Wednesday, 22 June 2016

SCHEME OF ASSISTANCE TO DISABLED PERSONS FORPURCHASE/FITTING OF AIDS/APPLIANCES 

(ADIP SCHEME)

ವಿಕಲಚೇತನ ವ್ಯಕ್ತಿಗಳಿಗೆ ಸಾಧನ /ಸಲಕರಣೆಗಳನ್ನು ಕೊಳ್ಳಲು / ಅಳವಡಿಸಲು ಸಹಾಯ ಮಾಡುವ ಯೋಜನೆ

ಉದ್ದೇಶ:
            ಅಗತ್ಯತೆಯನ್ನು ಹೊಂದಿರುವ ವಿಕಲಚೇತನ ವ್ಯಕ್ತಿಗಳಿಗೆ ದೀರ್ಘಕಾಲ ಬಾಳಿಕೆ ಬರುವ, ಅತ್ಯಾಧುನಿಕವೈಜ್ಞಾನಿಕವಾಗಿ ತಯಾರಿಸಿದ, ಆದರ್ಶಿಕೃತ ಸಾಧನ ಸಲಕರಣೆಗಳನ್ನು ವಿತರಿಸುವ ಮೂಲಕ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪುನರ್ವಸತಿ ಮಾಡುವ ಮೂಲಕ ವಿಕಲತೆಯ ಮಟ್ಟವನ್ನು ತಗ್ಗಿಸಿ ಅವರ ಆರ್ಥಿಕ ಮಟ್ಟವನ್ನು ಉತ್ತಮಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ವಿಕಲಚೇತನರಿಗೆ ಸಹಾಯಕ ಸಾಧನ ಸಲಕರಣೆಗಳನ್ನು ವಿತರಿಸುವ ಮೂಲಕ ವಿಕಲಚೇತನರು ಸ್ವತಂತ್ರರಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳವಂತೆ ಮಾಡುವುದು ಹಾಗೂ ನ್ಯೂನತೆಯು ಅಂಗವಿಕಲತೆಯಾಗುವುದನ್ನು ತಡೆಯುವುದು ಇದರ ಗುರಿಯಾಗಿದೆ.
ವ್ಯಾಪ್ತಿ:
            ಯೋಜನೆಯನ್ನು ಅನುಷ್ಟಾನ ಹೊಣೆ ಹೊತ್ತ ಏಜೆನ್ಸಿಗಳ ಮೂಲಕ ಅನುಷ್ಟಾನಗೋಳಿಸಲಾಗುತ್ತದೆ. ಯೋಜನೆಯ ಉದ್ದೇಶಗಳಿಗೆ ಅನುಗುಣವಾದ ಸಾಧನ ಸಲಕರಣೆಗಳನ್ನು ಕೊಳ್ಳಲು, ತಯಾರಿಸಲು ಹಾಗೂ ವಿತರಿಸಲು ಅವಶ್ಯಕವಾದ ಆರ್ಥಿಕ ನೆರವನ್ನು ಏಜೆನ್ಸಿಗಳಿಗೆ ನೀಡಲಾಗುತ್ತದೆ. ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯು ಸಾಧನ ಸಲಕರಣೆಯ ವಿತರಣೆ ಮತ್ತು ಅಳವಡಿಕೆಯ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯು ಸಾಧನ ಸಲಕರಣೆಗಳ ವಿತರಣೆಯ ಬಗ್ಗೆ ವ್ಯಾಪಕವಾದ ಪ್ರಚಾರವನ್ನು ನೀಡುತ್ತದೆ. ಶಿಬಿರವನ್ನು ಪ್ರಾರಂಭಿಸುವ ಮುನ್ನ ಸ್ಥಳೀಯ ಜಿಲ್ಲಾಧಿಕಾರಿಗಳು, ವಿಕಲಚೇತನ ಆಧಿಕಾರಿಗಳು, ಜನಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ವಿಕಲಚೇತನ ಇಲಾಖೆಗಳಿಗೆ ಕನಿಷ್ಠ ಒಂದು ವಾರ ಮುಂಚಿತವಾಗಿ ಶಿಬಿರ ನಡೆಯುವ ಸ್ಥಳ ಮತ್ತು ದಿನಾಂಕದ ಬಗ್ಗೆ ಮಾಹಿತಿ ನೀಡುತ್ತಾರೆ. ಶಿಬಿರದ ಮುಕ್ತಯದ ನಂತರ ಫಲಾನುಭವಿಗಳ ಪಟ್ಟಿ ಮತ್ತು ಸಾಧನ ಸಲಕರಣೆಯ ವಿವರ ಹಾಗೂ ಅದಕ್ಕೆ ತಗುಲುವ ವೆಚ್ಚದೊಂದಿಗೆ ರಾಜ್ಯ ಸರ್ಕಾರ ಮತ್ತು ವಿಕಲಚೇತನರ ಇಲಾಖೆಗೆ ಸಲ್ಲಿಸಲಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಅನುಷ್ಟಾನದ ಹೊಣೆ ಹೊತ್ತ ಏಜೆನ್ಸಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
            ಅಷ್ಟೆ ಅಲ್ಲದೆ ಯೋಜನೆಯು ಸಾಧನ ಸಲಕರಣೆಗಳನ್ನು ಅಳವಡಿಸುವ ಮುನ್ನ ಅಗತ್ಯವಾದ ವೈದ್ಯಕೀಯ / ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಯೋಜನೆಯ ವಿವರ ಕೆಳಗಿನಂತಿದೆ.
  1. ಶ್ರವಣ ಮತ್ತು ಮಾತಿನ ನ್ಯೂನತೆಯನ್ನು ಹೊಂದಿರುವವರಿಗೆ ರೂ.500/- ರಿಂದ ರೂ.1,000/-
  2. ದೃಷ್ಟಿ ನ್ಯೂನತೆ ಹೊಂದಿರುವವರಿಗೆ ರೂ.1,000/- ರಿಂದ ರೂ.2,000/-
  3.  ಚಲನವಲನ ನ್ಯೂನತೆ ಹೊಂದಿರುವವರಿಗೆ ರೂ.3,000/- ರಿಂದ ರೂ.5,000/-

