Thursday, 26 May 2016

NHFDC Funding Types

Types of Funding:

NHFDC ಯು ಕೆಳಗಿನ ವಿಧದ ಸಾಲಗಳನ್ನು ಪರಿಗಣಿಸುತ್ತದೆ.

ಅವಧಿಯ ಸಾಲ: (Term Loan)
            ನಿಗಮವು ವಿಕಲಚೇತನರ ಉದ್ಯಮಗಳಿಗೆ ಅಥವಾ ವಿಕಲಚೇತನರ ಸಂಘದ ಉದ್ಯಮಗಳಿಗೆ ಸೌಲಭ್ಯವಿತರಣ ಏಜೆನ್ಸಿಯ ಮೂಲಕ ಅವಧಿಯ ಸಾಲವನ್ನು ನೀಡುತ್ತದೆ. ಅವಧಿ ಸಾಲ ಯೋಜನೆಯ ಅಡಿಯಲ್ಲಿ, ಯೋಜನೆಯ (ಸಂಪೂರ್ಣ) 100% ವೆಚ್ಚದವರೆಗೂ ಸಾಲವನ್ನು ನೀಡುತ್ತದೆ.
  1. ಯಾವ ಯೋಜನೆಯ ಸಂಪೂರ್ಣ ವೆಚ್ಚ ರೂ.50,000/-ಗಳನ್ನು ಮೀರುವುದಿಲ್ಲವೂ, ಅಂಥಹ ಯೋಜನೆಯನ್ನು ಸಂಯುಕ್ತ ಸಾಲ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸ್ಥಿರಾಸ್ಥಿ ಮತ್ತು ಕಾರ್ಯಶೀಲ ಬಂಡವಾಳಗಳ ನಡುವೆ ಯಾವುದೆ ರೀತಿಯ ಬೇದಬಾವವನ್ನು ಮಾಡುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಪೂರ್ಣವೆಚ್ಚದ 100%ವರೆಗಿನ ಅನುದಾನವನ್ನು ನೀಡಬಹುದಾಗಿರುತ್ತದೆ.
  2. ಯಾವ ಯೋಜನೆಯ ಘಟಕದ ವೆಚ್ಚ ರೂ.50,000/- ಕಿಂತ ಹೆಚ್ಚನ ದಾಗಿದ್ದು ಮತ್ತು ರೂ.1,00,000/- ವನ್ನು ಮೀರುವುದಿಲ್ಲವೂ ಹಾಗೂ ಸ್ಥಿರಾಸ್ಥಿ ಮತ್ತು ಕಾರ್ಯಶೀಲ ಬಂಡವಾಳಗಳ ನಡುವಿನ ಅನುಪಾತ 1:3 ಮೀರುವುದಿಲ್ಲವೂ ಅಂತಹ ಪ್ರಕರಣಗಳು.
  3. ಯಾವ ಯೋಜನೆಯ ಘಟಕದ ವೆಚ್ಚ ರೂ. 1,00,000/- ಲಕ್ಷವನ್ನು ಮೀರುತ್ತದೆಯೋ ಕಾರ್ಯಶೀಲ ಬಂಡವಾಳದ ಶೇ.50% ರಷ್ಟನ್ನು ಮಾತ್ರ ಭರಿಸಲಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ಗಳ ಮೂಲಕ ಪಡೆದುಕೊಳ್ಳಬೇಕಾಗುತ್ತದೆ.


ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ತಲುಪಲು, ರೂ. 1,00,000/- ಒಳಗಿನ ಯೋಜನೆಗಳಿಗೆ ಹೆಚ್ಚನಿ ಒತ್ತನ್ನು ನೀಡಲಾಗುತ್ತದೆ.

