ನಮ್ಮ ದೇಶದಲ್ಲಿ
ವಿಕಲಚೇತನರಿಗೆ ಹಾಗೂ ಅವರ ಕುಟುಂಬಕ್ಕೆ ಸಂಬಂಧಪಟ್ಟಂತೆ
ಮೊಟ್ಟ ಮೊದಲ
ಬಾರಿಗೆ ಜಾರಿಗೆ
ತಂದ ವಿಮಾ
ಯೋಜನೆ ಇದಾಗಿದೆ. ಈ ಯೋಜನೆಯನ್ನು ಕೇಂದ್ರದ
ಸಾಮಾಜಿಕ ನ್ಯಾಯ
ಮತ್ತು ಸಬಲೀಕರಣ
ಇಲಾಖೆ 2015ರ
ಅಕ್ಟೋಬರ್ 2 ರಂದು ಜಾರಿಗೆ ತಂದಿತು. ಈ
ಯೋಜನೆಯನ್ನು ಅನುಷ್ಠಾನಗೊಳಿಸಲು ದಿ ನ್ಯೂ ಇಂಡಿಯ
ಅಶ್ಯುರೆನ್ಸ್ ಕಂಪನಿ ಲಿಮಿಟೆಡ್ರವರೊಂದಿಗೆ ಒಪ್ಪಂದ
ಮಾಡಿಕೊಂಡಿದೆ. ಒಟ್ಟು ವಿಮೆಯ ಮೊತ್ತ ರೂ.3100/-
ಆದರೆ ವಿಕಲಚೇತನ
ವ್ಯಕ್ತಿ ಕೇವಲ
ರೂ.355/- ಮಾತ್ರ
ಪಾವತಿಸಬೇಕು. ಉಳಿದ ಹಣವನ್ನು ಕೇಂದ್ರ ಸರ್ಕಾರವೇ
ವಿಮಾ ಕಂಪನಿಗೆ
ನೇರವಾಗಿ ಪಾವತಿಸುತ್ತದೆ.
ಒಳರೋಗಿಯಾಗಿ ಅಥವಾ ಹೊರ ರೋಗಿಯಾಗಿಯೂ ಸಹ
ನಿಗದಿಪಡಿಸಿದ ಮಿತಿಯೊಳಗೆ ಹಣವಿಲ್ಲದೆ ಸೇವೆಯನ್ನು ಪಡೆಯಬಹುದು.
ತುರ್ತು ಸಂದರ್ಭದಲ್ಲಿ
ಹತ್ತಿರದ ಯಾವುದೇ
ನೋಂದಾಯಿತ ಆಸ್ಪತ್ರಯಲ್ಲಿ ಚಿಕಿತ್ಸೆ
ಪಡೆದಿದ್ದೇ ಆದಲ್ಲಿ
ಆ ವೆಚ್ಚವನ್ನು
ಮರುಪಾವತಿ ಮಾಡಲಾಗುತ್ತದೆ.
ಹತ್ತಿರದಲ್ಲಿ ನೋಂದಾಯಿತ ಆಸ್ಪತ್ರೆಯೊಲ್ಲದಿದ್ದಲ್ಲಿ
ಥರ್ಡ್ ಪಾರ್ಟಿ
ಅಲಯನ್ಸ್ ಅನುಮತಿ
ಪಡೆದು ಇತರೆ
ಆಸ್ಪತ್ರೆಗಳಲ್ಲೂ ಸಹ ಚಿಕಿತ್ಸೆ ಪಡೆಯಬಹುದು.
ಆರ್ಹತೆ
:
- 18 ರಿಂದ 65 ವರ್ಷದೊಳಗಿನವರಾಗಿರಬೇಕು
- ಅಲ್ಪದೃಷ್ಟಿದೋಷ, ಅಂಧತ್ವ, ಕುಷ್ಠರೋಗದಿಂದಾದ ವಿಕಲಚೇತನರು, ಮಾಕ್ ಮತ್ತು ಶ್ರವಣದೋಷವುಳ್ಳವರು, ದೈಹಿಕ ವಿಕಲಚೇತನರು, ಬುದ್ದಿಮಾಂದ್ಯರು ಮತ್ತು ಮಾನಸಿಕ ಅಸ್ವಸ್ಥರು
- ಕುಟುಂಬದ ವಾರ್ಷಿಕ ವರಮಾನ ರೂ.3 ಲಕ್ಷದ ಒಳಗಿರಬೇಕು
- ವಿಕಲಚೇತನ ವ್ಯಕ್ತಿಗೆ ಮದುವೆಯಾಗಿದ್ದರೆ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡಂತೆ 4 ಜನರನ್ನು ಮಾತ್ರ ಒಳಗೊಳ್ಳುತ್ತದೆ
- ವಿಕಲಚೇತನ ವ್ಯಕ್ತಿ ಮದುವೆಯಾಗದೇ ಇದ್ದಲ್ಲಿ ವ್ಯಕ್ತಿಗೆ ಮಾತ್ರ ಸೀಮಿತ
- ಇತರೆ ಆರೋಗ್ಯ ವಿಮಾ ಯೋಜನೆಗಳಲ್ಲಿ ಈಗಾಗಲೇ ವಿಮೆ ಮಾಡಿಸಿದ್ದವರು ಸಹ ಈ ಸೌಲಭ್ಯವನ್ನು ಪಡೆಯಬಹುದು.