ಏಜೆನ್ಸಿ ಪಡೆಯಲು ಇರಬೇಕಾದ ಮಾನದಂಡಗಳು
            ಕೆಳಗಿನ ಏಜೆನ್ಸಿಗಳು ಸಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಅಡಿಯಲ್ಲಿ ಬರುವ ವಿಕಲಚೇತನರ ಇಲಾಖೆಯಿಂದ ಏಜೆನ್ಸಿಯನ್ನು ಪ ಡೆಯಲು ಅರ್ಹರಾಗಿರುತ್ತಾವೆ.
  1.  1860 ಸೊಸೈಟಿ ರಿಜಿಸ್ಟ್ರೆಶನ್ ಕಾಯ್ದೆಯ ಅಡಿಯಲ್ಲಿ ನೋಂದಾಯಿತರಾದ ಸೊಸೈಟಿಗಳು ಮತ್ತು ಅದರ ಶಾಖೆಗಳು.
  2.  ನೋಂದಾಯಿತ ದತ್ತಿ/ಚಾರಿಟಬಲ್ ಟ್ರಸ್ಟ್
  3.  ರೆಡ್ ಕ್ರಾಸ್ ಸಂಸ್ಥೆ ಮತ್ತು ಇತರೆ ಜಿಲ್ಲಾಧಿಕಾರಿಗಳು/ಸಿ../ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಯುಕ್ತ ಸಂಸ್ಥೆಗಳು
  4.   ರಾಷ್ಟ್ರೀಯ/ಅಪೆಕ್ಸ್ ಸಂಸ್ಥೆಗಳು, CRCs, RCs, DDRCs ನ್ಯಾಷನಲ್ ಟ್ರಸ್ಟ್, ಅಲಿಂಕೊ(ALIMCO)
  5.  ರಾಷ್ಟ್ರೀಯ/ ರಾಜ್ಯ ವಿಕಲಚೇತನರ ಅಭಿವೃದ್ಧಿ ನಿಗಮ ಮತ್ತು ಖಾಸಗಿ ವಲಯದ ಸೆಕ್ಷನ್ 25 ಕಂಪನಿಗಳು
  6.  ಸ್ಥಳೀಯ ಸರ್ಕಾರಗಳು- ಜಿಲ್ಲಾ ಪಂಚಾಯತ್, ಮುನ್ಸಿಪಲ್, ಜಿಲ್ಲಾ ಸ್ವಾಯುಕ್ತ ಅಭಿವೃದ್ಧಿ ನಿಗಮ ಮತ್ತು ಪಂಚಾಯತ್ಗಳು ಇತ್ಯಾದಿ...
  7. ಕೇಂದ್ರ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ಶಿಫಾರಸ್ಸುಗೊಂಡ ಆಸ್ಪತ್ರಗಳು
  8.  ನೆಹರು ಯುವ ಕೇಂದ್ರ
  9. ವಿಕಲಚೇತನರ ಇಲಾಖೆಯಿಂದ ಅಥವಾ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ ಗುರುತಿಸಲಾದ ಸಂಸ್ಥೆ/ಸಂಘಟನೆ.