2. Margin Money Loan (Seed Capital)
ಅಲ್ಪ ಪ್ರಮಾಣದ ಸಾಲ (ಮೂಲ ನಿಧಿ)
  1. ಉದ್ಯಮವು ಕನಿಷ್ಟ ಪಕ್ಷ 20% ನಷ್ಟಾದರೂ ಸಾಮ್ಯ ಷೇರನ್ನಾದರೂ ತರಬೇಕು (ಹೊಂದಿಸಬೇಕು)
  2. ರೂ.50 ಲಕ್ಷಗಳ ವರೆಗಿನ ಯೋಜನಾ ವೆಚ್ಚದ ಯೋಜನೆಗಳಿಗೆ 80% ವರೆಗೆ ಮೂಲ ನಿಧಿ ಸಾಲ ಯೋಜನೆಯ ಮೂಲಕ ನೀಡಲಾಗುತ್ತದೆ.
  3. ಮೂಲ ನಿಧಿ ಸಾಲ ಯೋಜನೆಯು ಬಡ್ಡಿ ರಹಿತವಾಗಿರುತ್ತದೆ. ಆದರೆ ಏಜೆಸ್ಸಿಯವರು ವಾರ್ಷಿಕ 1% ಬಡ್ಡಿಯನ್ನು ವಿಧಿಸುತ್ತರೆ. ಇದರಲ್ಲಿ ವಾರ್ಷಿಕ 0.5% ನ್ನು NHFDCಗೆ ಸಂದಾಯ ಮಾಡುತ್ತಾರೆ.
  4. ಮೂಲ ನಿಧಿ ಸಾಲವನ್ನು ಸಾಲ ವಿತರಣೆ ಮಾಡಿದ ದಿನದಿಂದ ಗರಿಷ್ಠ 7 ವರ್ಷಗಳ ಒಳಗೆ, ಅಧಿಕೃತ ಮುಂದೂಡಿಕೆ ಮಾಡದೆ ಮರುಪಾವತಿ ಮಾಡಬೇಕು. ಮೂಲ ನಿಧಿ ಸಾಲವನ್ನು 7 ವರ್ಷಗಳ ನಂತರವು ಪಾವತಿ ಮಾಡದಿದ್ದರೆ, ಅದನ್ನು ಅವಧಿಯ ಸಾಲವನ್ನಾಗಿ ಪರಿವರ್ತಿಸಲಾಗುತ್ತದೆ. NHFDC ಅವಧಿ ಸಾಲಗಳಿಗೆ ಅನ್ವಯವಾಗುವ ಬಡ್ಡಿ ದರವೇ ಇದಕ್ಕು ಅನ್ವಯವಾಗುತ್ತದೆ. ಸಾಲ ಪರಿವರ್ತನೆಯಾದ ದಿನದಿಂದ 3 ವರ್ಷದ ಒಳಗೆ ಸಾಲ ಮರುಪಾವತಿ ಮಾಡಬೇಕು. ಸದರಿ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆದವರಿಗೆ NHFDC ಇತರೆ ಯೋಜನೆಗಳಲ್ಲಿ ಸಾಲವನ್ನು ಪಡೆಯಲು ಅವಕಾಶವಿರುವುದಿಲ್ಲ.
  5.  ವಿಕಲಚೇತನ ಮಹಿಳೆಯರಿಗೆ ಬಡ್ಡಿಯಲ್ಲಿ 2% ರಿಯಾಯಿತಿಯನ್ನು ನೀಡಲಾಗುತ್ತದೆ.


ಸಕಾಲದಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿಯಲ್ಲಿ 0.5% ರಿಯಾಯಿತಿಯನ್ನು ನೀಡಲಾಗುತ್ತದೆ.

Allocation of Available Fund for Disbursement
ಲಭ್ಯವಿರುವ ನಿಧಿಯನ್ನು ಬಟವಾಡೆಗಾಗಿ ಹಂಚಿಕೆ ಮಾಡುವುದು.
  1. ಗರಿಷ್ಠ ಮಟ್ಟದಲ್ಲಿ ಫಲಾನುಭವಿಗಳನ್ನು ತಲುಪುವ ಸಲುವಾಗಿ, ಲಭ್ಯವಿರುವ ನಿಧಿಯ 75% ನಷ್ಟು ನಿಧಿಯನ್ನು 1 ಲಕ್ಷಕಿಂತ ಕಡಿಮೆ ಸಾಲವನ್ನು ಕೋರಿ ಸಲ್ಲಿಸಲಾದ ಯೋಜನೆಗಳಿಗೆ ಹಂಚಿಕೆ ಮಾಡಲಾಗುತ್ತದೆ.
  2. ಮಹಿಳಾ ವಿಕಲಚೇತನರ ಆರ್ಥಿಕ ಸಬಲಿಕರಣವನ್ನು ಖಾತ್ರಿ ಪಡಿಸುವ ದಿಸೆಯಲ್ಲಿ ಮತ್ತು ಸಾಮಾನ್ಯ ಉಳಿತಾಯವನ್ನು ಖಾತ್ರಿ ಪಡಿಸುವ ಸಲುವಾಗಿ, ಸೌಲಭ್ಯ ವಿತರಣ ಏಜೆನ್ಸಿಗಳು ಮಹಿಳೆಯರ ಅರ್ಜಿಗಳಿಗೆ ಹೆಚ್ಚು ಒತ್ತನ್ನು ನೀಡುತ್ತವೆ, ಅಷ್ಟೆ ಅಲ್ಲದೆ, ಮಹಿಳೆಯರಿಂದ ಯೋಜನೆಗಳನ್ನು ಪಡೆಯುವುದಕ್ಕೆ ವಿಶೇಷ ಪ್ರಯತ್ನವನ್ನು ಮಾಡಲಾಗುತ್ತಿದೆ.

