Wednesday, 22 June 2016

SCHEME OF ASSISTANCE TO DISABLED PERSONS FORPURCHASE/FITTING OF AIDS/APPLIANCES 

(ADIP SCHEME)

ವಿಕಲಚೇತನ ವ್ಯಕ್ತಿಗಳಿಗೆ ಸಾಧನ /ಸಲಕರಣೆಗಳನ್ನು ಕೊಳ್ಳಲು / ಅಳವಡಿಸಲು ಸಹಾಯ ಮಾಡುವ ಯೋಜನೆ

ಉದ್ದೇಶ:
            ಅಗತ್ಯತೆಯನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗೆ ದೀರ್ಘಕಾಲ ಬಾಳಿಕೆ ಬರುವ, ಅತ್ಯಾಧುನಿಕವೈಜ್ಞಾನಿಕವಾಗಿ ತಯಾರಿಸಿದ, ಆದರ್ಶಿಕೃತ ಸಾಧನ ಸಲಕರಣೆಗಳನ್ನು ವಿತರಿಸುವ ಮೂಲಕ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪುನರ್ವಸತಿ ಮಾಡುವ ಮೂಲಕ ವಿಕಲತೆಯ ಮಟ್ಟವನ್ನು ತಗ್ಗಿಸಿ ಅವರ ಆರ್ಥಿಕ ಮಟ್ಟವನ್ನು ಉತ್ತಮಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಕಲಚೇತನರಿಗೆ ಸಹಾಯಕ ಸಾಧನ ಸಲಕರಣೆಗಳನ್ನು ವಿತರಿಸುವ ಮೂಲಕ ವಿಕಲಚೇತನರು ಸ್ವತಂತ್ರರಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳವಂತೆ ಮಾಡುವುದು ಹಾಗೂ ನ್ಯೂನತೆಯು ಅಂಗವಿಕಲತೆಯಾಗುವುದನ್ನು ತಡೆಯುವುದು ಇದರ ಗುರಿಯಾಗಿದೆ.
ವ್ಯಾಪ್ತಿ:
            ಯೋಜನೆಯನ್ನು ಅನುಷ್ಟಾನ ಹೊಣೆ ಹೊತ್ತ ಏಜೆನ್ಸಿಗಳ ಮೂಲಕ ಅನುಷ್ಟಾನಗೋಳಿಸಲಾಗುತ್ತದೆ. ಯೋಜನೆಯ ಉದ್ದೇಶಗಳಿಗೆ ಅನುಗುಣವಾದ ಸಾಧನ ಸಲಕರಣೆಗಳನ್ನು ಕೊಳ್ಳಲು, ತಯಾರಿಸಲು ಹಾಗೂ ವಿತರಿಸಲು ಅವಶ್ಯಕವಾದ ಆರ್ಥಿಕ ನೆರವನ್ನು ಏಜೆನ್ಸಿಗಳಿಗೆ ನೀಡಲಾಗುತ್ತದೆ. ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯು ಸಾಧನ ಸಲಕರಣೆಯ ವಿತರಣೆ ಮತ್ತು ಅಳವಡಿಕೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯು ಸಾಧನ ಸಲಕರಣೆಗಳ ವಿತರಣೆಯ ಬಗ್ಗೆ ವ್ಯಾಪಕವಾದ ಪ್ರಚಾರವನ್ನು ನೀಡುತ್ತದೆ. ಶಿಬಿರವನ್ನು ಪ್ರಾರಂಭಿಸುವ ಮುನ್ನ ಸ್ಥಳೀಯ ಜಿಲ್ಲಾಧಿಕಾರಿಗಳು, ವಿಕಲಚೇತನ ಆಧಿಕಾರಿಗಳು, ಜನಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ವಿಕಲಚೇತನ ಇಲಾಖೆಗಳಿಗೆ ಕನಿಷ್ಠ ಒಂದು ವಾರ ಮುಂಚಿತವಾಗಿ ಶಿಬಿರ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಮಾಹಿತಿ ನೀಡುತ್ತಾರೆ. ಶಿಬಿರದ ಮುಕ್ತಯದ ನಂತರ ಫಲಾನುಭವಿಗಳ ಪಟ್ಟಿ ಮತ್ತು ಸಾಧನ ಸಲಕರಣೆಯ ವಿವರ ಹಾಗೂ ಅದಕ್ಕೆ ತಗುಲುವ ವೆಚ್ಚದೊಂದಿಗೆ ರಾಜ್ಯ ಸರ್ಕಾರ ಮತ್ತು ವಿಕಲಚೇತನರ ಇಲಾಖೆಗೆ ಸಲ್ಲಿಸಲಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
            ಅಷ್ಟೆ ಅಲ್ಲದೆ ಯೋಜನೆಯು ಸಾಧನ ಸಲಕರಣೆಗಳನ್ನು ಅಳವಡಿಸುವ ಮುನ್ನ ಅಗತ್ಯವಾದ ವೈದ್ಯಕೀಯ / ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಯೋಜನೆಯ ವಿವರ ಕೆಳಗಿನಂತಿದೆ.
  1. ಶ್ರವಣ ಮತ್ತು ಮಾತಿನ ನ್ಯೂನತೆಯನ್ನು ಹೊಂದಿರುವವರಿಗೆ ರೂ.500/- ರಿಂದ ರೂ.1,000/-
  2. ದೃಷ್ಟಿ ನ್ಯೂನತೆ ಹೊಂದಿರುವವರಿಗೆ ರೂ.1,000/- ರಿಂದ ರೂ.2,000/-
  3.  ಚಲನವಲನ ನ್ಯೂನತೆ ಹೊಂದಿರುವವರಿಗೆ ರೂ.3,000/- ರಿಂದ ರೂ.5,000/-

