗಳ ಡಿಲರ್ಶಿಪ್           
  22. ಹೈನುಗಾರಿಕೆ      
  23. ಮೇಣದ ಬತ್ತಿ ಮತ್ತು ಸೀಮೆ ಸುಣ್ಣ ತಯಾರಿಸುವುದು   
  24. ಬುಕ್ ಬೈಂಡಿಗ್                       
2.      ವಿಕಲಚೇತನರ ಉದ್ಯಮಗಳಿಗೆ ಸಹಾಯ:
          ಉತ್ಪಾದನೆ, ಬಟ್ಟೆ ತಯಾರಿಕೆ ಮತ್ತು ಇತರೆ ಉತ್ಪಾದಾನ ಚಟುವಟಿಕೆಗಳಿಗೆ ಸಾಲವನ್ನು ನೀಡಲಾಗುತ್ತದೆ. ವಿಕಲಚೇತನ ವ್ಯಕ್ತಿಯು ಉದ್ಯಮ ಮಾಲೀಕನಾಗಿಬೇಕು/ ಮುಖ್ಯ ಕಾರ್ಯಾನಿರ್ವಾಹಕನಾಗಿರಬೇಕು ಮತ್ತು ಕನಿಷ್ಠ ೧೫% ನಷ್ಟು ವಿಕಲಚೇತನ ವ್ಯಕ್ತಿಗಳಿಗೆ ಉದ್ಯೋಗ ನೀಡಬೇಕು. ವಿಭಾಗದಲ್ಲಿ (ಸೆಕ್ಷನ್) ಗರಿಷ್ಠ ೨೦.೦೦ ಲಕ್ಷ ಸಾಲ ಲಭ್ಯವಿರುತ್ತದೆ.
ಯೋಜನೆ ಅಡಿಯಲ್ಲಿ ಸಾಲ ಲಭ್ಯವಿರುವ ಕ್ಷೇತ್ರಗಳು: 
  1. ಉತ್ಪನ್ನಗಳನ್ನು ಉತ್ಪಾದಿಸುವುದು 
  2. ಮತ್ಸೋತ್ಪಾದನೆ
  3. ಸಾಪ್ಟವೇರ್ಗಳನ್ನು ಅಭಿವೃದ್ಧಿಪಡಿಸುವುದು & ಮಾರುವುದು     
  4. ಪೀಠೋಪಕರಣಗಳನ್ನು ಉತ್ಪಾದಿಸುವುದು   
  5. ಡೈರಿ ನಡೆಸುವುದು          
  6. ಆಹಾರ ಸಂಸ್ಕರಣೆ          
  7. ಬಟ್ಟೆ ಉತ್ಪಾದನೆ
  8. ಮಡಿಕೆ ತಯಾರಿಕೆ           
  9. ವಜ್ರ ಕತ್ತಿಸುವುದು ಮತ್ತು ಪಾಲಿಶ್ ಮಾಡುವುದು        
  10. ಪ್ಲಾಸ್ಟಿಕ್ ಮೌಲ್ಡ್ ಸಿದ್ದಪಡಿಸುವುದು  
  11. ಕೃಷಿಗೆ ಆಧಾರಿತ ಕೈಗಾರಿಕೆ           
  12. ನೈಸರ್ಗಿಕ ಉತ್ಪನ್ನಗಳು   
  13. ಪ್ಯಾಕಿಂಗ್                                  

 3.      ವಿಕಲಚೇತನರ ಉನ್ನತ ಶಿಕ್ಷಣಕ್ಕೆ ಸಹಾಯ:
          ವಿಕಲಚೇತನ ವ್ಯಕ್ತಿಗಳ ಅಭಿವೃದ್ಧಿ ಮತ್ತು ಪುರ್ನವಸತಿಯ ಎಲ್ಲಾ ಉದ್ದೇಶಗಳನ್ನು ಪೂರ್ಣಗೊಳಿಸುವ ದಿಸೆಯಲ್ಲಿ ನಿಗಮವು ಅರ್ಹ ಫಲಾನುಭವಿಗಳ ಶಿಕ್ಷಣ/ತರಬೇತಿಗಾಗಿ ಅನುದಾನ ಮತ್ತು ಸಾಲವನ್ನು ನೀಡುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡುತ್ತಿದೆ. (In pursuance of objective (5) & (6) of MOA)..
            ವಿಕಲಚೇತನ ವ್ಯಕ್ತಿಗಳ ಔಪಚಾರಿಕ ಮತ್ತು ಔಪಚಾರಿಕವಲ್ಲದ ಎರಡು ರೀತಿಯ ಶಿಕ್ಷಣ/ತರಬೇತಿಗಳಿಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ನಿಗಮವು ಒದಗಿಸುತ್ತದೆ. ಔಪಚಾರಿಕ ತರಬೇತಿಯಿಂದ ಫಲಾನುಭವಿಯು ಸೂಕ್ತವಾದ ಶೈಕ್ಷಣಿಕ/ಔದ್ಯೋಗಿಕ ತರಬೇತಿಯಿಂದ ತನ್ನ ಉದ್ಯೋಗ ಅವಕಾಶ ಮತ್ತು ಸ್ವಯಂ-ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಬೇಕು. ಉನ್ನತ ಶಿಕ್ಷಣ ಪಡೆದ ಆಭ್ಯರ್ಥಿಯು ಸಾಲಕ್ಕೆ ಯೋಗ್ಯನಾದರೆ, ಡಿಪ್ಲಮಾ ಮತ್ತು ಸರ್ಟಿಫಿಕೆಟ್ಗಳನ್ನು ಪಡೆದ ಆಭ್ಯರ್ಥಿಯು ಅನುದಾನವನ್ನು ಪಡೆಯಲು ಯೋಗ್ಯನಾಗಿರುತ್ತಾನೆ. ಫಲಾನುಭವಿಯ ಬೋಧನಾ ಶುಲ್ಕ ಮತ್ತು ಹಾಸ್ಟೆಲ್ ಸೌಲಭ್ಯದ ವೆಚ್ಚಗಳನ್ನು ಮಾತ್ರ ಪರಿಗಣಿಸಲಾಗುತ್ತದೆ, ಉಳಿದಂತೆ ಇತರೆ ಯಾವುದೇ ಉದ್ದೇಶಗಳ ವೆಚ್ಚವನ್ನು ಪರಿಗಣಿಸುವುದಿಲ್ಲ.

ಮುಂದುವರೆಯುವುದು…

D.Ed.SE.HI Hindi Question Papers