DDRS ಯೋಜನೆಯ ಅಡಿಯಲ್ಲಿ ಈ ಕೆಳಗಿನ ಮಾದರಿ ಯೋಜನೆಗಳಿಗೆ ಬೆಂಬಲವನ್ನು ನೀಡಲಾಗುತ್ತದೆ
- ಪೂರ್ವ ಪ್ರಾಥಮಿಕ ಮತ್ತು ಶೀಘ್ರ ಮದ್ಯಸ್ಥಿಕೆ ಮತ್ತು ತರಬೇತಿಯ ಯೋಜನೆ:ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಶಿಶುವನ್ನು ಶಾಲೆಗೆ ಸೇರಿಸುವ 6 ವರ್ಷಗಳ ಕಾಲದ ವರೆಗೂ ವಿಶೇಷ ಶಾಲೆಗಳಿಗೆ/ಮುಖ್ಯವಾಹಿನಿಯ ಶಾಲೆಗಳಿಗೆ ದಾಖಲಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡುವುದು. ಈ ಯೋಜನೆಯು ಥೇರಪಿ, ಡೆ ಕೇರ್ ಮತ್ತು ಪೋಷಕರಿಗೆ ಸಲಹೆ ನೀಡುವ ಸೇವೆಗಳನ್ನು ಸಹ ನೀಡುತ್ತದೆ.
- ವಿಶೇಷ ಶಾಲೆ :ಬುದ್ದಿಮಾಂದ್ಯ ಮಕ್ಕಳ, ಶ್ರವಣದೋಷವುಳ್ಳ ಮಕ್ಕಳ ಮತ್ತು ದೃಷ್ಟಿದೋಷವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಗಳ ಯೋಜನೆಯನ್ನು ಇದು ಬೆಂಬಲಿಸುತ್ತದೆ. ವಿಶೇಷ ಶಿಕ್ಷಣವು ಮಕ್ಕಳಲ್ಲಿ ಸಂವಹನ ಕೌಶಲ್ಯ ಮತ್ತು ಇತರೆ ಇಂದ್ರಿಯಗಳ ಸಾಮಾರ್ಥ್ಯ, ದೈನಂದಿನ ಕಾರ್ಯುಗಳನ್ನು ನಿರ್ವಹಿಸುವ ಕೌಶಲ್ಯ ಅಂತಿಮವಾಗಿ ಮುಖ್ಯವಾಹಿನಿ ಶಾಲೆಯಲ್ಲಿ ಸಮನ್ವಯಗೊಳಿಸುವುದು. ಈ ನಿಧಿಯಿಂದ ವಸತಿ ಸೌಲಭ್ಯವನ್ನು ಸಹ ಮಕ್ಕಳಿಗೆ ಒದಗಿಸಬಹುದು. ಚಲನವಲನ ದೋಷವುಳ್ಳವರಿಗೂ ಶಾಲೆಗಳನ್ನು ತೆರೆಯಲು ನಿಧಿಯನ್ನು ಇಡಲಾಗಿದೆ, ಆದರೆ ಮಾದರಿ ಯೋಜನೆ ಲಭ್ಯವಿರುವುದಿಲ್ಲ.
- ಸೆರೆಬ್ರಲ್ ಪಾಲ್ಸಿ ಮಕ್ಕಳಿಗಾಗಿ ಯೋಜನೆ:ಈ ಯೋಜನೆಯ ಉದ್ದೇಶವು ವಿಶೇಷ ಶಾಲೆ ಯೋಜನೆಯಂತೆಯೇ ಇದೆ. ಮಗುವಿನ ವೈಯಕ್ತಿಕ ಥೆರಪಿ ಅಗತ್ಯತೆಗೆ ಅನುಗುಣವಾಗಿ ಹೆಚ್ಚು ಮಹತ್ವವನ್ನು ಇಲ್ಲಿ ಒದಗಿಸಲಾಗುತ್ತದೆ.
- ವೃತ್ತಿ ತರಬೇತಿ ಕೇಂದ್ರಗಳು :15-35 ವರ್ಷದ ಒಳಗಿನ ವಿಕಲಚೇತನ ವ್ಯಕ್ತಿಗಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಗುಂಪಿನಲ್ಲಿ ಬರುವ ವಿಕಲಚೇತನ ವ್ಯಕ್ತಿಗಳಿಗೆ ಕೌಶಲ್ಯವನ್ನು ನೀಡಿ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವುದು ಇದರ ಉದ್ದೇಶ. ತರಬೇತಿಯ ಗರಿಷ್ಠ ಅವಧಿ ಮತ್ತು ವ್ಯಾಪಾರದ ವಿವರವನ್ನು ಒಳಗೊಂಡಿರುವ ಪಟ್ಟಿಯನ್ನು ಈಗಾಗಲೆ ಯೋಜನೆಯಲ್ಲಿ ಸೇರಿಸಲಾಗಿದೆ.
