Tuesday, 10 May 2016



NHFDC ಯಿಂದ ಸಾಲ ಪಡೆಯಲು ಅರ್ಹತೆಯ ಮಾನದಂಡಗಳು


ವಿಕಲತೆಯ ಮಾನದಂಡ
            ಫಲಾನುಭಾವಿಯು ವಿಕಲಚೇತನ ವ್ಯಕ್ತಿಯಾಗಿರಬೇಕು ಅಥವಾ ವಿಕಲಚೇತನರ ಸಹಕಾರ ಸಂಘವಾಗಿರಬೇಕು ಅಥವಾ ವಿಕಲಚೇತನರು ಸ್ಥಾಪಿಸಿರುವ ಕಾನೂನಿಗೆ ಒಳಪಟ್ಟ ಸಂಘಟನೆ ಅಥವಾ ವಿಕಲಚೇತನ ವ್ಯಕ್ತಿಯು ನಡೆಸುತ್ತಿರುವ ವ್ಯವಹಾರಗಳಿಗೆ ಯೋಜನೆಗಳ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
            ನಿಗಮದಿಂದ ಬಡ್ಡಿ ದರದಲ್ಲಿ ವಿನಾಯಿತಿಯನ್ನು ಪಡೆಯಲು ವಿಕಲತೆಯ ಮಟ್ಟ 40% ಗಳಿಗಿಂತಲೂ ಕಡಿಮೆ ಇರಬಾರದು.
ವಿಕಲಚೇತನ ವ್ಯಕ್ತಿಯೆಂದರೆ,
  1. ಅಂಧರು
  2. ಅಲ್ಪ ದೃಷ್ಟಿದೋಷವುಳ್ಳವರು
  3. ಮಾತು ಮತ್ತು ಶ್ರವಣದೋಷವನ್ನು ಹೊಂದಿರುವವರು
  4. (ಸೆರೆಬ್ರಲ್ ಪಾಲ್ಸಿಯನ್ನು ಒಳಗೊಂಡಂತೆ) ದೈಹಿಕ ಅಥವಾ ನರಗಳ ನ್ಯೂನತೆಯಿಂದ ಚಲನವಲನ   ವಿಕಲತೆಯನ್ನು ಹೊಂದಿರುವವರು
  5. ಬುದ್ದಿಮಾಂದ್ಯರು
  6. ಬಹುವಿಕಲರು

ಆರ್ಥಿಕ ಮಾನದಂಡ:
            ಗ್ರಾಮೀಣ ಪ್ರದೇಶದ ನಿರುದ್ಯೋಗಿ ವಿಕಲಚೇತನ ವ್ಯಕ್ತಿಯ ಕುಟುಂದ ವಾರ್ಷಿಕ ವರಮಾನ ರೂ.22,000/-ಗಳಿಗಿಂತ ಕಡಿಮೆ ಇರಬೇಕು ಮತ್ತು ನಗರ ಪ್ರದೇಶದವರಿಗೆ ವಾರ್ಷಿಕ ವರಮಾನ ರೂ.24,000/- ಇರುವವರು ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. (ಕುಟುಂಬ ಎಂದರೆ ಪೋಷಕರು ಅಥವಾ ವಿಕಲಚೇತನರ ಮೇಲೆ ಅವಲಂಬಿತರಾಗಿರುವ ಗಂಡ/ಹೆಂಡತಿ)
            ಅವಲಂಬಿತರಲ್ಲದ ವಿಕಲಚೇತನರ ವೈಯಕ್ತಿಯ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
           ವಿಕಲಚೇತನರ ಸಂಘದಲ್ಲಿರುವ ಪ್ರತಿ ವಿಕಲಚೇತನರ ಆದಾಯವನ್ನು NHFDC ಮೂಲಕ ಸಾಲ ಸೌಲಭ್ಯವನ್ನು ನೀಡುವಾಗ ಪರಿಗಣಿಸಲಾಗುತ್ತದೆ.
          ಸಾಲವನ್ನು ಪಡೆಯಲು ಕನಿಷ್ಟ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 55 ವರ್ಷ. ಗರಿಷ್ಠ ವಯೋಮಿತಿಯನ್ನು ಉದ್ಯೋಗ ಮತ್ತು ತರಬೇತಿ ಪಡೆದ ಉದ್ಯಮಿಗಳಿಗೆ ಸಡಿಲಿಕೆ ಮಾಡಲಾಗುತ್ತದೆ.
   ಸಾಲ ಮಂಜೂರಾತಿಯ ಮೊತ್ತ ಮತ್ತು ಮರುಪಾವತಿಯ ಅವಧಿಯು ಅರ್ಜಿದಾರರ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.

ಇತರೆ ಅಗತ್ಯತೆಗಳು:
ಅರ್ಜಿದಾರರು,
  1. ಭಾರತದ ಪ್ರಜೆಯಾಗಿರಬೇಕು.
  2. ಯೋಜನೆಯನ್ನು ಆರಂಭಿಸಲು ಪ್ರಸ್ತಾಪಿಸಿರುವ ರಾಜ್ಯದ ನಿವಾಸಿಯಾಗಿರಬೇಕು.
  3. ಸೂಕ್ತ ಶಿಕ್ಷಣ/ತಾಂತ್ರಿಕ/ಔದ್ಯೋಗಿಕ/ ಅನುಭವ/ ಹಿನ್ನಲೆಯನ್ನು ಹೊಂದಿರಬೇಕು.
  4. ಇತರೆ ಸಂಘಟನೆಗಳಿಂದ ಹೆಚ್ಚಿನ ಮಟ್ಟದ ಸಾಲವನ್ನು ಹೊಂದಿರಬಾರದು ಮತ್ತು ಸುಸ್ತಿದಾರನಾಗಿರಬಾರದು.
  5. ಕೃಷಿ ಸಂಬಂಧಿತ ಚಟುವಟಿಕೆಗಳಗಾಗಿ ಸಹಾಯವನ್ನು ಅಪೇಕ್ಷಿಸುತ್ತಿದ್ದರೆ, ಅವರು ಕೃಷಿ ಹಿನ್ನಲೆಯವರಾಗಿ ಬೇಕು ಮತ್ತು ಯೋಜನೆಯ ಪ್ರದೇಶವು ಕೃಷಿ ಕ್ಷೇತ್ರದಲ್ಲಿರಬೇಕು.
                                                                                        ಮುಂದುವರೆಯುವುದು......

No comments:

Post a Comment

D.Ed.SE.HI Hindi Question Papers