ಏಜೆನ್ಸಿ ಪಡೆಯಲು ಇರಬೇಕಾದ ಮಾನದಂಡಗಳು
            ಕೆಳಗಿನ ಏಜೆನ್ಸಿಗಳು ಸಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವ ವಿಕಲಚೇತನರ ಇಲಾಖೆಯಿಂದ ಏಜೆನ್ಸಿಯನ್ನು ಪ ಡೆಯಲು ಅರ್ಹರಾಗಿರುತ್ತಾವೆ.
  1.  1860 ಸೊಸೈಟಿ ರಿಜಿಸ್ಟ್ರೆಶನ್ ಕಾಯ್ದೆಯ ಅಡಿಯಲ್ಲಿ ನೋಂದಾಯಿತರಾದ ಸೊಸೈಟಿಗಳು ಮತ್ತು ಅದರ ಶಾಖೆಗಳು.
  2.  ನೋಂದಾಯಿತ ದತ್ತಿ/ಚಾರಿಟಬಲ್ ಟ್ರಸ್ಟ್
  3.  ರೆಡ್ ಕ್ರಾಸ್ ಸಂಸ್ಥೆ ಮತ್ತು ಇತರೆ ಜಿಲ್ಲಾಧಿಕಾರಿಗಳು/ಸಿ../ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಯುಕ್ತ ಸಂಸ್ಥೆಗಳು
  4.   ರಾಷ್ಟ್ರೀಯ/ಅಪೆಕ್ಸ್ ಸಂಸ್ಥೆಗಳು, CRCs, RCs, DDRCs ನ್ಯಾಷನಲ್ ಟ್ರಸ್ಟ್, ಅಲಿಂಕೊ(ALIMCO)
  5.  ರಾಷ್ಟ್ರೀಯ/ ರಾಜ್ಯ ವಿಕಲಚೇತನರ ಅಭಿವೃದ್ಧಿ ನಿಗಮ ಮತ್ತು ಖಾಸಗಿ ವಲಯದ ಸೆಕ್ಷನ್ 25 ಕಂಪನಿಗಳು
  6.  ಸ್ಥಳೀಯ ಸರ್ಕಾರಗಳು- ಜಿಲ್ಲಾ ಪಂಚಾಯತ್, ಮುನ್ಸಿಪಲ್, ಜಿಲ್ಲಾ ಸ್ವಾಯುಕ್ತ ಅಭಿವೃದ್ಧಿ ನಿಗಮ ಮತ್ತು ಪಂಚಾಯತ್ಗಳು ಇತ್ಯಾದಿ...
  7. ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ಶಿಫಾರಸ್ಸುಗೊಂಡ ಆಸ್ಪತ್ರಗಳು
  8.  ನೆಹರು ಯುವ ಕೇಂದ್ರ
  9. ವಿಕಲಚೇತನರ ಇಲಾಖೆಯಿಂದ ಅಥವಾ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ಗುರುತಿಸಲಾದ ಸಂಸ್ಥೆ/ಸಂಘಟನೆ.