- Sheltered Workshop :ಈ ಯೋಜನೆಯ ಉದ್ದೇಶವು ವೃತ್ತಿ ತರಬೇತಿ ಕೇಂದ್ರಗಳಂತೆಯೇ ಇದೆ. ಆದರೆ ಈ ಯೋಜನೆಯಲ್ಲಿ ಅದಾಯದ ಉತ್ಪತಿಯ ಅವಕಾಶಗಳನ್ನು ಸೃಜಿಸುವುದರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿರುತ್ತದೆ.
- ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳ ಪುನರ್ವಸತಿ ಯೋಜನೆ:ಕುಷ್ಠ ರೋಗ ನಿವಾರಣೆಯಾದ ವ್ಯಕ್ತಿಗಳಿಗೆ ಕೌಶಲ್ಯವನ್ನು ಒದಗಿಸುವ ಮೂಲಕ ಅವರೆ ತಮ್ಮ ಆರ್ಥಿಕ-ಸಾಮಾಜಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯು ವೃತ್ತಿ ತರಬೇತಿ ಘಟಕವನ್ನು ಮತ್ತು ತ್ರೀರ್ವತರನಾದ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ವಸತಿಯನ್ನು ನೀಡುವ ಅಂಶಗಳನ್ನೂ ಸಹ ಹೊಂದಿದೆ.
- ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟ ಮಾನಸಿ ಅಸ್ವಸ್ಥ ವ್ಯಕ್ತಿಗಳ ಮಾನಸಿಕ – ಸಮಾಜಿಕ ಪುನರ್ವಸತಿಗಾಗಿ Half Way Homeಗಳನ್ನು ತೆರೆಯುವುದು:ಮಾನಸಿಕ ಅಸ್ವಸ್ಥನಾಗಿ ಚಿಕಿತ್ಸೆ ಪಡೆದ ಮತ್ತು ಹತೋಟಿಗೆ ಒಳಪಟ್ಟು ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾದ ವ್ಯಕ್ತಿಗಳಿಗೆ ಪುನರ್ವಸತಿಯನ್ನು ಮಾಡುವ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಯ ಉದ್ದೇಶ. ಇಂತಹ ವ್ಯಕ್ತಿಗಳಿಗೆ ವೃತ್ತಿ ತರಬೇತಿಯನ್ನು ನೀಡುವ ಕಾರ್ಯವನ್ನು ಯೋಜನೆಯು ಹೊಂದಿದೆ. ಇಂತಹ ವ್ಯಕ್ತಿಗಳಿಗೆ ಮತ್ತು ಇವರ ಕುಟುಂಬ ವರ್ಗದವರಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿ ಮಾನಸಿಕ ಅಸ್ವಸ್ಥೆಯಿಂದ ವಿಮುಕ್ತಿ ಪಡೆದ ವ್ಯಕ್ತಿಯು ಮತ್ತೆ ಕುಟುಂಬ/ಸಮುದಾಯದ ಒಬ್ಬ ಸದಸ್ಯನಾಗುವಂತೆ ಮಾಡಲು ಯೋಜನೆಯನ್ನು ಹೊಂದಿದೆ. ಅಸ್ವಸ್ಥೆಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಹೆ/ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸಹ ಈ ಯೋಜನೆ ಅಡಿಯಲ್ಲಿ ಬರಿಸಲಾಗುತ್ತದೆ.
- ಸಮೀಕ್ಷೆ, ಗುರುತಿಸುವಿಗೆ, ಜಾಗೃತಿ ಮತ್ತು ಸಂವೇದನೆಗೆ ಸಂಬಂಧಿಸಿದ ಯೋಜನೆ:ಈ ಯೋಜನೆಯು ವಿಕಲತೆಯಯನ್ನು ಗುರುತಿಸುವುದರೊಂದಿಗೆ, ಶೀರ್ಘ್ರ ಮದ್ಯಸ್ಥಿಕೆಯ ಮೂಲಕ ಜಾಗೃತಿ ಮೂಡಿಸುವುದು, ಪೋಷಕರು/ಪಾಲಕರುಗಳಿಗೆ ವಿಕಲಚೇತನ ವ್ಯಕ್ತಿಗಳ ಅವಶ್ಯಕತೆಗಳನ್ನು ಪೂರೈಸಲು ಸಂವೇದಿಕರಣಗೊಳಿಸುವುದು, ಸೂಕ್ತ ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ಸೂಚಿಸುವುದು ಮತ್ತು ವಿಕಲತೆಯ ಕ್ಷೇತ್ರದಲ್ಲಿನ ಹೊಸ ಅಲೆಗಳ ಬಗ್ಗೆ ಸಂಶೋಧನೆಗಳನ್ನು ನಡೆಸುವುದನ್ನು ಪ್ರೋತ್ಸಾಹಿಸುವ ಉದ್ದೇಶಗಳನ್ನು ಹೊಂದಿದೆ.