ಸಾಲ ಮಂಜೂರಾತಿ:
  1. NHFDC ಯಿಂದ ಪೂರ್ವಾನುಮೋದನೆಗೊಂಡ ಫಲನುಭವಿಗಳಿಗೆ ಸೌಲಭ್ಯ ವಿತರಿಸುವ ಏಜನ್ಸಿಯು ಸಾಲವನ್ನು ವಿತರಿಸುತ್ತದೆ. ಸೌಲಭ್ಯ ವಿತರಿಸುವ ಏಜನ್ಸಿಯು ಎಲ್ಲಾ ಸಾಲದ ಅರ್ಜಿಗಳನ್ನು NHFDC ಅನುಮೋದನೆಗಾಗಿ ಕಳುಹಿಸುತ್ತದೆ.
  2. ಸ್ಕೀಂ (5) ಸಹಾಯಕ ಸಾಧನಗಳ ಉತ್ಪಾದನೆ ಮತ್ತು ಸ್ಕೀಂ (6) ಕೌಶಲ್ಯ ಮತ್ತು ವ್ಯವಹಾರ ಆಭಿವೃದ್ಧಿಗೆ ಸಹಾಯ ಮಾಡುಲು ಸಲ್ಲಿಸಿದ ಅರ್ಜಿಯನ್ನು ಸ್ವತಃ ಓಊಈಆಅಯೇ ನೇರವಾಗಿ ಪಡೆದುಕೊಳ್ಳುತ್ತದೆ ಮತ್ತು ಅಂದಾಜು ಮಾಡುತ್ತದೆ. NHFDCಯೇ ಸಾಲವನ್ನು ಮಂಜೂರು ಮಾಡಿ, ಬಟವಾಡೆ ಮಾಡುತ್ತದೆ.
  3. ರೂ.10 ಲಕ್ಷ ಮೀರದ ಎಲ್ಲಾ ಯೋಜನೆಗಳಿಗೆ NHFDC ನಿರ್ದೇಶಕರ ಮಂಡಳಿ ಸಾಲವನ್ನು ಮಂಜೂರು ಮಾಡುತ್ತದೆ.


ಸಾಲ ವಸೂಲಾತಿ:
  1. ಸಂಪೂರ್ಣ ಸಾಲವನ್ನು ಯುಕ್ತ ಅವಧಿಯ ಒಳಗೆ, ಸಾಲಾವಧಿ ವಿಸ್ತರಣೆಯನ್ನು ಒಳಗೊಂಡಂತೆ 7 ವರ್ಷ ಮೀರದಂತೆ ಮರುಪಾವತಿ ಮಾಡಬೇಕು. ಮರುಪಾವತಿಯು ಅರ್ದ ವಾರ್ಷಿಕ/ತ್ರೈಮಾಸಿಕ/ತಿಂಗಳುಗಳ ಆಧಾರದಲ್ಲಿ ಇರುತ್ತದೆ. ಕೃಷಿಮತ್ತು ತೋಟಗಾರಿಕೆ ಯೋಜನೆಗಳ ಮರುಪಾವತಿಯು ವಾರ್ಷಿಕ ಆಧಾರದ ಮೇಲೆ ಇರುತ್ತದೆ. ಮರುಪಾವತಿಯ ಅವಧಿಯನ್ನು ಅಂದಾಜು ಮತ್ತು ಯೋಜನೆಯನ್ನು ಮಂಜೂರು ಮಾಡುವಾಗ ಪ್ರಸ್ತಾವಿತ ಯೋಜನೆಯ ಗಳಿಕೆಯ ದೃಢತೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.
  2. ಯೋಜನೆಯ ಯೋಗ್ಯತೆ ಮತ್ತು ಅವಶ್ಯಕತೆಯ ಆಧಾರದ ಮೇಲೆ ಸಾಲಾವಧಿಯ ವಿಸ್ತರಣೆಯನ್ನು ಮಾಡಲಾಗುತ್ತದೆ.
  3. ಸಕಾಲದಲ್ಲಿ ಎಲ್ಲಾ ಕಂತುಗಳನ್ನು ಪಾವತಿಸಿದವರಿಗೆ 0.5% ರಿಯಾಯಿತಿಯನ್ನು ಬಡ್ಡಿಯಲ್ಲಿ ನೀಡಲಾಗುತ್ತದೆ.
  4. ಸಕಾಲದಲ್ಲಿ ಮರುಪಾವತಿಯನ್ನು ಮಾಡದವರಿಗೆ 3% ಬಡ್ಡಿಯನ್ನು ವಿಧಿಸಲಾಗುತ್ತದೆ.

