NHFDCಯ
ಸಾಲ ಯೋಜನೆಗಳು
ಭಾಗ-3
4. ವ್ಯವಸಾಯ ಚಟುವಟಿಕೆಗಳಿಗೆ ಸಹಾಯ:
ವಿಕಲಚೇತನರಿಗೆ ಸಾಲವನ್ನು ಈ ಕೆಳಕಂಡ ಕಾರಣಗಳಿಗಾಗಿ ನೀಡಲಾಗುತ್ತದೆ.
a. ವ್ಯವಸಾಯ ಉತ್ಪನ್ನ ಮತ್ತು ನೀರಾವರಿ, ವ್ಯವಸಾಯ ಯಂತ್ರಗಳು, ರೇಷ್ಮೆ ಕೃಷಿ, ತೋಟಗಾರಿಕೆ ಇತ್ಯಾದಿ..
b. ಕೃಷಿ ಸಂಬಂಧಿತ ಕೀಟನಾಶಕ, ನೇಗಿಲು, ಕ್ರಿಮಿನಾಶಕಗಳನ್ನು ಕೊಳ್ಳಲು ನೀಡುತ್ತದೆ.
c. ಕೃಷಿ ಮಾರುಕಟ್ಟೆ (ವಿಕಲಚೇತನರ ಸಹಕಾರ ಸಂಘಟನೆ/ ವಿಕಲಚೇತನ ಕೃಷಿಕರ ಸಂಘಟನೆ), ಸಂಸ್ಕರಣ ಘಟಕ ಮತ್ತು ಪ್ಯಾಕಿಂಗ್ ಘಟಕಗಳನ್ನು ಹೊಂದಲು, ಕೃಷಿ ಉತ್ಪನ್ನಗಳನ್ನು ಮಾರಲು ಸಾಗಾಣಿಕೆ ವಾಹನಗಳನ್ನು ಕೊಳ್ಳಲು.
d. ವಿಕಲಚೇತನ ವ್ಯಕ್ತಿ ಅಥವಾ ವಿಕಲಚೇತನರ ಸಹಕಾರ ಸಂಘಟನೆ ವ್ಯವಸಾಯ ಉದ್ದೇಶಕ್ಕಾಗಿ ಭೂಮಿಯನ್ನು ಕೊಳ್ಳಲು.
e. ಅಭಿವೃದ್ಧಿಪಡಿಸಿದ ಕಾಳುಗಳು, ಪಾರ್ಮ್ಗಳಿಗೆ ಅಗತ್ಯವಾದ ಯಣತ್ರಗಳು ಮತ್ತು ಸಾವಯವ ಗೊಬ್ಬರ, ಕ್ರಿಮಿನಾಶಕಗಂತಹ ಚಿಲ್ಲರೆ ಅಂಗಡಿಗಳ ರೀತಿಯ ಸಣ್ಣ ಪ್ರಮಾಣದ ವ್ಯವಹಾರಗಳಿಗೆ.
ಈ ಯೋಜನೆಯ ಅಡಿಯಲ್ಲಿ ಗರಿಷ್ಟ ರೂ.5 ಲಕ್ಷಗಳ ಸಾಲವನ್ನು ಲಭ್ಯವಿರುತ್ತದೆ.
5. ವಿಕಲಚೇತನ ವ್ಯಕ್ತಿಗಳ ಸಾಧನ ಸಲಕರಣೆಗಳ ತಯಾರಿಕೆ/ಉತ್ಪಾದನೆಯನ್ನು ಪ್ರೋತ್ಸಹಕ್ಕಾಗಿ ಯೋಜನೆ:
R & D ಯೋಜನೆಯ ಅಡಿಯಲ್ಲಿ ದೇಶದ ಒಳಗೆ ಪ್ರಖ್ಯಾತವಾಗಿರುವ ಸರ್ಕಾರಿ/ಶೈಕ್ಷಣಿಕ ಸಂಸ್ಥೆಗಳು ಸಾಧನ ಸಲಕರಣೆಗಳನ್ನು ತಯಾರಿಸುವ ಸಣ್ಣ ಪ್ರಮಾಣದ ಉದ್ಯಮಗಳನ್ನು ಪ್ರಾರಂಭಿಸಲು ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಕಂಪನಿಗಳು ವಿಕಲಚೇತರನ್ನು ಉದ್ಯೋಗವನ್ನು ನೀಡಲೇ ಬೇಕು. ಗರಿಷ್ಠ ರೂ. 25 ಲಕ್ಷ ಈ ಯೋಜನೆಯ ಅಡಿಯಲ್ಲಿ ದೊರೆಯುತ್ತದೆ.
6.
ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮಗಳಿಗಾಗಿ ಸಹಾಯ:
a. ವಿಕಲಚೇತನರಲ್ಲಿ ಉದ್ಯಯಮಶೀಲತೆಯ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸೌಲಭ್ಯ ಒದಗಿಸುವ ಏಜನ್ಸಿಗಳಿಗೆ, ಪ್ರಖ್ಯಾತ ಎನ್.ಜಿ.ಓ.ಗಳಿಗೆ. RRTC
ಗಳಿಗೆ ಮತ್ತು ನೋಂದಾಯಿತ ತಾಂತ್ರಿಕ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.
ವಿಶೇಷವಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ಕೌಶಲ್ಯ ಮತ್ತು ಉದ್ಯಯಮಶೀಲತೆಯನ್ನು ಬೆಳೆಸುವ ಔದ್ಯೋಗಿಕ ತರಬೇತಿಯನ್ನು ಒಳಗೊಂಡಂತೆ, ಕಂಪ್ಯೂಟರ್ ತರಬೇತಿ ಕೇಂದ್ರಗಳನ್ನು ತೆರೆಯಲು ಸಹ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
b. ಸಾಲದ ಪ್ರಸ್ತಾವನೆಯು ತರಬೇತಿಯ ನಂತರ ವಿಕಲಚೇತನರಿಗೆ ಉದ್ಯೋಗ ಅವಕಾಶವನ್ನು/ ಸ್ವಯಂ ಉದ್ಯೋಗದ ಅವಕಾಶವನ್ನು ಸ್ಪಷ್ಟಪಡಿಸಿರಬೇಕು.
c. NHFDCಯ
ಆರ್ಥಿಕ ಸಹಾಯದೊಂದಿಗೆ ಘಟಕವನ್ನು ತೆರೆದಿರುವವರು ವಿಕಲಚೇತನ
ಉದ್ಯಮಿಗಳಿಗೆ ಮತ್ತು ವಿಕಲಚೇತನ ಕೆಲಸಗಾರರಿಗೆ ಕೌಶಲ್ಯವನ್ನು
ಹೆಚ್ಚಿಸಿಕೊಳ್ಳಲು ಸಾಲವನ್ನು ಸಹ ನೀಡುತ್ತದೆ.
7. ಬುದ್ದಿಮಾಂದ್ಯ , ಸೆರೆಬ್ರಲ್ ಪಾಲ್ಸಿ ಮತ್ತು ಸ್ವತಲ್ಲಿನರಲ್ಲಿ ಸ್ವ-ಉದ್ಯೋಗವನ್ನು ಬಳೆಸುವ ಯೋಜನೆ:
ಬುದ್ದಿಮಾಂದ್ಯ ವ್ಯಕ್ತಿಗಳು, ಸೆರೆಬ್ರಲ್ ಪಾಲ್ಸಿ ಮಕ್ಕಳು ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ ಮತ್ತು ಕಾನೂನಾತ್ಮಕ ಒಪ್ಪಂದಗಳ ಒಳಗೆ ಅವರುಗಳಿಗೆ ಪ್ರವೇಶವಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಈ ಕೆಳಗೆ ನೀಡಿರುವ ವರ್ಗದ ವ್ಯಕ್ತಿಗಳು NHFDCಯಿಂದ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
a. ಅವಲಂಭಿತ ಬುದ್ದಿಮಾಂದ್ಯ ವ್ಯಕ್ತಿಗಳ ಪೋಷಕರು
b. ಅವಲಂಭಿತ ಬುದ್ದಿಮಾಂದ್ಯ ವ್ಯಕ್ತಿಗಳ ಗಂಡ/ಹೆಂಡತಿ
NHFDCಯ ಮೂಲಕ ಈ ವಿಭಾಗದಲ್ಲಿ ಸಾಲವನ್ನು ಆಪೇಕ್ಷಿಸುವವರು, ಬುದ್ದಿಮಾಂದ್ಯರೆ ಸ್ವತಃ ಉದ್ಯೋಗ ಮಾಡುವುದನ್ನು ಪೋತ್ಸಾಹಿಸಬೇಕು. ಯೋಜನೆಯಲ್ಲಿ ಫಲಾನುಭವಿಗಳ ನೇರ ಭಾಗಿಯಾಗುವಿಕೆ ಮತ್ತು ಪಾಲ್ಗೂಳುವಿಕೆಯ ಇರುವಿಕೆಯ ಆಧಾರದ ಮೇಲೆ ಯೋಜನೆಯನ್ನು ಗುರುತಿಸಬೇಕು.
1. ಸಾಲವನ್ನು ನೀಡುವ ಕ್ಷೇತ್ರಗಳು:
2. ಅಂಗಡಿಗಳು
3. ಜೆರಾಕ್ಸ್ ಕೇಂದ್ರ
4. ವರ್ಕ್ಶಾಪ್ / ಕಾರ್ಯಾಗಾರಗಳು
5. ಹೋಲಿಗೆ ಘಟಕ
6. ಲಕೋಟೆಗಳನ್ನು ಸಿದ್ಧ ಪಡಿಸುವುದು
7. DTP
ಕೇಂದ್ರ
8. ಹಪ್ಪಳ, ಉಪ್ಪಿನಕಾಯಿಗಳನ್ನು ಸಿದ್ದಪಡಿಸುವುದು
9. ಸ್ಕ್ರೀನ್ ಪ್ರಿಂಟ್
10. ಜಾಮ್ ಮುಂತಾದವುಗಳ ಗೃಹಾಧಾರಿತ ಘಟಕಗಳು
11. ಕೋಳಿ ಸಾಕಣಿಕೆ
12. ಬೇಕರಿ
13. ಡೈರಿ
14. ಕೈಮಗ್ಗ ಘಟಕ
15. ತೋಟಗಾರಿಕೆ
16. ಬ್ಲಾಕ್, ಬಟ್ಟೆಗಳ ಮೇಲೆ ಮುದ್ರಣ
ಈ ಯೋಜನೆಯ ಅಡಿಯಲ್ಲಿ ಗರಿಷ್ಠ ರೂ.2.50 ಲಕ್ಷ ಗಳ ಸಾಲ ದೊರೆಯುತ್ತದೆ.
ಮುಂದುವರೆಯುವುದು…
Roulette Casino Site - Choegocasino
ReplyDeleteRoulette casino site review. Welcome to the best roulette 우리 카지노 총판 casino site. We offer various casino 온라인 라이브 카지노 games to 해외 카지노 사이트 new players. Enjoy roulette casino 카지노사이트 no 우리 카지노 총판 deposit bonuses.