ದೀನ್ ದಯಾಳ್ ವಿಕಲಚೇತನರ ಪುನರ್ವಸತಿ ಯೋಜನೆಯ ಮಾರ್ಗ ಮತ್ತು ತಂತ್ರಗಳು
ವಿಕಲಚೇತನರ ಪುನರ್ವಸತಿಗೆ ಅಗತ್ಯವಾದ ವಿವಿಧ ಶ್ರೇಣಿಯ ಸೌಲಭ್ಯಗಳಾದ ಶೀಘ್ರ ಮದ್ಯಸ್ಥಿಕೆ, ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುವ ಕೌಶಲ್ಯಗಳ ಬೆಳವಣಿಗೆ, ಶಿಕ್ಷಣ, ಔದ್ಯೋಗಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೌಶಲ್ಯ ಅಭಿವೃದಿ, ತರಬೇತಿ ಮತ್ತು ಅರಿವು ಮೂಡಿಸಲು ಸ್ವಯಂ ಸೇವ ಸಂಘಟನೆಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು ಈ ಯೋಜನೆಯ ಮಾರ್ಗವಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ವಿಕಲಚೇತನ ವ್ಯಕ್ತಿಗಳನ್ನು ಸಮನ್ವಯಗೊಳಿಸುವ ಮತ್ತು ಅವರ ನೈಜ ಸಾರ್ಮಥ್ಯ ವಾಸ್ತವೀಕರಿಸುವ ದೃಷ್ಠಿಯಿಂದ ಯೋಜನೆಯ ಉದ್ದೇಶಗಳನ್ನು ಸಾಧಿಸುವ ದೆಸೆಯಲ್ಲಿ ಅನುಸರಿಸಬೇಕಾದ ಮುಖ್ಯವಾದ ತಂತ್ರಗಳೆಂದರೆ;
- ಎಲ್ಲಾ ಹಂತಗಳಲ್ಲೂ - ಕ್ಷೇತ್ರಗಳಲ್ಲೂ ಶೈಕ್ಷಣಿಕ ಅವಕಾಶಗಳು ಹೆಚ್ಚಿಸುವುದು ಹಾಗೂ ಅದಾಯದ ಉತ್ಪತ್ತಿ, ಲಾಭದಾಯಕ ಹುದ್ದೆಗಳು, ವೃತ್ತಿಪರ ಮತ್ತು ಉದ್ಯೋಗ ಅವಕಾಶಗಳ ಮಹತ್ವವನ್ನು ಹೆಚ್ಚಿಸುವುದು.
- ಔಪಚಾರಿಕ ಮತ್ತು ಅನೌಪಚಾರಿಕ ರೀತಿಯಲ್ಲಿ ಉದ್ಯೋಗಾವಕಾಶಗಳು ದೊರೆಯುವಂತೆ ಮಾಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು.
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಕವಾದ ಸಮೂದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು.
- ವಿಕಲಚೇತನರ ಚಟುವಟಿಕೆಗಳಲ್ಲಿ / ಯೋಜನೆಗಳಲ್ಲಿ / ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿ ಮಟ್ಟದಲ್ಲೂ ಕಾರ್ಯನಿರ್ವಹಿಸಲು ಅಗತ್ಯವಾದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೋಳಿಸುವುದು.
- ಮಾಹಿತಿ, ಸಾಕ್ಷ್ಯಚಿತ್ರ ಮತ್ತು ತರಬೇತಿ ಸಾಮಾಗ್ರಿಗಳ ಅಭಿವೃದ್ಧಿ, ಮುದ್ರಣ ಮತ್ತು ಹಂಚಿಕೆಯನ್ನು ಬೆಂಬಲಿಸುವುದು.
- ವಿವಿಧ ಮಟ್ಟಗಳಲ್ಲಿ ಸುಸರ್ಜ್ಜಿತ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು. ಸ್ವ-ಸಹಾಯ ಸಂಘ, ಪೋಷಕರ ಸಂಘಟನೆ ಮತ್ತು ಸ್ವತಂತ್ರ ಜೀವನ ನಡೆಸುವುದನ್ನು ಪ್ರೋತ್ಸಾಹಿಸುವುದು.
