ಯೋಜನೆಯ
ಪ್ರಸ್ತಾವನೆಯ ಪ್ರಮುಖ್ಯತೆ ಮತ್ತು ಗುಣಗಳ ಆಧಾರದ ಮೇಲೆ ನೆರವು/ಅನುದಾನದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.
ನಿಗದಿತ ವೆಚ್ಚ ಮಾನದಂಡಗಳ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.90% ಹಣವನ್ನು ನೀಡಲಾಗುತ್ತದೆ. NGOಗಳ
ಸ್ವಾವಲಂಬನೆಯನ್ನು ಪ್ರೋತ್ಸಾಹಿಸಲು, ನಗರ ಪ್ರದೇಶದ ಯೋಜನೆಗೆ 7 ವರ್ಷಗಳ ಕಾಲ ಅನುದಾನವನ್ನು ನೀಡಿದ
ನಂತರ ಪ್ರತಿ ಪರ್ಯಾಯ ವರ್ಷದಲ್ಲೂ 5% ರಷ್ಟೂ ಅನುದಾನವನ್ನು ತಗ್ಗಿಸಲಾಗುತ್ತದೆ. ತನ್ಮೂಲಕ ಅನುದಾನವನ್ನು
75% ರಷ್ಟು ಇಳಿಸಬಹುದು.
ಅರ್ಜಿ ಮತ್ತು ಮಂಜೂರಾತಿ:
ಹೊಸ
ಯೋಜನೆ:
ಹೊಸ
ಯೋಜನೆಗಳಿಗೆ ಅನುದಾನವನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ/ರಾಜ್ಯ ಆಯುಕ್ತರು/ ರಾಷ್ಟ್ರೀಯ ಸಂಸ್ಥೆಗಳು/ಸಂಘಟನೆ/ಸಮಾಜೀಕ
ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಈ ಉದ್ದೇಶಕ್ಕಾಗಿ ರಚಿತವಾದ ಇತರೆ ಯಾವುದೆ ವ್ಯವಸ್ಥೆಯಿಂದ ಸೂಚಿತ ನಮೂನೆಯಲ್ಲಿ ಶಿಫಾರಸ್ಸು ಮಾಡಬೇಕು. ವೃತ್ತಿಪರರಿಗೆ
ತರಬೇತಿ ನೀಡಲು ಉದ್ದೇಶಿಸಿರುವ ಹೊಸ ಯೋಜನೆಗಳು ಮಾನ್ಯತೆ ಮತ್ತು ಬೆಂಬಲಕ್ಕಾಗಿ RCI ಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಯೋಜನೆಯನ್ನು
ಮುಂದುವರೆಸುವುದು:
ಸೂಚಿತ
ನಮೂನೆಯ ಅರ್ಜಿಯನ್ನು ಅನುದಾನ ಬಿಡುಗಡೆಗಾಗಿ ಸಲ್ಲಿಸಬೇಕು. ಅನುದಾನ ಬಿಡುಗಡೆಗಾಗಿ ಈ ಕೆಳಕಂಡ ದಾಖಲೆಗಳನ್ನು
ಸಲ್ಲಿಸುವುದು ಅಗತ್ಯವಾಗಿರುತ್ತವೆ.
- ಅನುದಾನವನ್ನು ಪಡೆಯಲು ಇಚ್ಚಿಸುವ ಆರ್ಥಿಕ ವರ್ಷದ ವಿತ್ತಿಯ ಅಂದಾಲು ಪಟ್ಟಿ (ಆರ್ವತಕ ಮತ್ತು ಆರ್ವತಕವಲ್ಲದ ಅಂಶಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು)
- ಲೆಕ್ಕ ಪರಿಶೋಧನೆಯ ಪ್ರಮಾಣ ಪತ್ರ
- ರಸೀದಿ ಮತ್ತು ಸಂದಾಯ ಪಟ್ಟಿ, ಆದಾಯ ಮತ್ತು ವೆಚ್ಚದ ಪಟ್ಟಿ ಹಾಗೂ ಉಳಿತಾಯ ಪಟ್ಟಿ
- ಹಿಂದಿನ ವರ್ಷದ ವಾರ್ಷಿಕ ವರದಿ
- ಸಿಬ್ಬಂದಿ ನೇಮಕದ ವಿವರ
- ಫಲಾನೂಭವಿಗಳ ವಿವರ
- ಪದಾಧೀಕಾರಿ ಮತ್ತು ನಿರ್ವಹಣ ಮಂಡಳಿಯ ಸದಸ್ಯರುಗಳ ವಿವರ
- ಸಂಘಟನೆಗೆ ಇತರೆ ಯಾವುದೇ ಮಾಹಿತಿಗಳು ಅವಶ್ಯಕವೆಂದು ತಿಳಿದು ಬಂದಲ್ಲಿ ನೀಡುವುದು.
*********
ಮುಗಿಯಿತು.