Tuesday, 11 August 2015

DDRS ಯೋಜನೆಯಲ್ಲಿ ಯೋಜನಾ ವೆಚ್ಚದ ವಿವರ

        
                 I.            ಆವರ್ತಕ ವೆಚ್ಚ :
  1. ಯೋಜನೆಗಳ ನಿರ್ವಹಣೆಗಾಗಿ ಸ್ವಯಂ ಸೇವ ಸಂಘಟನೆಗಳಿಂದ ನೇಮಕವಾದ ಸಿಬ್ಬಂದಿಗಳಿಗೆ ಗೌರವ ಧನ ನೀಡಲು
  2. ಫಲಾನೂಭವಿಗಳ ಸಾರಿಗೆಗೆ
  3. ಫಲಾನೂಭವಿಗಳಿಗೆ/ವಸತಿ ನಿಲಯಗಳ ನಿರ್ವಹಣೆಗಾಗಿ ಶಿಶ್ಯವೇತನ
  4. ಕಚ್ಚಾ ಸಾಮಾಗ್ರಿಗಳ ವೆಚ್ಚ
  5. ಕಛೇರಿ ವೆಚ್ಚ, ವಿದ್ಯುತ್ ಬಾಪ್ತು, ನೀರಿನ ಕರ ಮುಂತಾದವುಗಳನ್ನು ಭರಿಸಲು ಸಾದಿಲ್ವಾರು ಹಣ
  6. ಬಾಡಿಗೆ

              II.            ಆವರ್ತಕವಲ್ಲದ ವೆಚ್ಚಗಳು:
  1. ಪೀಠೋಪಕರಣಗಳು
  2. ಸಾಧನಗಳು
  3. ಕಟ್ಟಡ ನಿರ್ಮಾಣ
  4. ಪುಸ್ತಕಗಳು

ಅರ್ಹ ಸಂಘಟನೆಗಳು:
ಈ ಕೆಳಗಿನ ಸಂಘಟನೆಗಳು/ಸಂಸ್ಥೇಗಳು ಈ ಯೋಜನೆಯ ಅಡಿಯಲ್ಲಿ ಬರಲು ಅರ್ಹರಾಗಿರುತ್ತಾವೆ.
  1. ಸೊಸೈಟಿ ನೋಂದಣಿ ಕಾಯ್ದೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಂಬಂಧಪಟ್ಟ ಕಾಯ್ದೆಗಳ ಅಡಿಯಲ್ಲಿ ನೊಂದಾಯಿತ ಸಂಘಟನೆಗಳು ಅಥವಾ
  2. ತತ್ಕಾಲಕ್ಕೆ ಚಾಲ್ತಿಯಲ್ಲಿರುವ ಕಾನೂನಿನ ಅನ್ವಯ ನೋಂದಣಿಯಾದ ಸಾರ್ವಜನಿಕ ಟ್ರಸ್ಟ್.
  3. 1958ರ ಕಂಪನಿ ಕಾಯ್ದೆಯ 25ನೇ ಸೆಕ್ಷನ್  ಅನ್ವಯ ಪರವಾನಗಿ ಪಡೆದ ಚಾರಿಟಬಲ್ (ದತ್ತಿ) ಕಂಪನಿ.

ಮುಂದುವರೆದು, DDRS ಯೋಜನೆಯ ಅಡಿಯಲ್ಲಿ ದೇಣಿಗೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ ಸಂಸ್ಥೆಯ ನೋಂದಾಣಿಯು ಕನಿಷ್ಟ 2 ವರ್ಷವಾದರೂ ಚಾಲ್ತಿಯಲ್ಲಿರಬೇಕು.

ಮೇಲಿನ ಕಂಡಿಕೆ (ಪ್ಯಾರ) ಯಲ್ಲಿ (i) ರಿಂದ (iii)ರವರೆಗೆ ನಮೂದಿಸಿರುವ ಸಂಸ್ಥೆಗಳು/ಸಂಘಟನೆಗಳು ಈ ಕೆಳಕಂಡ ಗುಣಗಳನ್ನು ಹೊಂದಿರಬೇಕು.
  1. ಸಂಸ್ಥೆಯು ಸೂಕ್ತವಾದ ನಿರ್ವಹಣಾ ವ್ಯವಸ್ಥೆಯೊಂದಿಗೆ, ಅಧಿಕಾರಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರಬೇಕು ಹಾಗೂ ಬರೆದಿರಬೇಕು.
  2. ಯೋಜನೆಯನ್ನು ವಹಿಸಿಕೊಳ್ಳಲು ಸಂಪನ್ಮೂಲಗಳು, ಸೌಕರ್ಯಗಳು ಮತ್ತು ಅನುಭವಗಳನ್ನು ಹೊಂದಿರಬೇಕು.
  3. ಅದು ಒಬ್ಬ ವ್ಯಕ್ತಿಯ ಲಾಭಕ್ಕಾಗಿ ಅಥವಾ ವ್ಯಕ್ತಿಗಳ ಗುಂಪಿನ ಲಾಭಕ್ಕಾಗಿ ಕಾರ್ಯನಿರ್ವಸಬಾರದು.
  4. ಲಿಂಗ, ಧರ್ಮ, ಜಾತಿ ಅಥವಾ ನಂಬಿಕೆಗಳ ಅಧಾರದ ಮೇಲೆ ಯಾವುದೇ ವ್ಯಕ್ತಿಯ ಅಥವಾ ವ್ಯಕ್ತಿಗಳ ಗುಂಪನ್ನು ಬೇಧಭಾವ ಮಾಡಬಾರದು.
  5. ಅದು ವಾಸ್ತವದಲ್ಲಿ ಎರಡು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು.
  6. ಅದರ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು.

ಸೂಚನೆ: ವಿರಳ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಕಾರ್ಯದರ್ಶಿಗಳು ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ ಅನುಭವ, ಅಸ್ತಿತ್ವದಲ್ಲಿ ಇದ್ದ ಕಾಲ ಮತ್ತು ಆರ್ಥಿಕ ಸ್ಥಿತಿಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಸಡಿಲಗೊಳಿಸಬಹುದು. ಇದಕ್ಕಾಗಿ ಸೂಕ್ತ ಕಾರಣವನ್ನು ಲಿಖಿತ ರೂಪದಲ್ಲಿ ನೀಡಬೇಕಾಗುತ್ತದೆ.

                                                                               ಮುಂದುವರೆಯುವುದು....
ಈ ಅಂಕಣವನ್ನು ಓದಿದ ನಂತರ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ.

No comments:

Post a Comment

D.Ed.SE.HI Hindi Question Papers