Wednesday, 17 February 2016

 NATIONAL HANDICAPPED FINANCE AND DEVELOPMENT CORPORATION (NHFDC)

ರಾಷ್ಟ್ರೀಯ ಅಂಗವಿಕಲರ ಆರ್ಥಿಕ ಮತ್ತು ಅಭಿವೃದ್ಧಿ ನಿಗಮ

          ರಾಷ್ಟ್ರೀಯ ಅಂಗವಿಕಲರ ಆರ್ಥಿಕ ಮತ್ತು ಅಭಿವೃದ್ಧಿ ನಿಗಮವು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 1997  ಜನವರಿ 24ರಿಂದ ಕಾರ್ಯಾನಿರ್ವಹಿಸುತ್ತಿದೆ. ಇದು 1956 ಕಂಪನಿ ಕಾಯ್ದೆಯ ಸೆಕ್ಷನ್ 25 ಅಡಿಯಲ್ಲಿ ಶೂನ್ಯ ಲಾಭ ನಿರೀಕ್ಷೆಯ ಸಂಸ್ಥೆಯಾಗಿ ಜಾರಿಗೆ ಬಂದಿತು. ಇದು ಸಂರ್ಪೂಣ ಭಾರತ ಸರ್ಕಾರ ಸ್ವಯುಕ್ತದಾಗಿದ್ದು, ರೂ.400 ಕೋಟಿಗಳ ಮೂಲ ಬಂಡವಾಳವನ್ನು ತೋಡಗಿಸಿದೆ.