            ಯೋಜನೆಯ ಅಡಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಸಾಧನ ಸಲಕರಣೆಗಳನ್ನು ಉತ್ಪಾದನೆ ಮಾಡುವ ಅಥವಾ ಸರಬರಾಜು ಮಾಡುವ ಕಾರ್ಯಗಳಿಗೆ ಅನುದಾನವನ್ನು ನೀಡುವುದಿಲ್ಲ.

ಫಲಾನುಭವಿಗಳ ಅರ್ಹತೆ:
     ಈ ಕೆಳಗಿನ ಮಾನದಂಡಗಳನ್ನು ಹೊಂದಿರುವ ವಿಕಲಚೇತನ ವ್ಯಕ್ತಿಯು ADIP ಯೋಜನೆಯ ಅಡಿಯಲ್ಲಿ ಫಲಾನುಭವಿಯಾಗಲು ಅರ್ಹನಾಗಿರುತ್ತಾನೆ.
  1.  ಯಾವುದೇ ವಯಸ್ಸಿನ ಭಾರತೀಯ ಪ್ರಜೆ.
  2. 40% ಪ್ರಮಾಣದ ವಿಕಲತೆಯನ್ನು ಹೊಂದಿರುವ ಪ್ರಮಾಣ ಪತ್ರ.
  3. ವ್ಯಕ್ತಿಯ ಮಾಸಿಕ ವರಮಾನ ಎಲ್ಲಾ ಮೂಲಗಳಿಂದ ರೂ.20,000/- ಮೀರ ಬಾರದು.
  4.  ಅವಲಂಬಿತರಾಗಿದ್ದರೆ, ಪೋಷಕರ ಮಾಸಿಕ ವರಮಾನ ಎಲ್ಲಾ ಮೂಲಗಳಿಂದ ರೂ.20,000/- ಮೀರ ಬಾರದು.
  5. ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಬೇರೆ ಯಾವುದೇ ಮೂಲಗಳಿಂದ ಒಂದೇ ಉದ್ದೇಶಕ್ಕಾಗಿ ಸಹಾಯವನ್ನು  ಪಡೆದಿರಬಾರದು. 12 ವರ್ಷದ ಒಳಗಿನ ಮಕ್ಕಳಗೆ ಮಿತಿಯನ್ನು ಒಂದು ವರ್ಷಕ್ಕೆ ಸಡಿಸಲಾಗಿದೆ.
                                                                                                                        ಮುಂದುವರೆಯುವುದು....

No comments:

Post a Comment

D.Ed.SE.HI Hindi Question Papers