Friday, 26 June 2015


ವಿಕಲಚೇತನರ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪಂಚವಾರ್ಷಿಕ ಯೋಜನೆಯ ಮೂಲಕ ಸರ್ಕಾರೇತರ ಸಂಘಟನೆಗಳಿಗೆ ಅನುದಾನವನ್ನು ನೀಡುತ್ತಿದೆ. 1996ರಲ್ಲಿ PWD ಕಾಯ್ದೆಯ ಸೆಕ್ಷನ್-66ನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅನುಷ್ಠಾನಗೊಳಿಸಲು, ವಿಕಲಚೇತನರ ಪುನರ್ವಸತಿಗಾಗಿ ಆಗ ಜಾರಿಯಲ್ಲಿದ್ದ ನಾಲ್ಕು ಯೋಜನೆಗಳನ್ನು ಒಟ್ಟುಗೂಡಿಸಿ ಒಂದೇ ಸೂರಿನಡಿ ತಂದು ವಿಕಲಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ವಯಂಸೇವ ಕಾರ್ಯಗಳ ಉತ್ತೇಜನಾ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ತದನಂತರ 01-04-2003ರಲ್ಲಿ ಸಂಯೋಜಿತ ಯೋಜನೆಯು ಅಂದಿನ ಸಚಿವಾಲಯದಿಂದ ಪರಿಷ್ಕೃತಗೊಂಡು ದೀನ್ದಯಾಳ್ ವಿಕಲಚೇತನರ ಪುನರ್ವಸತಿ ಯೋಜನೆ DDRS ಎಂದು ಮರುನಾಮಕರಣಗೊಂಡಿತು. ಅದರೂ, 2003ರಲ್ಲಿ ವೆಚ್ಚದ ನೀತಿಯು ಪರಿಷ್ಕರಣೆಗೊಳ್ಳಲಿಲ್ಲ
DDRS ಯೋಜನೆ ಅಡಿಯಲ್ಲಿ NGOಗಳು ವಿಕಲಚೇತನ ವ್ಯಕ್ತಿಗಳಿಗೆ/ಮಕ್ಕಳಿಗೆ ವಿವಿಧ ಶ್ರೇಣಿಯ ಸೇವೆಗಳನ್ನು ಒದಗಿಸುತ್ತಿವೆ. ಉದಾಹರಣೆಗೆ,
  1. ಪೂರ್ವ ಪ್ರಾಥಮಿಕ ಶಿಕ್ಷಕರ ಮತ್ತು ಶೀಘ್ರ ಮದ್ಯಸ್ಥಿಕೆ/ನಿರ್ವಹಣೆ
  2. ವಿಶೇಷ ಶಿಕ್ಷಣ
  3. ಔದ್ಯೋಗಿಕ ತರಬೇತಿ ಮತ್ತು ಸ್ಥಳನಿಯೋಜನೆ
  4. ಸಮುದಾಯ ಆಧಾರಿತ ಪುನರ್ವಸತಿ
  5. ಮಾನವ ಸಂಪನ್ಮೂಲ ಅಭಿವೃದ್ಧಿ
  6. ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಮಾನಸಿಕ-ಸಮಾಜಿಕ ಪುನರ್ವಸತಿ
  7. ಕುಷ್ಠ ರೋಗ ನಿವರಣೆಯಾದ ವ್ಯಕ್ತಿಗಳ ಪುನರ್ವಸತಿ