- ಸಹಕಾರ, ಸಮನ್ವಯ, ಜಾಲನೀರ್ಮಿಸುವುದು ಮತ್ತು ಬಹುವಲಯಗಳೊಂದಿಗೆ ಸೇರುವುದನ್ನು ಪ್ರೋತ್ಸಾಹಿಸುವುದು.
- ವಿಕಲಚೇತನರಿಂದ ರೂಪಿತವಾದ ಪರಿಸರ ಸ್ನೇಹಿ ಯೋಜನೆಗಳನ್ನು ಪ್ರೋತ್ಸಾಹಿಸುವುದು.
- ಕ್ರೀಡೆ, ಮನೊರಂಜನೆ, ಬಿಡುವಿನ ವೇಳೆಯ ಚಟುವಟಿಕೆಗಳು, ಪ್ರವಾಸ, ಸೃಜನಾತ್ಮಕ ಕಾರ್ಯಗಳನ್ನು ಬೆಂಬಲಿಸುವುದು.
- ಸೂಕ್ತ ಮನೆ ಮತ್ತು ವಸತಿ ನಿಲಯ ಸೌಲಭ್ಯಗಳನ್ನು ಹೊಂದಲು ಬೆಂಬಲವನ್ನು ನೀಡುವುದು.
- ಸಮೀಕ್ಷೆ ಮತ್ತು ಇತರೆ ರೋಗಗಳ ಅದ್ಯಾಯನವನ್ನು ಮಾಡಲು ಪ್ರೋತ್ಸಾಹಿಸುವುದು.
- ಬೆಳವಣಿಗೆ ಹೊಂದುತ್ತಿರುವ ವಿವಿಧ ಕ್ಷೇತ್ರಗಳಲ್ಲಿ, ಹೊಸ ರೀತಿಯ ತಂತ್ರಗಳಲ್ಲಿ, ಸಹಾಯಕ ಸಾಧನ ಸಲಕರಣೆ, ಮತ್ತು ಬಳಕೆಗೆ ಯೋಗ್ಯ ತಂತ್ರಜ್ಞಾನ ಬಗೆಗಿನ ಸಂಶೋಧನೆಯನ್ನು ಹಾಗೂ ಗುಣಮಟ್ಟದಿಂದ ಕೂಡಿದ ಈ ರೀತಿಯ ಸಾಧನಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.
- ವಿಕಲಚೇತನ ವ್ಯಕ್ತಿಗಳ ಮಾನವ ಹಕ್ಕು, ನಾಗರಿಕ ಹಕ್ಕು ಮತ್ತು ಗ್ರಾಹಕ ಹಕ್ಕುಗಳ ರಕ್ಷಣೆಯನ್ನು ಬೆಂಬಲಿಸುವುದು
- ಕಾನೂನು ಸಲಹೆ, ಕಾನೂನು ಸಾಧನ ಮತ್ತು ವಿಶ್ಲೇಷನೆ ಮತ್ತು ಪ್ರಸ್ತುತ ಲಭ್ಯವಿರುವ ಕಾನೂನಿನ ಮೌಲ್ಯಮಾಪನವನ್ನು ಒಳಗೊಂಡಂತೆ ಕಾನೂನು ಸಾಕ್ಷರತೆಯನ್ನು ಹೊಂದಲು ಸಹಾಯ ಮಾಡುವುದು.
- ವಿಕಲಚೇತನ ವ್ಯಕ್ತಿಗಳ ಅಗತ್ಯತೆಗಳನ್ನು ಪೂರೈಸುವ ಕ್ರಮಗಳನ್ನು ಬೆಂಬಲಿಸುವುದು ಮತ್ತು 1995ರ ಅಂಗವಿಕಲರ ಅಧಿನಿಯಮದಲ್ಲಿ ತಿಳಿಸಿರುವ ಕರ್ತವ್ಯಗಳನ್ನು ನಡೆಸುವುದು.
ಮುಂದುವರೆಯುವುದು....
ಈ Post ನ್ನು ಓದಿದ ನಂತರ ತಮ್ಮ ಅನಿಸಿಕೆಯನ್ನು ಹೇಳಲು ಮರೆಯದಿರಿ....
ಈ Post ನ್ನು ಓದಿದ ನಂತರ ತಮ್ಮ ಅನಿಸಿಕೆಯನ್ನು ಹೇಳಲು ಮರೆಯದಿರಿ....
No comments:
Post a Comment