Friday, 26 June 2015


ವಿಕಲಚೇತನರ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪಂಚವಾರ್ಷಿಕ ಯೋಜನೆಯ ಮೂಲಕ ಸರ್ಕಾರೇತರ ಸಂಘಟನೆಗಳಿಗೆ ಅನುದಾನವನ್ನು ನೀಡುತ್ತಿದೆ. 1996ರಲ್ಲಿ PWD ಕಾಯ್ದೆಯ ಸೆಕ್ಷನ್-66ನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಗೊಳಿಸಲು, ವಿಕಲಚೇತನರ ಪುನರ್ವಸತಿಗಾಗಿ ಆಗ ಜಾರಿಯಲ್ಲಿದ್ದ ನಾಲ್ಕು ಯೋಜನೆಗಳನ್ನು ಒಟ್ಟುಗೂಡಿಸಿ ಒಂದೇ ಸೂರಿನಡಿ ತಂದು ವಿಕಲಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ವಯಂಸೇವ ಕಾರ್ಯಗಳ ಉತ್ತೇಜನಾ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ತದನಂತರ 01-04-2003ರಲ್ಲಿ ಸಂಯೋಜಿತ ಯೋಜನೆಯು ಅಂದಿನ ಸಚಿವಾಲಯದಿಂದ ಪರಿಷ್ಕೃತಗೊಂಡು ದೀನ್ದಯಾಳ್ ವಿಕಲಚೇತನರ ಪುನರ್ವಸತಿ ಯೋಜನೆ DDRS ಎಂದು ಮರುನಾಮಕರಣಗೊಂಡಿತು. ಅದರೂ, 2003ರಲ್ಲಿ ವೆಚ್ಚದ ನೀತಿಯು ಪರಿಷ್ಕರಣೆಗೊಳ್ಳಲಿಲ್ಲ
DDRS ಯೋಜನೆ ಅಡಿಯಲ್ಲಿ NGOಗಳು ವಿಕಲಚೇತನ ವ್ಯಕ್ತಿಗಳಿಗೆ/ಮಕ್ಕಳಿಗೆ ವಿವಿಧ ಶ್ರೇಣಿಯ ಸೇವೆಗಳನ್ನು ಒದಗಿಸುತ್ತಿವೆ. ಉದಾಹರಣೆಗೆ,
  1. ಪೂರ್ವ ಪ್ರಾಥಮಿಕ ಶಿಕ್ಷಕರ ಮತ್ತು ಶೀಘ್ರ ಮದ್ಯಸ್ಥಿಕೆ/ನಿರ್ವಹಣೆ
  2. ವಿಶೇಷ ಶಿಕ್ಷಣ
  3. ಔದ್ಯೋಗಿಕ ತರಬೇತಿ ಮತ್ತು ಸ್ಥಳನಿಯೋಜನೆ
  4. ಸಮುದಾಯ ಆಧಾರಿತ ಪುನರ್ವಸತಿ
  5. ಮಾನವ ಸಂಪನ್ಮೂಲ ಅಭಿವೃದ್ಧಿ
  6. ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಮಾನಸಿಕ-ಸಮಾಜಿಕ ಪುನರ್ವಸತಿ
  7. ಕುಷ್ಠ ರೋಗ ನಿವರಣೆಯಾದ ವ್ಯಕ್ತಿಗಳ ಪುನರ್ವಸತಿ