ಭದ್ರತೆ:
  1. NHFDC ಯಿಂದ ರಾಜ್ಯ ಸೌಲಭ್ಯ ವಿತರಣ ಏಜನ್ಸಿಗೆ ಸಾಲವನ್ನು ಮಂಜೂರು ಮಾಡಲು ಮತ್ತು ಬಟವಾಡೆ ಮಾಡಲು ರಾಜ್ಯ ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಖಾತರಿ ನೀಡುವುದು ಅವಶ್ಯಕವಾಗಿದೆ. ಒಂದು ವೇಳೆ ತಪ್ಪುಗಳು ಇದ್ದಲ್ಲಿ, ಭದ್ರತೆಯನ್ನು ಕೋರುವ ಮತ್ತು ಸಾಲವನ್ನು ನೀಡಿದ ಏಜನ್ಸಿಯ ಮುಂದಿನ ಯೋಜನೆಗಳಲ್ಲಿ ತನ್ನ ಕಂತನ್ನು ಮುರಿದುಕೊಳ್ಳುವ ಸ್ವಾತಂತ್ರ್ಯವನ್ನು NHFDC ಹೊಂದಿರುತ್ತದೆ.
  2.  NHFDCಯು ಬ್ಯಾಂಕುಗಳ ಭದ್ರತೆ ಅಥವಾ ಸಾಲವನ್ನು ನೀಡಲು ಪರಿಗಣಿಸಬಹುದಾದ ಇತರೆ ಯಾವುದೇ ರೀತಿಯ ಖಾತರಿಗಳನ್ನು ಸಹ ಪರಿಗಣಿಸುತ್ತದೆ.

****End****

Tuesday, 10 May 2016



NHFDC ಯಿಂದ ಸಾಲ ಪಡೆಯಲು ಅರ್ಹತೆಯ ಮಾನದಂಡಗಳು


ವಿಕಲತೆಯ ಮಾನದಂಡ
            ಫಲಾನುಭಾವಿಯು ವಿಕಲಚೇತನ ವ್ಯಕ್ತಿಯಾಗಿರಬೇಕು ಅಥವಾ ವಿಕಲಚೇತನರ ಸಹಕಾರ ಸಂಘವಾಗಿರಬೇಕು ಅಥವಾ ವಿಕಲಚೇತನರು ಸ್ಥಾಪಿಸಿರುವ ಕಾನೂನಿಗೆ ಒಳಪಟ್ಟ ಸಂಘಟನೆ ಅಥವಾ ವಿಕಲಚೇತನ ವ್ಯಕ್ತಿಯು ನಡೆಸುತ್ತಿರುವ ವ್ಯವಹಾರಗಳಿಗೆ ಯೋಜನೆಗಳ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
            ನಿಗಮದಿಂದ ಬಡ್ಡಿ ದರದಲ್ಲಿ ವಿನಾಯಿತಿಯನ್ನು ಪಡೆಯಲು ವಿಕಲತೆಯ ಮಟ್ಟ 40% ಗಳಿಗಿಂತಲೂ ಕಡಿಮೆ ಇರಬಾರದು.
ವಿಕಲಚೇತನ ವ್ಯಕ್ತಿಯೆಂದರೆ,
  1. ಅಂಧರು
  2. ಅಲ್ಪ ದೃಷ್ಟಿದೋಷವುಳ್ಳವರು
  3. ಮಾತು ಮತ್ತು ಶ್ರವಣದೋಷವನ್ನು ಹೊಂದಿರುವವರು
  4. (ಸೆರೆಬ್ರಲ್ ಪಾಲ್ಸಿಯನ್ನು ಒಳಗೊಂಡಂತೆ) ದೈಹಿಕ ಅಥವಾ ನರಗಳ ನ್ಯೂನತೆಯಿಂದ ಚಲನವಲನ   ವಿಕಲತೆಯನ್ನು ಹೊಂದಿರುವವರು
  5. ಬುದ್ದಿಮಾಂದ್ಯರು
  6. ಬಹುವಿಕಲರು