            ಯೋಜನೆಯ ಅಡಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಸಾಧನ ಸಲಕರಣೆಗಳನ್ನು ಉತ್ಪಾದನೆ ಮಾಡುವ ಅಥವಾ ಸರಬರಾಜು ಮಾಡುವ ಕಾರ್ಯಗಳಿಗೆ ಅನುದಾನವನ್ನು ನೀಡುವುದಿಲ್ಲ.

ಫಲಾನುಭವಿಗಳ ಅರ್ಹತೆ:
     ಈ ಕೆಳಗಿನ ಮಾನದಂಡಗಳನ್ನು ಹೊಂದಿರುವ ವಿಕಲಚೇತನ ವ್ಯಕ್ತಿಯು ADIP ಯೋಜನೆಯ ಅಡಿಯಲ್ಲಿ ಫಲಾನುಭವಿಯಾಗಲು ಅರ್ಹನಾಗಿರುತ್ತಾನೆ.
  1.  ಯಾವುದೇ ವಯಸ್ಸಿನ ಭಾರತೀಯ ಪ್ರಜೆ.
  2. 40% ಪ್ರಮಾಣದ ವಿಕಲತೆಯನ್ನು ಹೊಂದಿರುವ ಪ್ರಮಾಣ ಪತ್ರ.
  3. ವ್ಯಕ್ತಿಯ ಮಾಸಿಕ ವರಮಾನ ಎಲ್ಲಾ ಮೂಲಗಳಿಂದ ರೂ.20,000/- ಮೀರ ಬಾರದು.
  4.  ಅವಲಂಬಿತರಾಗಿದ್ದರೆ, ಪೋಷಕರ ಮಾಸಿಕ ವರಮಾನ ಎಲ್ಲಾ ಮೂಲಗಳಿಂದ ರೂ.20,000/- ಮೀರ ಬಾರದು.
  5. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಬೇರೆ ಯಾವುದೇ ಮೂಲಗಳಿಂದ ಒಂದೇ ಉದ್ದೇಶಕ್ಕಾಗಿ ಸಹಾಯವನ್ನು  ಪಡೆದಿರಬಾರದು. 12 ವರ್ಷದ ಒಳಗಿನ ಮಕ್ಕಳಗೆ ಮಿತಿಯನ್ನು ಒಂದು ವರ್ಷಕ್ಕೆ ಸಡಿಸಲಾಗಿದೆ.
                                                                                                                        ಮುಂದುವರೆಯುವುದು....