                                  ವಿಕಲಚೇತನರಿಗೆ ಅವಶ್ಯಕವಾದ ಸಾಧನ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಮತ್ತೊಂದು ಯೋಜನೆಯಾದ ವಿಕಲಚೇತನ ವ್ಯಕ್ತಿಗೆ ಸಾಧನ ಸಕಲರಣೆಗಳ ಕೊಳ್ಳಲು/ಅಳವಡಿಸಲು ಸಹಾಯ ಯೋಜನೆ (Scheme of Assistance to Disabled Persons for Purchase/Fitting of Aids/Appliances-ADIP) ಯನ್ನು ತಂದಿದೆ.
      ಸ್ವಯಂಸೇವ ಸಂಘಟನೆಗಳು ನೀಡುವ ಹಲವು ಶ್ರೇಣಿಯ ಸೇವೆಗಳಿಗೆ ಆರ್ಥಿಕ ನೆರವನ್ನು ನೀಡಲು ಅವಶ್ಯಕವಾದ ಮಾದರಿ ಯೋಜನೆಗಳ ಮಾಹಿತಿಯನ್ನು DDRS ಮಾರ್ಗದರ್ಶಿಕೆಯು ಒಳಗೊಂಡಿರುತ್ತದೆ. ಮಾದರಿ ಯೋಜನೆಯು ಕೆಳಕಂಡ ಮಾಹಿತಿಯನ್ನು ಒಳಗೊಂಡಿರುತ್ತದೆ.
  1.       ಉದ್ದೇಶ, ಅಗತ್ಯಗಳ ಪೂರೈಕೆ, ವಿಕಲತೆಗೆ ವಿಧದ ಅನುಗುಣವಾಗಿ ನಿಗಧಿ ಪಡಿಸಿಕೊಂಡ ಗುಂಪುಗಳು ಮತ್ತು ವಯಸ್ಸು ಹಾಗೂ ಕನಿಷ್ಟ ಸಂಖ್ಯೆಯ ಫಲಾನುಭವಿಗಳ ಮಾಹಿತಿ.
  2. ಶಿಕ್ಷಕರು ಮತ್ತು ಫಲಾನುಭವಿಗಳ ಅನುಪಾತ (ಪೂರ್ವ ಪ್ರಾಥಮಿಕ ಮತ್ತು ವಿಶೇಷ ಶಾಲೆಗಳು)
  3. ವ್ಯಾಪರದ ಸಂಖ್ಯೆ ಮತ್ತು ವ್ಯಾಪಾರದ ಸಚಿತ್ರ ವಿವರಣೆ (ಔದ್ಯೋಗಿಕ ತರಬೇತಿಗಾಗಿ)
  4. ನಿರ್ದಿಷ್ಟ ಸಂಖ್ಯೆಯ ಫಲಾನೂಭವಿಗಳಿಗೆ ಲಭ್ಯವಿರುವ ಗರಿಷ್ಟ ಪ್ರಮಾಣದ ಆವರ್ತಕ ಮತ್ತು ಅವರ್ತಕವಲ್ಲದ ಸಹಾಯವನ್ನು ವೆಚ್ಚದ ಮಾದರಿ ರೂಪದಲ್ಲಿ ನೀಡಬೇಕು.

ಸಂಬಂಧಿತ ಮಾದರಿ ಯೋಜನೆಯಲ್ಲಿನ ವೆಚ್ಚದ ನಿಯಮಗಳಿಗೆ ಒಳಪಡುವಂತೆ ಇರುವುದು ಕಂಡುಬಂದರೆ ಯೋಜನಾ ವೆಚ್ಚದ ಶೇ.90% ವರೆಗಿನ ಅನುದಾನವನ್ನು ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಎನ್.ಜಿ.ಒ.ಗಳಲ್ಲಿ ಸ್ವಾವಲಂಭನೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2007-08ರಿಂದ ಅನ್ವಯವಾಗುವಂತೆ ಸಂಪೂರ್ಣ ಸ್ವೀಕಾರಾರ್ಹ ಯೋಜನೆಯ ವೆಚ್ಚದಲ್ಲಿ 5% ನಿಧಿಯನ್ನು ಪ್ರತಿ ಪರ್ಯಾಯ ವರ್ಷದಲ್ಲಿ ಅನುದಾನದಲ್ಲಿ ಕಡಿತ ಮಾಡಲಾಗುತ್ತಿದೆ.