ಬೇಕಾದ
ದಾಖಲೆಗಳು:
- ನಿಗದಿತ ಅರ್ಜಿ ನಮೂನೆ
- ವಿಮಾ ಯೋಜನೆಯಲ್ಲಿ ಒಳಪಡುವ ಎಲ್ಲಾ ಸದಸ್ಯರ 2 ಫೋಟೊಗಳು
- ಅಂಗವಿಕಲತೆಯ ಗುರುತಿನ ಚೀಟಿ
- ಬ್ಯಾಂಕ್ ಪಾಸ್ ಬುಕ್ನ ಛಯಾ ಪ್ರತಿ ಮತ್ತು ರದ್ದಾಗಿರುವ/ ಪಡಿಸಿದ ಚೆಕ್
- ವಿಳಾಸ ದೃಢೀಕರಣ ಪತ್ರ : ಆಧಾರ್ ಕಾರ್ಡ್ / ಚುನಾವಣಾ ಗುರುತಿನ ಚೀಟಿ / ಚಾಲನಾ ಪರವಾನಿಗೆ
- ರೂ. 355/- ಹಣವನ್ನು ಪಾವತಿಸಬೇಕು
ಸ್ವಾವಲಂಭನ್
ಆಯೋಗ್ಯ
ವಿಮಾ
ಯೋಜನೆಯಿಂದ
ಪಡೆಯಬಹುದಾದ
ಸೌಲಭ್ಯಗಳು
- ವಿಕಲಚೇತನ ವ್ಯಕ್ತಿ ಅಥವಾ ಮದುವೆಯಾಗಿದ್ದಲ್ಲಿ ಹೆಂಡತಿ, ಇಬ್ಬರು ಮಕ್ಕಳ ಒಟ್ಟು ಕುಟುಂಬಕ್ಕೆ ರೂ.2 ಲಕ್ಷ ವಿಮಾ ಸೌಲಭ್ಯ ಇರುತ್ತದೆ.
- ಹೊರರೋಗಿಯಾಗಿ ಅಥವಾ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದು
- ದೈಹಿಕ ವಿಕಲಚೇತನರು ಹೊರರೋಗಿಯಾಗಿ ರೂ.10 ಸಾವಿರದ ಒಳಗೆ ಕರೆಕ್ಟಿವ್ ಥೆರಪಿ ಪಡೆಯಬಹುದು
- ಬುದ್ದಿಮಾಂದ್ಯತೆ ಮತ್ತು ಮಾನಸಿಕ ಅಸ್ವಸ್ಥ ವಿಕಲಚೇತನರು ಹೊರರೋಗಿಯಾಗಿ ರೂ.3000/- ವರೆಗೆ ಚಿಕಿತ್ಸೆ ಮತ್ತು ಔಷದೋಪಚಾರಗಳನ್ನು ಪಡೆಯಬಹುದು
- ಅಸ್ಪತ್ರೆ ದಾಖಲಾಗುವುದಕ್ಕಿಂತ ಮೊದಲು ಚಿಕಿತ್ಸೆ ಪಡೆದುಕೊಂಡಿದ್ದಲ್ಲಿ ಅದನ್ನು ಮರುಪಾವತಿ ಮಾಡುತ್ತರೆ (ದಂತ ಚಿಕಿತ್ಸೆ ಬಿಟ್ಟು)
- ಅಂಗವಿಕಲತೆ ಮಾತ್ರವಲ್ಲದೆ, ಅಪಘಾತ ಹಾಗೂ ಇತರೆ ಖಾಯಿಲೆಗಳಿಗೂ ಸಹ ಚಿಕಿತ್ಸೆ ಪಡೆಯಬಹುದು.
ಸೌಲಭ್ಯವನ್ನು
ಎಲ್ಲಿ
ಪಡೆಯಬಹುದು
?
- ದಿ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿ ಲಿಮಿಟೆಡ್ನ ಶಾಖೆಗಳಿಂದ ಪಡೆಯಬಹುದು
- ಸಂಘ - ಸಂಸ್ಥೆಗಳ ಮೂಲಕ ಸುಲಭವಾಗಿ ಪಡೆಯಬಹುದು
- ವೈಯಕ್ತಿಕವಾಗಿಯೂ ಸಹ ಪಡೆಯಬಹುದು.
ಹೆಚ್ಚಿನ
ಮಾಹಿತಿಗಾಗಿ
ಹತ್ತಿರದ ದಿ ನೂ ಇಂಡಿಯ ಅಶ್ಯುರೆನ್ಸ್
ಕಂಪನಿ ಲಿಮಿಟೆಡ್ನ ಶಾಖಾ ಕಛೇರಿಯನ್ನು ಸಂಪರ್ಕಿಸಬಹುದು.
ಉಚಿತ
ದೂರವಾಣಿ
ಸಂಖ್ಯೆ
: 1800-233-1166,1800-233-4505
No comments:
Post a Comment