Monday, 6 June 2016

ಸ್ವಾವಲಂಭನ್ ಆರೋಗ್ಯ ವಿಮಾ ಯೋಜನೆ



                ನಮ್ಮ ದೇಶದಲ್ಲಿ ವಿಕಲಚೇತನರಿಗೆ ಹಾಗೂ ಅವರ ಕುಟುಂಬಕ್ಕೆ ಸಂಬಂಧಪಟ್ಟಂತೆ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದ ವಿಮಾ ಯೋಜನೆ ಇದಾಗಿದೆ. ಯೋಜನೆಯನ್ನು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ 2015 ಅಕ್ಟೋಬರ್ 2 ರಂದು ಜಾರಿಗೆ ತಂದಿತು. ಯೋಜನೆಯನ್ನು ಅನುಷ್ಠಾನಗೊಳಿಸಲು ದಿ ನ್ಯೂ ಇಂಡಿಯ ಅಶ್ಯುರೆನ್ಸ್ ಕಂಪನಿ ಲಿಮಿಟೆಡ್ರವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಟ್ಟು ವಿಮೆಯ ಮೊತ್ತ ರೂ.3100/- ಆದರೆ ವಿಕಲಚೇತನ ವ್ಯಕ್ತಿ ಕೇವಲ ರೂ.355/- ಮಾತ್ರ ಪಾವತಿಸಬೇಕು. ಉಳಿದ ಹಣವನ್ನು ಕೇಂದ್ರ ಸರ್ಕಾರವೇ ವಿಮಾ ಕಂಪನಿಗೆ ನೇರವಾಗಿ ಪಾವತಿಸುತ್ತದೆ. ಒಳರೋಗಿಯಾಗಿ ಅಥವಾ ಹೊರ ರೋಗಿಯಾಗಿಯೂ ಸಹ ನಿಗದಿಪಡಿಸಿದ ಮಿತಿಯೊಳಗೆ ಹಣವಿಲ್ಲದೆ ಸೇವೆಯನ್ನು ಪಡೆಯಬಹುದು. ತುರ್ತು ಸಂದರ್ಭದಲ್ಲಿ ಹತ್ತಿರದ ಯಾವುದೇ ನೋಂದಾಯಿತ ಆಸ್ಪತ್ರಯಲ್ಲಿ  ಚಿಕಿತ್ಸೆ ಪಡೆದಿದ್ದೇ ಆದಲ್ಲಿ ವೆಚ್ಚವನ್ನು ಮರುಪಾವತಿ ಮಾಡಲಾಗುತ್ತದೆ. ಹತ್ತಿರದಲ್ಲಿ ನೋಂದಾಯಿತ ಆಸ್ಪತ್ರೆಯೊಲ್ಲದಿದ್ದಲ್ಲಿ ಥರ್ಡ್ ಪಾರ್ಟಿ ಅಲಯನ್ಸ್ ಅನುಮತಿ ಪಡೆದು ಇತರೆ ಆಸ್ಪತ್ರೆಗಳಲ್ಲೂ ಸಹ ಚಿಕಿತ್ಸೆ ಪಡೆಯಬಹುದು.
ಆರ್ಹತೆ :
  • 18  ರಿಂದ 65 ವರ್ಷದೊಳಗಿನವರಾಗಿರಬೇಕು
  • ಅಲ್ಪದೃಷ್ಟಿದೋಷ, ಅಂಧತ್ವ, ಕುಷ್ಠರೋಗದಿಂದಾದ ವಿಕಲಚೇತನರು, ಮಾಕ್ ಮತ್ತು ಶ್ರವಣದೋಷವುಳ್ಳವರು, ದೈಹಿಕ ವಿಕಲಚೇತನರು, ಬುದ್ದಿಮಾಂದ್ಯರು ಮತ್ತು ಮಾನಸಿಕ ಅಸ್ವಸ್ಥರು
  • ಕುಟುಂಬದ ವಾರ್ಷಿಕ ವರಮಾನ ರೂ.3 ಲಕ್ಷದ ಒಳಗಿರಬೇಕು
  • ವಿಕಲಚೇತನ ವ್ಯಕ್ತಿಗೆ ಮದುವೆಯಾಗಿದ್ದರೆ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡಂತೆ 4 ಜನರನ್ನು ಮಾತ್ರ ಒಳಗೊಳ್ಳುತ್ತದೆ
  • ವಿಕಲಚೇತನ ವ್ಯಕ್ತಿ ಮದುವೆಯಾಗದೇ ಇದ್ದಲ್ಲಿ ವ್ಯಕ್ತಿಗೆ ಮಾತ್ರ ಸೀಮಿತ
  • ಇತರೆ ಆರೋಗ್ಯ ವಿಮಾ ಯೋಜನೆಗಳಲ್ಲಿ ಈಗಾಗಲೇ ವಿಮೆ ಮಾಡಿಸಿದ್ದವರು ಸಹ ಸೌಲಭ್ಯವನ್ನು ಪಡೆಯಬಹುದು.