ಉದ್ದೇಶಗಳು :

ಯೋಜನೆಯ ಉದ್ದೇಶಗಳೆಂದರೆ,
  1. ಸಮಾನ ಅವಕಾಶ, ಸಮಾನತೆ, ಸಮಾಜಿಕ ನ್ಯಾಯ ಮತ್ತು ವಿಕಲಚೇತನ ವ್ಯಕ್ತಿಗಳ ಸಬಲೀಕರಣವನ್ನು ಖಾತ್ರಿಗೊಳಿಸುವ ಪರಿಸರದ ನಿರ್ಮಾಣ.
  2. 1995 ಅಂಗವಿಕಲ ವ್ಯಕ್ತಿಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ವಯಂ ಸೇವ ಸಂಘಟನೆಗಳ ಕಾರ್ಯವನ್ನು ಪ್ರೋತ್ಸಾಹಿಸುವುದು

                                                                                                                            ಮುಂದುವರೆಯುವುದು.....

Wednesday, 3 June 2015

      Rehabilitation Council of India Act - 1992

1992ರ ಭಾರತೀಯ ಪುನರ್ವಸತಿ ಮಂಡಳಿ ಕಾಯ್ದೆ

       ಭಾರತ ದೇಶದಲ್ಲಿನ ಪುನರ್ವಸತಿ ಸೇವೆಗಳ ಇತಿಹಾಸವನ್ನು ಗಮನಿಸಿದಾಗ ಪುನರ್ವಸತಿ ಸೇವೆಗಳು ಹೆಚ್ಚಾಗಿ ಸ್ವಯಂ ಸೇವಾ ಸಂಘಟನೆಗಳ ಮೂಲಕ ದೊರೆಯುತ್ತಿದ್ದದ್ದು ಕಂಡುಬರುತ್ತದೆ. ವಿಕಲಚೇತನ ಮಕ್ಕಳಿಗೆ ಶಿಕ್ಷಣ, ಶಿಕ್ಷಕರ ತರಬೇತಿ ಮತ್ತು ಪುನರ್ವಸತಿ ಕಾರ್ಯಗಳೆಲ್ಲವು ಸಹ ಇಂತಹ ಸಂಸ್ಥೆಗಳ ಮೂಲಕ ನಡೆಯುತ್ತಿತ್ತು. ಈ ಸಂಸ್ಥೆಗಳು ಸಡೆಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಏಕರೂಪತೆ ಇರಲಿಲ್ಲ. ಪ್ರತಿ ಸಂಸ್ಥೆಗಳು ತನ್ನ ಇಷ್ಟಾನೂಸಾರ ನೀತಿ-ನಿಯಮ-ತತ್ವಗಳನ್ನು ಅನುಸರಿಸಿ ಪುನರ್ವಸತಿ ಸೇವೆಗಳನ್ನು ನೀಡುತ್ತಿದ್ದವು. ಶಿಕ್ಷಕರ ತರಬೇತಿಯ ಪಠ್ಯಕ್ರಮ, ಪದ್ಧತಿ, ವಿಧಾನಗಳು ಸಹ ಸಂಸ್ಥೆಯಿಂದ ಸಂಸ್ಥೆಗಳಿಗೆ ಭಿನ್ನವಾಗಿತ್ತು.
          ವಿಕಲಚೇತನ ಮಕ್ಕಳಿಗಾಗಿ ತೆರೆಯಲಾಗಿದ್ದ ಸಂಸ್ಥೆಗಳಲ್ಲಿನ ಶಿಕ್ಷಕರು ತರಬೇತಿಯನ್ನು ಹೊಂದಿರದೆ, ಕೇವಲ ತಮ್ಮ ವೀಕ್ಷಣೆ ಮತ್ತು ಅನುಭವಗಳ ಆಧಾರದ ಮೇಲೆ ಮಕ್ಕಳಿಗೆ ಬೋಧಿಸುತ್ತಿದ್ದರು. ಕೆಲವು ಶಿಕ್ಷಕರು 5-6 ತಿಂಗಳುಗಳ ತರಬೇತಿಯಿಂದ ಹಿಡಿದು 3-4 ವರ್ಷಗಳವರೆಗಿನ ತರಬೇತಿಯನ್ನು ಹೊಂದಿರುತ್ತಿದ್ದರು. ಈ ತರಬೇತಿಗಳು ಸರ್ಕಾರದಿಂದಾಗಲೀ ಅಥವಾ ಇತರೆ ಯಾವುದೆ ಶೈಕ್ಷಣಿಕ ಮಂಡಳಿ/ಬೋರ್ಡ್ ಗಳಿದಾಗಲಿ ಮಾನ್ಯತೆಯನ್ನು ಹೊಂದಿರಲಿಲ್ಲ. ಆಗ ಸರ್ಕಾರಕ್ಕೆ ಇಂತಹ ಸಂಸ್ಥೆಗಳನ್ನು ಗುರುತಿಸಿ ಮಾನ್ಯತೆ ನೀಡಲು ಒಂದು ಪ್ರಮಾಣಿಕೃತ ಸಂಸ್ಥೆಯ ಅವಶ್ಯಕತೆ ಕಂಡು ಬಂದಿತು.
          1983ರಲ್ಲಿ ರಾಷ್ಟ್ರೀಯ ಅಂಗವಿಕಲರ ಮಂಡಳಿ (National Handicapped Council) ಎಂಬ ಸಲಹಾ ಅಂಗವು ಭಾರತ ಸರ್ಕಾರಕ್ಕೆ ವಿಕಲಚೇತನರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಿತ್ತು. ಇದು ದೇಶದಲ್ಲಿ ವಿಕಲಚೇತನರ ಶಿಕ್ಷಣ ಕ್ಷೇತ್ರದಲ್ಲಿ ಏಕರೂಪವಾದ ಪಠ್ಯಕ್ರಮ ಇಲ್ಲದೆ ಇರುವುದನ್ನು ಗುರುತಿಸಿತು. ಮುಂದೆ 1984ರಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವರ ಸಭೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಏಕರೂಪತೆಯನ್ನು, ಪ್ರಮಾಣೀಕೃತ ಮಟ್ಟವನ್ನು ತರಲು ಒಂದು ಸಂಸ್ಥೆಯ ಅವಶ್ಯಕತೆಯನ್ನು ಪ್ರತಿಪಾದಿಸಿತು. ಈ ಮನವಿಗೆ ಪೂರಕವಾಗಿ 1986ರಲ್ಲಿ “ಭಾರತೀಯ ಪುನರ್ವಸತಿ ಮಂಡಳಿ” ಒಂದು ನೋಂದಾಯಿತ ಸಂಘವಾಗಿ ಅಸ್ಥಿತ್ವಕ್ಕೆ ಬಂದಿತು. ವಿಕಲಚೇತನರ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡಲು ಸರ್ಕಾರವು “Justice Behrul Islam Committee”ಯನ್ನು ನೇಮಿಸಿತು. ಈ ಸಮೀತಿಯು ಶಾಸನ ಬದ್ದ ಸಂಸ್ಥೆಯ ಹೊರತು ದೇಶದಲ್ಲಿ ಏಕರೂಪನಾದ ಆದರ್ಶಿಕೃತ ವ್ಯವಸ್ಥೆಯನ್ನು ತರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತು. ಇದರ ಫಲವಾಗಿ ಸಂಸತ್ತಿನ ಅನುಮೊದನೆಯೊಂದಿಗೆ 1993ರ ಜೂಲೈ 31 ರಿಂದ ಭಾರತೀಯ ಪುನರ್ವಸತಿ ಮಂಡಳಿ ಕಾಯ್ದೆ-1992 ಕಾರ್ಯಾರಂಭಿಸಿತು. 

ಭಾರತೀಯ ಪುನರ್ವಸತಿ ಮಂಡಳಿಯ ಕಾರ್ಯಗಳು



ಹೆಚ್ಚಿನ ಮಾಹಿತಿಗಾಗಿ



          

D.Ed.SE.HI Hindi Question Papers