- ಗೃಹ ಆಧಾರಿತ ಪುನರ್ವಸತಿ ಕಾರ್ಯಕ್ರಮ:ಮನೆಯ ಪರಿಸರದಲ್ಲಿ ವಿಕಲಚೇತನ ಮಕ್ಕಳಿಗೆ ಚಲನವಲನ ಕೌಶಲ್ಯ ನೀಡುವುದು, ಸಾಮಾನ್ಯ ಸಂವಹನ ಕೌಶಲ್ಯವನ್ನು ಬೆಳೆಸುವುದು, ದೈನಂದಿನ ಕಾರ್ಯಗಳನ್ನು ಮಾಡುವ ಕೌಶಲ್ಯದ ಬೆಳವಣಿಗೆ, ಮಕ್ಕಳ ಪೋಷಕರನ್ನು ತರಬೇತುಗೊಳಿಸುವುದು ಮತ್ತು ಸಂವೇದಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಸಮುದಾಯ ಆಧಾರಿತ ಪುನರ್ವಸತಿ ಯೋಜನೆ :ವಿಕಲಚೇತನ ವ್ಯಕ್ತಿಗಳಿಗೆ ತರಬೇತಿ ನೀಡುವುದು, ಪುನರ್ವಸತಿಗೊಳಿಸುವುದು ಮತ್ತು ತಮ್ಮ ಸಮುದಾಯದಲ್ಲಿ ಅವರು ಸಮನ್ವಯಗೊಳ್ಳುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿಕಲಚೇತನರಿಗೆ ಸೇವೆಗಳು ದೊರಕದೆ ಇರುವ/ ಸೀಮಿತವಿರುವ ಪ್ರದೇಶಗಳಲ್ಲಿ, ಸಂಸ್ಥೆಯೇತರ ವ್ಯವಸ್ಥೆಗಳ ಮೂಲಕ ಪುನರ್ವಸತಿ ಸೇವೆಗಳು ದೊರಕುವಂತೆ ಮಾಡುವುದು ಇದರ ಉದ್ದೇಶ. ವಿಕಲಚೇತನ ವ್ಯಕ್ತಿಗಳ ಪೋಷಕರು, ಆರೋಗ್ಯ ಕಾರ್ಯಕರ್ತರು, ಸಮುದಾಯ ಕಾರ್ಯಕರ್ತರುಗಳ ಸಹಬಾಗಿತ್ವವನ್ನು ಸಾಧಿಸುವುದು ಇಲ್ಲಿ ಅತಿ ಮುಖ್ಯ. ಈ ಯೋಜನೆಗಳು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿವೆ.
- ಅಲ್ಪ ದೃಷ್ಠಿ ಕೇಂದ್ರಗಳಿಗಾಗಿ ಯೋಜನೆ:ಅಲ್ಪ ದೃಷ್ಠಿಯನ್ನು ಹೊಂದಿರುವ ವ್ಯಕ್ತಿಗಳಿಗೆ ವೈಧ್ಯಕೀಯ ಪುನರ್ವಸತಿ ಸೌಲಭ್ಯವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಈ ಕೇಂದ್ರಗಳು ದೃಷ್ಠಿ ದೋಷವನ್ನು ಗುರುತಿಸುವ, ಮೌಲ್ಯಮಾಪನ ಮಾಡುವ, ಪುನರ್ವಸತಿ ಮತ್ತು ಸಲಹ ಸೇವೆಗಳನ್ನು ನೀಡುತ್ತವೆ. ಅಷ್ಟೆ ಅಲ್ಲದೆ, ಮಾರ್ಗದರ್ಶನ ಮಾಡುವ ಮತ್ತು ದೃಷ್ಠಿ ಸಾಮಾರ್ಥ್ಯ ಹೆಚ್ಚಿಸುವ ಮೂಲಕ ಅಲ್ಪ ದೃಷ್ಠಿದೋಷವನ್ನು ಹೊಂದಿರು ವ್ಯಕ್ತಿಗಳು ಗರಿಷ್ಠ ಪ್ರಮಾಣದಲ್ಲಿ ಶಕ್ತರಾಗುವಂತೆ ಮಾಡುವುದು.
- ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ:ವಿಕಲಚೇತನರ ಪುನರ್ವಸತಿ ಕ್ಷೇತ್ರದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಪನ್ಮೂಲಗಳ ಜಾಲವನ್ನು ನಿರ್ಮಿಸುವ ಹಾಗೂ ವಿಶೇಷ ಶಿಕ್ಷಣದಲ್ಲಿ ತರಬೇತಿಯನ್ನು ನೀಡುವ ಯೋಜನೆಗಳನ್ನು ಹೊಂದಿದೆ.
- ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರ:ವಿಚಾರ ಸಂಕಿರಣ/ಕಾರ್ಯಗಾರ/ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳಿಗಾಗಿ ಈ ಯೋಜನೆಯ ಅಡಿಯಲ್ಲಿ ಇಡಿಗಂಟನ್ನು ಇಡಲಾಗಿರುತ್ತದೆ.
- ವಿಕಲಚೇತನರಿಗಾಗಿ ಪರಿಸರ ಸ್ನೇಹಿ ಕಾರ್ಯಗಳು :ವಿಕಲಚೇತನ ವ್ಯಕ್ತಿಗಳು ತೋಟಗಾರಿಗೆ ಮಾಡುವುದು, ನರ್ಸರಿಗಳನ್ನು ನಿರ್ಮಿಸುವುದು ಮತ್ತು ಮರಗಳನ್ನು ನೆಡುವಂತಹ ಪರಿಸರ ಸ್ನೇಹಿ ಕಾರ್ಯಗಳನ್ನು ಈ ಯೋಜನೆಯು ಬೆಂಬಲಿಸುತ್ತದೆ.
- ಕಂಪ್ಯೂಟರ್ ನ್ನು ಕೊಳ್ಳಲು ಧನ ಸಹಾಯ:ಅಗತ್ಯತೆಗೆ ಅನುಗುಣವಾಗಿ ಸೂಕ್ತ ವಿನ್ಯಾಸದ ಕಂಪ್ಯೂಟರ್ ಗಳನ್ನು ಕೊಳ್ಳಲು ಈ ಯೋಜನೆಯು ಧನ ಸಹಾಯ ಮಾಡುತ್ತದೆ. DDRS ಯೋಜನೆಯಲ್ಲಿ ಬರುವ ಇತರೆ ಯೋಜನೆಗಳಿಗೂ ಕಂಪ್ಯೂಟರ್ ಕೊಳ್ಳಲು ಧನ ಸಹಾಯ ಮಾಡಲಾಗುತ್ತದೆ.
- ಕಟ್ಟಡಗಳ ನಿರ್ಮಾಣ:ತರಗತಿ ಕೊಠಡಿ, ವೃತ್ತಿ ತರಬೇತಿ/ಉದ್ಯೋಗ ಕೇಂದ್ರ ಮತ್ತು ವಸತಿ ನಿಲಯಗಳ ನಿರ್ಮಾಣವನ್ನು ಈ ಯೋಜನೆಯ ಅಡಿಯಲ್ಲಿ ಬೆಂಬಲಿಸಲಾಗುತ್ತದೆ.
- ಕಾನೂನು ಸಾಕ್ಷರತೆಗಾಗಿ ಯೋಜನೆ: (ಕಾನೂನು ಸಲಹೆ, ಕಾನೂನು ಸಾಧನ ಮತ್ತು ವಿಶ್ಲೇಷನೆ ಹಾಗೂ ಪ್ರಸ್ತುತ ಲಭ್ಯವಿರುವ ಕಾನೂನಿನ ಮೌಲ್ಯಮಾಪನ): ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ, ಯೋಜನೆಯು ಗೌರವ ಧನ ರೂಪದಲ್ಲಿ ಅರೆ ಕಾನೂನು ತರಬೇತಿ ಪಡೆಯುತ್ತಿರುವವರಿಗೆ ನೀಡಲಾಗುತ್ತದೆ.
- ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರ:ಸರ್ಕಾರದಿಂದ ಪ್ರಾರಂಭವಾದ ವಿಕಲಚೇತನರ ಜಿಲ್ಲಾ ಪುನರ್ವಸತಿ ಕೇಂದ್ರಗಳು ಸ್ವಯಂ ಸೇವ ಸಂಘಟನೆಗಳಿಗೆ ವರ್ಗಾವಣೆಯಾದ ನಂತರ ಅವುಗಳ ಕಾರ್ಯವನ್ನು ಬೆಂಬಲಿಸುವುದು ಈ ಯೋಜನೆಯ ಉದ್ದೇಶ. ಈ ಕೆಂದ್ರಗಳು ಸಮುದಾಯದ ತಳ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು, ಪುನರ್ವಸತಿ ಮತ್ತು ತರಬೇತಿ ನೀಡುವ ಕಾರ್ಯಗಳನ್ನು ನಿರ್ವಹಿಸುತ್ತದೆ.
ಮುಂದುವರೆಯುವುದು.....
No comments:
Post a Comment