ಬೇಕಾದ ದಾಖಲೆಗಳು:
  • ನಿಗದಿತ ಅರ್ಜಿ ನಮೂನೆ
  • ವಿಮಾ ಯೋಜನೆಯಲ್ಲಿ ಒಳಪಡುವ ಎಲ್ಲಾ ಸದಸ್ಯರ 2 ಫೋಟೊಗಳು
  •  ಅಂಗವಿಕಲತೆಯ ಗುರುತಿನ ಚೀಟಿ
  • ಬ್ಯಾಂಕ್ ಪಾಸ್ ಬುಕ್ ಛಯಾ ಪ್ರತಿ ಮತ್ತು ರದ್ದಾಗಿರುವ/ ಪಡಿಸಿದ ಚೆಕ್
  •   ವಿಳಾಸ ದೃಢೀಕರಣ ಪತ್ರ : ಆಧಾರ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ / ಚಾಲನಾ ಪರವಾನಿಗೆ
  •  ರೂ. 355/- ಹಣವನ್ನು ಪಾವತಿಸಬೇಕು

ಸ್ವಾವಲಂಭನ್ ಆಯೋಗ್ಯ ವಿಮಾ ಯೋಜನೆಯಿಂದ ಪಡೆಯಬಹುದಾದ ಸೌಲಭ್ಯಗಳು
  • ವಿಕಲಚೇತನ ವ್ಯಕ್ತಿ ಅಥವಾ ಮದುವೆಯಾಗಿದ್ದಲ್ಲಿ ಹೆಂಡತಿ, ಇಬ್ಬರು ಮಕ್ಕಳ ಒಟ್ಟು ಕುಟುಂಬಕ್ಕೆ ರೂ.2 ಲಕ್ಷ ವಿಮಾ ಸೌಲಭ್ಯ ಇರುತ್ತದೆ.
  • ಹೊರರೋಗಿಯಾಗಿ ಅಥವಾ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದು
  • ದೈಹಿಕ ವಿಕಲಚೇತನರು ಹೊರರೋಗಿಯಾಗಿ ರೂ.10 ಸಾವಿರದ ಒಳಗೆ ಕರೆಕ್ಟಿವ್ ಥೆರಪಿ ಪಡೆಯಬಹುದು
  • ಬುದ್ದಿಮಾಂದ್ಯತೆ ಮತ್ತು ಮಾನಸಿಕ ಅಸ್ವಸ್ಥ ವಿಕಲಚೇತನರು ಹೊರರೋಗಿಯಾಗಿ ರೂ.3000/- ವರೆಗೆ ಚಿಕಿತ್ಸೆ ಮತ್ತು ಔಷದೋಪಚಾರಗಳನ್ನು ಪಡೆಯಬಹುದು
  • ಅಸ್ಪತ್ರೆ ದಾಖಲಾಗುವುದಕ್ಕಿಂತ ಮೊದಲು ಚಿಕಿತ್ಸೆ ಪಡೆದುಕೊಂಡಿದ್ದಲ್ಲಿ ಅದನ್ನು ಮರುಪಾವತಿ ಮಾಡುತ್ತರೆ (ದಂತ ಚಿಕಿತ್ಸೆ ಬಿಟ್ಟು)
  •  ಅಂಗವಿಕಲತೆ ಮಾತ್ರವಲ್ಲದೆ, ಅಪಘಾತ ಹಾಗೂ ಇತರೆ ಖಾಯಿಲೆಗಳಿಗೂ ಸಹ ಚಿಕಿತ್ಸೆ ಪಡೆಯಬಹುದು.

ಸೌಲಭ್ಯವನ್ನು ಎಲ್ಲಿ ಪಡೆಯಬಹುದು ?
  •  ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿ ಲಿಮಿಟೆಡ್ ಶಾಖೆಗಳಿಂದ ಪಡೆಯಬಹುದು
  • ಸಂಘ - ಸಂಸ್ಥೆಗಳ ಮೂಲಕ ಸುಲಭವಾಗಿ ಪಡೆಯಬಹುದು
  •   ವೈಯಕ್ತಿಕವಾಗಿಯೂ ಸಹ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ದಿ ನೂ ಇಂಡಿಯ ಅಶ್ಯುರೆನ್ಸ್ ಕಂಪನಿ ಲಿಮಿಟೆಡ್ ಶಾಖಾ ಕಛೇರಿಯನ್ನು ಸಂಪರ್ಕಿಸಬಹುದು.

ಉಚಿತ ದೂರವಾಣಿ ಸಂಖ್ಯೆ : 1800-233-1166,1800-233-4505

D.Ed.SE.HI Hindi Question Papers