                                  ವಿಕಲಚೇತನರಿಗೆ ಅವಶ್ಯಕವಾದ ಸಾಧನ ಸಲಕರಣೆಗಳನ್ನು ಕೇಂದ್ರ ಸರ್ಕಾರದ ಮತ್ತೊಂದು ಯೋಜನೆಯಾದ ವಿಕಲಚೇತನ ವ್ಯಕ್ತಿಗೆ ಸಾಧನ ಸಕಲರಣೆಗಳ ಕೊಳ್ಳಲು/ಅಳವಡಿಸಲು ಸಹಾಯ ಯೋಜನೆ (Scheme of Assistance to Disabled Persons for Purchase/Fitting of Aids/Appliances-ADIP) ಯನ್ನು ತಂದಿದೆ.
      ಸ್ವಯಂಸೇವ ಸಂಘಟನೆಗಳು ನೀಡುವ ಹಲವು ಶ್ರೇಣಿಯ ಸೇವೆಗಳಿಗೆ ಆರ್ಥಿಕ ನೆರವನ್ನು ನೀಡಲು ಅವಶ್ಯಕವಾದ ಮಾದರಿ ಯೋಜನೆಗಳ ಮಾಹಿತಿಯನ್ನು DDRS ಮಾರ್ಗದರ್ಶಿಕೆಯು ಒಳಗೊಂಡಿರುತ್ತದೆ. ಮಾದರಿ ಯೋಜನೆಯು ಕೆಳಕಂಡ ಮಾಹಿತಿಯನ್ನು ಒಳಗೊಂಡಿರುತ್ತದೆ.
  1.       ಉದ್ದೇಶ, ಅಗತ್ಯಗಳ ಪೂರೈಕೆ, ವಿಕಲತೆಗೆ ವಿಧದ ಅನುಗುಣವಾಗಿ ನಿಗಧಿ ಪಡಿಸಿಕೊಂಡ ಗುಂಪುಗಳು ಮತ್ತು ವಯಸ್ಸು ಹಾಗೂ ಕನಿಷ್ಟ ಸಂಖ್ಯೆಯ ಫಲಾನುಭವಿಗಳ ಮಾಹಿತಿ.
  2. ಶಿಕ್ಷಕರು ಮತ್ತು ಫಲಾನುಭವಿಗಳ ಅನುಪಾತ (ಪೂರ್ವ ಪ್ರಾಥಮಿಕ ಮತ್ತು ವಿಶೇಷ ಶಾಲೆಗಳು)
  3. ವ್ಯಾಪರದ ಸಂಖ್ಯೆ ಮತ್ತು ವ್ಯಾಪಾರದ ಸಚಿತ್ರ ವಿವರಣೆ (ಔದ್ಯೋಗಿಕ ತರಬೇತಿಗಾಗಿ)
  4. ನಿರ್ದಿಷ್ಟ ಸಂಖ್ಯೆಯ ಫಲಾನೂಭವಿಗಳಿಗೆ ಲಭ್ಯವಿರುವ ಗರಿಷ್ಟ ಪ್ರಮಾಣದ ಆವರ್ತಕ ಮತ್ತು ಅವರ್ತಕವಲ್ಲದ ಸಹಾಯವನ್ನು ವೆಚ್ಚದ ಮಾದರಿ ರೂಪದಲ್ಲಿ ನೀಡಬೇಕು.

ಸಂಬಂಧಿತ ಮಾದರಿ ಯೋಜನೆಯಲ್ಲಿನ ವೆಚ್ಚದ ನಿಯಮಗಳಿಗೆ ಒಳಪಡುವಂತೆ ಇರುವುದು ಕಂಡುಬಂದರೆ ಯೋಜನಾ ವೆಚ್ಚದ ಶೇ.90% ವರೆಗಿನ ಅನುದಾನವನ್ನು ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಎನ್.ಜಿ.ಒ.ಗಳಲ್ಲಿ ಸ್ವಾವಲಂಭನೆಯನ್ನು ಪ್ರೋತ್ಸಾಹಿಸುವ ಸಲುವಾಗಿ 2007-08ರಿಂದ ಅನ್ವಯವಾಗುವಂತೆ ಸಂಪೂರ್ಣ ಸ್ವೀಕಾರಾರ್ಹ ಯೋಜನೆಯ ವೆಚ್ಚದಲ್ಲಿ 5% ನಿಧಿಯನ್ನು ಪ್ರತಿ ಪರ್ಯಾಯ ವರ್ಷದಲ್ಲಿ ಅನುದಾನದಲ್ಲಿ ಕಡಿತ ಮಾಡಲಾಗುತ್ತಿದೆ.

ಉದ್ದೇಶಗಳು :

ಯೋಜನೆಯ ಉದ್ದೇಶಗಳೆಂದರೆ,
  1. ಸಮಾನ ಅವಕಾಶ, ಸಮಾನತೆ, ಸಮಾಜಿಕ ನ್ಯಾಯ ಮತ್ತು ವಿಕಲಚೇತನ ವ್ಯಕ್ತಿಗಳ ಸಬಲೀಕರಣವನ್ನು ಖಾತ್ರಿಗೊಳಿಸುವ ಪರಿಸರದ ನಿರ್ಮಾಣ.
  2. 1995 ಅಂಗವಿಕಲ ವ್ಯಕ್ತಿಗಳ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸ್ವಯಂ ಸೇವ ಸಂಘಟನೆಗಳ ಕಾರ್ಯವನ್ನು ಪ್ರೋತ್ಸಾಹಿಸುವುದು

                                                                                                                            ಮುಂದುವರೆಯುವುದು.....

No comments:

Post a Comment

D.Ed.SE.HI Hindi Question Papers