ಉದ್ದೇಶಗಳು:
  1. ವಿಕಲಚೇತನ ವ್ಯಕ್ತಿಗಳ ಕಲ್ಯಾಣಕ್ಕಾಗಿ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.
  2. ವಿಕಲಚೇತನ ವ್ಯಕ್ತಿಗಳ ಆರ್ಥಿಕ ಪುರ್ನವಸತಿಗಾಗಿ ಸ್ವ-ಉದ್ಯೋಗ ಮತ್ತು ಇತರೆ ಉದ್ಯಮಗಳನ್ನು ಪ್ರೋತ್ಸಾಹಿಸುವುದು.
  3. ವಿಕಲಚೇತನ ವ್ಯಕ್ತಿಗಳಿಗೆ / ವ್ಯಕ್ತಿಗಳ ಗುಂಪಿಗೆ ಸಾಲ ನೀಡುವ ಮೂಲಕ ಮತ್ತು ಆರ್ಥಿಕವಾಗಿ ಲಾಭದಾಯಕವಾದ ಯೋಜನೆಗಳಿಗೆ ಮುಂಗಡವನ್ನು ನೀಡಿ ಸಹಾಯ ಮಾಡುತ್ತದೆ.
  4. ಆಯ್ಕೆಯಾದ ವಿಕಲಚೇತನರಿಗೆ ಸರ್ಕಾರದ ಸಚಿವಾಲಯ/ರಾಜ್ಯ ಮಟ್ಟದ ಇಲಾಖೆಯ ಮಟ್ಟದಲ್ಲಿ ರಿಯಾಯ್ತಿ ದರದರದಲ್ಲಿ ಸಾಲವನ್ನು ನೀಡುವುದು.
  5. ಸಾಮಾನ್ಯ/ತಜ್ಞ/ತಾಂತ್ರಿಕ ಶಿಕ್ಷಣವನ್ನು ಪಡೆಯಲು ವಿಕಲಚೇತನರಿಗೆ ಸಾಲವನ್ನು ನೀಡುವುದು.
  6. ಉತ್ಪಾದನ ಘಟಕದ ಸೂಕ್ತ ಮತ್ತು ದಕ್ಷ ನಿರ್ವಹಣೆಗಾಗಿ ಅಗತ್ಯವಿರುವ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುವುದು.
  7. ವಿಕಲಚೇತನ ವ್ಯಕ್ತಿಗಳ ಆರ್ಥಿಕ ಏಳಿಗೆಗಾಗಿ ತರಬೇತಿ ಕಾರ್ಯಕ್ರಮಗಳನ್ನು, ಗುಣಮಟ್ಟವನ್ನು ಕಾಯ್ದುಕೊಳ್ಳುವ ಕಾರ್ಯಕ್ರಮಗಳನ್ನು, ತಂತ್ರಜ್ಞಾನವನ್ನು, ಸಾಮಾನ್ಯ ಸೌಲಭ್ಯಗಳನ್ನು ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
  8. ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಜ್ಯ ಮಟ್ಟದ ಸಂಘಟನೆಗಳಿಗೆ ಆರ್ಥಿಕ ಸಹಕಾರವನ್ನು ನೀಡುವುದರ ಮೂಲಕ ಸಹಾಯ ಮಾಡುವುದು
  9. ಇದು ರಾಜ್ಯ ಮಟ್ಟದ ಆರ್ಥಿಕ ನಿಗಮದ ಮೂಲಕ ವಿಕಲಚೇತನರಿಗೆ ಅಥವಾ ರಾಜ್ಯ ಸರ್ಕಾರ/ಮಂಡಳಿಗಳಿಂದ ನೇಮಿಸಲ್ಪಟ್ಟ ಸಂಬಂಧಿಸಿದ ನಿಗಮಗಳಿಗೆ ಹಣವನ್ನು ಒದಗಿಸುವ ಅಗ್ರ ಸಂಸ್ಥೆಯಾಗಿದೆ.
  10. ಸ್ವ-ಉದ್ಯೋಗವನ್ನು ಕೈಗೊಳ್ಳಯವ ವ್ಯಕ್ತಿಗಳಿಗೆ/ಗುಂಪುಗಳಿಗೆ ಅಥವಾ ನೋಂದಾಯಿತ ಕಾರ್ಖಾನೆಗಳು/ಕಂಪನಿಗಳು/ಸಹಕಾರಿ ವಿಕಲಚೇತನರ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವಲ್ಲಿ ಮತ್ತು ಕಛ್ಛಾ ವಸ್ತುಗಳನ್ನು ಕೊಳ್ಳಲು ಸಹಾಯವನ್ನು ಮಾಡುತ್ತದೆ.
  11. ಸ್ವ- ಉದ್ಯೋಗ, ವಿಕಲಚೇತನ ವ್ಯಕ್ತಿಗಳ ಆರ್ಥಿಕ ಚಟುವಟಿಕೆಗಳಲ್ಲಿ ನವೀನತೆಯ ಅಳವಡಿಕೆ, ತಾಂತ್ರಿಕ ಉನ್ನತೀಕರಣ ಮತ್ತು ಮೂಲ ಸೌಕರ್ಯಗಳಂತ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಯೋಗಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ, ನಡೆಸುವ ಮತ್ತು ಅನುಷ್ಟಾನಗೊಳಿಸುವ ಕಾರ್ಯವನ್ನು ಮಾಡುತ್ತದೆ.
  12. ವಿಕಲಚೇತನರಿಗೆ ಅಗತ್ಯವೆನಿಸಿದ ತಾಂತ್ರಿಕ, ನಿರ್ವಹಣೆ ಮತ್ತು ಆರ್ಥಿಕತೆಗಳಿಗೆ ಸಮಬಂಧಿಸಿದ ಸಂಶೋಧನೆಗಳನ್ನು ಕೈಗೊಳ್ಳುವುದು/ ಬೆಂಬಲಿಸುವುದು.
  13. ಸಂಸ್ಥೆಗಳನ್ನು ಪ್ರಾರಂಭಿಸಲು, ನಿರ್ವಹಣೆ ಮಾಡಲು, ಚಂದದಾರರಾಗಲು ಅಥವಾ ತರಬೇತಿ ಸಂಸ್ಥೆಗಳಿಗೆ, ಸಂಶೋಧನ ಸಂಸ್ಥೆಗಳಿಗೆ ಸದಸ್ಯರಾಗಲು ಸಹಾಯ ಮಾಡುತ್ತದೆ.


ಮುಂದುವರೆಯುವುದು…

D.Ed.SE.HI Hindi Question Papers