ಆರ್ಥಿಕ ಮಾನದಂಡ:
            ಗ್ರಾಮೀಣ ಪ್ರದೇಶದ ನಿರುದ್ಯೋಗಿ ವಿಕಲಚೇತನ ವ್ಯಕ್ತಿಯ ಕುಟುಂದ ವಾರ್ಷಿಕ ವರಮಾನ ರೂ.22,000/-ಗಳಿಗಿಂತ ಕಡಿಮೆ ಇರಬೇಕು ಮತ್ತು ನಗರ ಪ್ರದೇಶದವರಿಗೆ ವಾರ್ಷಿಕ ವರಮಾನ ರೂ.24,000/- ಇರುವವರು ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. (ಕುಟುಂಬ ಎಂದರೆ ಪೋಷಕರು ಅಥವಾ ವಿಕಲಚೇತನರ ಮೇಲೆ ಅವಲಂಬಿತರಾಗಿರುವ ಗಂಡ/ಹೆಂಡತಿ)
            ಅವಲಂಬಿತರಲ್ಲದ ವಿಕಲಚೇತನರ ವೈಯಕ್ತಿಯ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
           ವಿಕಲಚೇತನರ ಸಂಘದಲ್ಲಿರುವ ಪ್ರತಿ ವಿಕಲಚೇತನರ ಆದಾಯವನ್ನು NHFDC ಮೂಲಕ ಸಾಲ ಸೌಲಭ್ಯವನ್ನು ನೀಡುವಾಗ ಪರಿಗಣಿಸಲಾಗುತ್ತದೆ.
          ಸಾಲವನ್ನು ಪಡೆಯಲು ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 55 ವರ್ಷ. ಗರಿಷ್ಠ ವಯೋಮಿತಿಯನ್ನು ಉದ್ಯೋಗ ಮತ್ತು ತರಬೇತಿ ಪಡೆದ ಉದ್ಯಮಿಗಳಿಗೆ ಸಡಿಲಿಕೆ ಮಾಡಲಾಗುತ್ತದೆ.
   ಸಾಲ ಮಂಜೂರಾತಿಯ ಮೊತ್ತ ಮತ್ತು ಮರುಪಾವತಿಯ ಅವಧಿಯು ಅರ್ಜಿದಾರರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಇತರೆ ಅಗತ್ಯತೆಗಳು:
ಅರ್ಜಿದಾರರು,
  1. ಭಾರತದ ಪ್ರಜೆಯಾಗಿರಬೇಕು.
  2. ಯೋಜನೆಯನ್ನು ಆರಂಭಿಸಲು ಪ್ರಸ್ತಾಪಿಸಿರುವ ರಾಜ್ಯದ ನಿವಾಸಿಯಾಗಿರಬೇಕು.
  3. ಸೂಕ್ತ ಶಿಕ್ಷಣ/ತಾಂತ್ರಿಕ/ಔದ್ಯೋಗಿಕ/ ಅನುಭವ/ ಹಿನ್ನಲೆಯನ್ನು ಹೊಂದಿರಬೇಕು.
  4. ಇತರೆ ಸಂಘಟನೆಗಳಿಂದ ಹೆಚ್ಚಿನ ಮಟ್ಟದ ಸಾಲವನ್ನು ಹೊಂದಿರಬಾರದು ಮತ್ತು ಸುಸ್ತಿದಾರನಾಗಿರಬಾರದು.
  5. ಕೃಷಿ ಸಂಬಂಧಿತ ಚಟುವಟಿಕೆಗಳಗಾಗಿ ಸಹಾಯವನ್ನು ಅಪೇಕ್ಷಿಸುತ್ತಿದ್ದರೆ, ಅವರು ಕೃಷಿ ಹಿನ್ನಲೆಯವರಾಗಿ ಬೇಕು ಮತ್ತು ಯೋಜನೆಯ ಪ್ರದೇಶವು ಕೃಷಿ ಕ್ಷೇತ್ರದಲ್ಲಿರಬೇಕು.
                                                                                        ಮುಂದುವರೆಯುವುದು......

D.Ed.SE.HI Hindi Question Papers