ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ವಿಧೇಯಕ 2014
ರ ಸಾರಾಂಶ
- ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ವಿಧೇಯಕ 2014, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆಯವರಿಂದ 2013ರ ಫೆಭ್ರವರಿ 7 ರಂದು ರಾಜ್ಯಸಭೆಯಲ್ಲಿ ಮಂಡನೆಯಾಯಿತು.
- ಈ ವಿಧೇಯಕವು 1995ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮವನ್ನು ರದ್ದುಗೊಳಿಸುತ್ತದೆ.
- ವಿಕಲತೆಯ ವ್ಯಾಖ್ಯಾನ: ವಿಕಲತೆಯ ವ್ಯಾಖ್ಯಾನವು ಆಟಿಸಂ, ಅಲ್ಪ ದೃಷ್ಟಿ ಮತ್ತು ಅಂಧತ್ವ, ಸೆರೆಬ್ರಲ್ ಪಾಲ್ಸಿ, ಕಿವುಡು ಮತ್ತು ಅಂಧತ್ವ, ಹಿಮೊಫಿಲಿಯಾ, ಶ್ರವಣ ನ್ಯೂನತೆ, ಕುಷ್ಠರೋಗ, ಭೌದ್ದಿಕ ವಿಕಲತೆ, ಮಾನಸಿಕ ಅಸ್ವಸ್ಥ, ಮಸ್ಕೂಲಾರ್ ಡಿಸ್ಟ್ರೊಫಿ, ಬಹು ಪಾರ್ಶ್ವವಾಯು, ಕಲಿಕಾ ನ್ಯೂನತೆ, ವಾಕ್ ಮತ್ತು ಭಾಷಾ ವಿಕಲತೆ, ಸಿಕಲ್ ಸೆಲ್ ಅನಿಮಿಯಾ, ಥಲಸೇಮಿಯಾ, ತೀವ್ರತರ ನರಸಂಬಂಧಿತ ಸ್ಥಿತಿ ಮತ್ತು ಬಹುವಿಕಲತೆಯಂತಹ 19 ಸ್ಥಿತಿಗಳನ್ನು ಒಳಗೊಂಡಿದೆ. ಮೇಲೆ ನಮೂದಿಸಿರುವ ಯಾವುದಾದರೂ ವಿಕಲತೆಯು ಕನಿಷ್ಠ 40% ನಷ್ಟಿದ್ದರೆ ಅವರನ್ನು ಮಾನದಂಡಕ್ಕೆ ಒಳಪಟ್ಟ ವ್ಯಕ್ತಿಯೆಂದು (Persons with benchmark disabilities ) ವ್ಯಾಖ್ಯಾನಿಸುತ್ತದೆ.
- ವಿಕಲಚೇತನ ವ್ಯಕ್ತಿಗಳ ಹಕ್ಕು: ವಿಧೇಯಕವು ವಿಕಲಚೇತನ ವ್ಯಕ್ತಿ ಸಮಾನತೆಯ ಹಕ್ಕನ್ನು ಮತ್ತು ತಾರತಮ್ಯ ವಿರುಧ್ದದ ಹಕ್ಕನ್ನು ಘೋಷಿಸಿದೆ. ವಿಕಲಚೇತನ ವ್ಯಕ್ತಿಗಳ ಹಕ್ಕು, ಅಮಾನವೀಯ ವರ್ತನೆಗಳಿಂದ ರಕ್ಷಣೆ , ಸಮಾನ ರಕ್ಷಣೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ, ಸಶಸ್ತ್ರ ಸಂಘರ್ಷಗಳು, ಮಾನವ ನಿರ್ಮಿತ ತುರ್ತು ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ರಕ್ಷಣೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಪ್ರಸ್ತುತದಲ್ಲಿರುವ ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನು 5 ವರ್ಷಗಳಲ್ಲಿ ವಿಕಲಚೇತನರ ರಾಷ್ಟ್ರೀಯ ಅಯೋಗವು ರೂಪಿಸಿರುವ ನಿಯಮಗಳಂತೆ ವಿಕಲಚೇತನ ವ್ಯಕ್ತಿಗಳು ಪ್ರವೇಶಿಸಿ ಬಳಸುವಂತಾಗಬೇಕು. ಆಯೋಗದ ನಿಯಮವನ್ನು ಪಾಲಿಸದೆ ಕಟ್ಟಡಗಳನ್ನು ಕಟ್ಟಲು ಅನುಮತಿಯನ್ನು, ಕಾರ್ಯಪೂರ್ತಿ ಪ್ರಮಾಣಪತ್ರವನ್ನು ಅಥವಾ ಕಟ್ಟಡವನ್ನು ಆಕ್ರಮಿಸುವುದನ್ನು ನಿರಾಕರಿಸಲಾಗುತ್ತದೆ.
- ರಾಜ್ಯ ಮತ್ತು ರಾಷ್ಟ್ರಗಳ ಚುನಾವಣಾ ಆಯೋಗವು ಮತಕಟ್ಟೆಗಳು ಮತ್ತು ಮತದಾನ ಸಾಮಾಗ್ರಿಗಳನ್ನು ವಿಕಲಚೇತನ ವ್ಯಕ್ತಿಗಳು ಬಳಸುವಂತೆ ಕ್ರಮಕೈಗೊಳ್ಳಬೇಕು.
- ಶಿಕ್ಷಣ, ಕೌಶಲ್ಯದ ಅಭಿವೃದ್ಧಿ ಮತ್ತು ಉದ್ಯೋಗ: ಈ ವಿಧೇಯಕವು ವಿಕಲಚೇತನರ ಸಮನ್ವಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿದೆ. ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನವನ್ನು ಪಡೆಯುವ ಸಂಸ್ಥೆಗಳು ಮಾನದಂಡಕ್ಕೆ ಒಳಪಟ್ಟ ವಿಕಲಚೇತನರಿಗೆ ಕನಿಷ್ಠ 5% ನಷ್ಟು ಮೀಸಲಾತಿಯನ್ನು ಒದಗಿಸಬೇಕು.
- ಸಂಬಂಧಿಸಿದ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ತೆರೆಯುವುದು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾನದಂಡಕ್ಕೆ ಒಳಪಟ್ಟ ವಿಕಲಚೇತನ ವ್ಯಕ್ತಿಗಳಿಗೆ ಉದ್ಯೋಗ ಸ್ಥಳವನ್ನು ಗುರುತಿಸಬೇಕು. ಕನಿಷ್ಠ 5% ನಷ್ಟು ಹುದ್ದೆಗಳನ್ನು ಮಾನದಂಡಕ್ಕೆ ಒಳಪಟ್ಟ ವಿಕಲಚೇತನರಿಗಾಗಿ ಮೀಸಲಿಡಬೇಕು. ಇದರಲ್ಲಿ ಈ ಕೆಳಗಿನ 5 ವಿಕಲತೆಗೆ ತಲಾ 1% ನಂತೆ ಮೀಸಲಾತಿಯನ್ನು ನೀಡಲಾಗಿದೆ.
- ಅಂಧ ಮತ್ತು ಅಲ್ಪ ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ,
- ಶ್ರವಣ ಮತ್ತು ವಾಕ್ ನ್ಯೂನತೆವುಳ್ಳವರಿಗೆ,
- ಚಲನವಲನ ವಿಕಲತೆ ಹೊಂದಿರುವವರಿಗೆ,
- ಆಟಿಸಂ,ಭೌದ್ಧಿಕ ವಿಕಲತೆ ಮತ್ತು ಮಾನಸಿಕ ಅಸ್ವಸ್ಥರಿಗೆ ಹಾಗೂ
- ಬಹುವಿಕಲರಿಗೆ
- ಕಾನೂನು ಸಾಮಾರ್ಥ್ಯ: ವಿಕಲಚೇತನ ವ್ಯಕ್ತಿಯು ಇತರರಿಗೆ ಸಮಾನವಾಗಿ ಸ್ಥಿರ ಮತ್ತು ಚರ ಆಸ್ಥಿಯನ್ನು ಹೊಂದುವ ಹಾಗೂ ತಮ್ಮ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕನ್ನು ಹೊಂದಿರುತ್ತಾರೆ,
- ಸಂರಕ್ಷಕರು/ಪೋಷಕರು: ಜಿಲ್ಲಾ ನ್ಯಾಯಲಯವು ಮಾನಸಿಕ ಅಸ್ವಸ್ಥ ವ್ಯಕ್ತಿಯು ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ್ದಿದ್ದು ಕಂಡುಬಂದರೆ ಆಗ ಈ ವಿಧೇಯಕವು ಅವರಿಗೆ ಪೋಷಕರನ್ನು ನೇಮಿಸಲು ಅವಕಾಶ ಕಲ್ಪಿಸಿದೆ.
- ವಿಕಲಚೇತನರಿಗಾಗಿ ರಾಷ್ಟ್ರ ಮತ್ತು ರಾಜ್ಯ ಆಯೋಗಗಳು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ರಾಷ್ಟ್ರ ಮತ್ತು ರಾಜ್ಯ ಆಯೋಗವನ್ನು ರಚಿಸಬೇಕು.
- ಕೇಂದ್ರ ಮತ್ತು ರಾಜ್ಯ ಸಲಹಾ ಮಂಡಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಕಲತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸಲಹಾ ಮಂಡಳಿಯನ್ನು ತೆರೆಯಬೇಕು. ಈ ಮಂಡಳಿಯು ಸರ್ಕಾರಕ್ಕೆ ವಿಕಲತೆಗೆ ಸಂಬಂಧಿಸಿದ ನೀತಿ ಮತ್ತು ಕಾರ್ಯಾಕ್ರಮಗಳನ್ನು ರೂಪಿಸಲು ಮತ್ತು ವಿಕಲಚೇತನರೊಂದಿಗೆ ಒಡನಾಟ ಹೊಂದಿರುವ ಸಂಸ್ಥೆಗಳ ಚಟುವಟಿಕೆಯನ್ನು ಪರಿಶೀಲನೆ ಮಾಡಲು ಸಲಹೆಗಳನ್ನು ನೀಡುತ್ತದೆ.
http://www.prsindia.org/uploads/media/Person%20with%20Disabilities/The%20Right%20of%20Persons%20with%20Disabilities%20Bill.pdf
Poker Room & Hotel Review – Online Casinos
ReplyDeleteFind the best poker rooms and casinos in Macau Poker Room 카지노 사이트 is 바카라 사이트 쿠폰 the main 메리트 카지노 쇼미더벳 venue 먹튀 커뮤니티 for players from all over the 우리 카지노 계열 world from Hong Kong.