Thursday, 20 August 2015

DDRS ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆಯಲು ಇರಬೇಕಾದ ಮಾನದಂಡಗಳು




 

          ಯೋಜನೆಯ ಪ್ರಸ್ತಾವನೆಯ ಪ್ರಮುಖ್ಯತೆ ಮತ್ತು ಗುಣಗಳ ಆಧಾರದ ಮೇಲೆ ನೆರವು/ಅನುದಾನದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ನಿಗದಿತ ವೆಚ್ಚ ಮಾನದಂಡಗಳ ಆಧಾರದ ಮೇಲೆ ಯೋಜನಾ ವೆಚ್ಚದ ಶೇ.90% ಹಣವನ್ನು ನೀಡಲಾಗುತ್ತದೆ. NGOಗಳ ಸ್ವಾವಲಂಬನೆಯನ್ನು ಪ್ರೋತ್ಸಾಹಿಸಲು, ನಗರ ಪ್ರದೇಶದ ಯೋಜನೆಗೆ 7 ವರ್ಷಗಳ ಕಾಲ ಅನುದಾನವನ್ನು ನೀಡಿದ ನಂತರ ಪ್ರತಿ ಪರ್ಯಾಯ ವರ್ಷದಲ್ಲೂ 5% ರಷ್ಟೂ ಅನುದಾನವನ್ನು ತಗ್ಗಿಸಲಾಗುತ್ತದೆ. ತನ್ಮೂಲಕ ಅನುದಾನವನ್ನು 75% ರಷ್ಟು ಇಳಿಸಬಹುದು. 

ಅರ್ಜಿ ಮತ್ತು ಮಂಜೂರಾತಿ:
 
ಹೊಸ ಯೋಜನೆ:

          ಹೊಸ ಯೋಜನೆಗಳಿಗೆ ಅನುದಾನವನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ/ರಾಜ್ಯ ಆಯುಕ್ತರು/ ರಾಷ್ಟ್ರೀಯ ಸಂಸ್ಥೆಗಳು/ಸಂಘಟನೆ/ಸಮಾಜೀಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಈ ಉದ್ದೇಶಕ್ಕಾಗಿ ರಚಿತವಾದ ಇತರೆ ಯಾವುದೆ ವ್ಯವಸ್ಥೆಯಿಂದ  ಸೂಚಿತ ನಮೂನೆಯಲ್ಲಿ ಶಿಫಾರಸ್ಸು ಮಾಡಬೇಕು. ವೃತ್ತಿಪರರಿಗೆ ತರಬೇತಿ ನೀಡಲು ಉದ್ದೇಶಿಸಿರುವ ಹೊಸ ಯೋಜನೆಗಳು ಮಾನ್ಯತೆ ಮತ್ತು ಬೆಂಬಲಕ್ಕಾಗಿ RCI ಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಯೋಜನೆಯನ್ನು ಮುಂದುವರೆಸುವುದು:

          ಸೂಚಿತ ನಮೂನೆಯ ಅರ್ಜಿಯನ್ನು ಅನುದಾನ ಬಿಡುಗಡೆಗಾಗಿ ಸಲ್ಲಿಸಬೇಕು. ಅನುದಾನ ಬಿಡುಗಡೆಗಾಗಿ ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತವೆ.


  1. ಅನುದಾನವನ್ನು ಪಡೆಯಲು ಇಚ್ಚಿಸುವ ಆರ್ಥಿಕ ವರ್ಷದ ವಿತ್ತಿಯ ಅಂದಾಲು ಪಟ್ಟಿ (ಆರ್ವತಕ ಮತ್ತು ಆರ್ವತಕವಲ್ಲದ ಅಂಶಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು)
  2. ಲೆಕ್ಕ ಪರಿಶೋಧನೆಯ ಪ್ರಮಾಣ ಪತ್ರ  
  3. ರಸೀದಿ ಮತ್ತು ಸಂದಾಯ ಪಟ್ಟಿ, ಆದಾಯ ಮತ್ತು ವೆಚ್ಚದ ಪಟ್ಟಿ ಹಾಗೂ ಉಳಿತಾಯ ಪಟ್ಟಿ
  4. ಹಿಂದಿನ ವರ್ಷದ ವಾರ್ಷಿಕ ವರದಿ
  5. ಸಿಬ್ಬಂದಿ ನೇಮಕದ ವಿವರ
  6. ಫಲಾನೂಭವಿಗಳ ವಿವರ
  7. ಪದಾಧೀಕಾರಿ ಮತ್ತು ನಿರ್ವಹಣ ಮಂಡಳಿಯ ಸದಸ್ಯರುಗಳ ವಿವರ
  8. ಸಂಘಟನೆಗೆ ಇತರೆ ಯಾವುದೇ ಮಾಹಿತಿಗಳು ಅವಶ್ಯಕವೆಂದು ತಿಳಿದು ಬಂದಲ್ಲಿ ನೀಡುವುದು. 
*********
ಮುಗಿಯಿತು.

No comments:

Post a Comment

D.Ed.SE.HI Hindi Question Papers